ಬೆಂಗಳೂರು: ವಿಧಾನಸಭೆಯಲ್ಲಿ ಧನವಿನಿಯೋಗ ವಿಧೇಯಕ ಅಂಗೀಕಾರವಾದ ನಂತರ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗ ನನ್ನ ಸರ್ವಾನುಮತದಿಂದ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ. 14 ತಿಂಗಳಿನಿಂದ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸೋಮವಾರ ವಿಧಾನಸಭೆ ಕಲಾಪದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸಮತ ಪ್ರಸ್ತಾಪವನ್ನು ಮಂಡಿಸಿದರು. ಧ್ವನಿಮತದ ಮೂಲಕ ಬಿಎಸ್ವೈ ವಿಶ್ವಾಸ ಮತವನ್ನು ಗೆದ್ದರು.
ಆನಂತರ ಸಿಎಂ ಧನವಿನಿಯೋಗ ವಿಧೇಯಕವನ್ನು ಮಂಡಿಸಿದರು. ಹೆಚ್ಚಿನ ಚರ್ಚೆ ಇಲ್ಲದೆ ಆ ವಿಧೇಯಕವು ಅಂಗೀಕಾರಗೊಂಡಿತು. ಇದಾದ ಬಳಿಕ ವಿದಾಯ ಭಾಷಣ ಆರಂಭಿಸಿದ ರಮೇಶ್ ಕುಮಾರ್ ತಾವು ರಾಜೀನಾಮೆ ನೀಡುವ ತೀರ್ಮಾನವನ್ನು ಪ್ರಕಟಿಸಿದರು.
ನನ್ನ ಸಿಬ್ಬಂದಿಗಳಿಗೆ, ನನ್ನ ಎಲ್ಲಾ ಕಾರ್ಯದರ್ಶಿಗಳಿಗೆ, ಡಿ ಗ್ರೂಪ್ ನೌಕರರಿಗೆ, ಕೃತಜ್ಞತೆಯನ್ನು ತಿಳಿಸುತ್ತಾ ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಾಗ, ಸೋನಿಯಾಗಾಂಧಿಯವರು ಕರೆಮಾಡಿ ತಾವು ಸ್ಪೀಕರ್ ಆಗುವಂತೆ ಸೂಚಿಸಿದ್ದರು. ಹೀಗಾಗಿ ಆ ಸ್ಥಾನವನ್ನು ಅಲಂಕರಿಸಿದೆ. ಅವರಿಗೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಮೀಡಿಯಾದವರಿಗೆ, ಒಂದು ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಬದುಕಿನಲ್ಲಿ ಇರುವವ ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಮಾಡುವ ಮೊದಲು, ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ. ಅಂತಹ ಕೆಲಸವನ್ನು ಮಾಡಬಾರದು ಎಂದು ರಮೇಶ್ ಕುಮಾರ್ ಮನವಿ ಮಾಡಿಕೊಂಡರು.
ಹೈದರಾಬಾದ್ : ಕಾರು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ತೆಲುಗು ನಟ ಭರತ್ ಕಾಂತ್ ಸಾವು ಹೈದರಾಬಾದ್…
ನೀವು ಇತಿಹಾಸ ನಿರ್ಮಿಸಿದ್ದೀರಿ: ತಮಿಳುನಾಡು ನೂತನ ಸಿಎಂ ವಿಜಯ್'ಗೆ ಸಿದ್ದರಾಮಯ್ಯ ವಿಶೇಷ ಅಭಿನಂದನೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ…
ಕಾರವಾರದ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆ : 22 ಮೀನುಗಾರರ ರಕ್ಷಣೆ ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ…
ಯುವತಿ ವಿಚಾರಕ್ಕೆ ಕಿರುಕುಳ ಆರೋಪ : ಆಡಿಯೋ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ ಹಾಸನ: ಯುವತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಾರೆ…
ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ : ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ನವದೆಹಲಿ: ರಾಜಿ ಮಾಡಿಕೊಂಡ…
ಬೆಳ್ತಂಗಡಿ: ಕ್ಯಾಂಟೀನ್ ಹೆಸರಲ್ಲಿ ಅಕ್ರಮ ವೇಶ್ಯಾವಟಿಕೆ ದಂಧೆ ; ಪೊಲೀಸರ ದಾಳಿ - ಮೂವರ ಬಂಧನ ಬೆಳ್ತಂಗಡಿ,: ಕ್ಯಾಂಟೀನ್ ಹೆಸರಲ್ಲಿ…