Featured

ಸ್ಯಾಂಡಲ್ ವುಡ್ ನಟ ಪೃಥ್ವಿ ಅಂಬರ್ ಕೈ ಹಿಡಿಯಲಿದ್ದಾರೆ ಈ ಹುಡುಗಿ..?

ಮಂಗಳೂರು: ಕೋಸ್ಟಲ್’ವುಡ್ ನ ಮೋಸ್ಟ್ ಹ್ಯಾಂಡ್ಸ್ ಸಮ್ ಬಾಯ್ “ಪ್ರಥ್ವಿ ಅಂಬರ್‍” ಅವರು ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ . ಹೌದು, ಎಷ್ಟೋ ಹುಡುಗಿಯರ ಕ್ರಶ್ ಆಗಿರುವ ತುಳುವ ರತ್ನ “ಪ್ರಥ್ವಿ ಅಂಬರ್ ” ಇದೀಗ ರಿಯಲ್ ಲೈಫ್ ನಲ್ಲಿ ಒಬ್ಬಾಕೆ ಹೃದಯ ಕದ್ದು ಮದುವೆಗೆ ಸಜ್ಜಾಗಿದ್ದಾರೆ.

10 ವರ್ಷಗಳಿಂದ ಹಿಂದೆ ಡ್ಯಾನ್ಸ್ ಶೋ ಒಂದರಲ್ಲಿ ಪಾರುಲ್ ಶುಕ್ಲಾ ಜೊತೆ ಆಕಸ್ಮಿಕವಾಗಿ ಮಾತನಾಡಿ, ಪರಿಚಯ ಮಾಡಿಕೊಂಡ ಪೃಥ್ವಿ ಅಂಬರ್, ಮಾತು, ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯ ದಡ ಸೇರಿದೆ. ಮೂಲತಃ ಉತ್ತರ ಭಾರತದ ಪಾರುಲ್ ಶುಕ್ಲಾ, ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಪಡೆದು ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರವೇ ಇವರಿಬ್ಬರು ಸತಿ ಪತಿಗಳಾಗಲಿದ್ದು ‘ಪ್ರಥ್ವಿ – ಪಾರುಲ್ ಪ್ರೇಮ ಕಾವ್ಯ’ವನ್ನು ಪ್ರಥ್ವಿ ಮನೆಯಲ್ಲಿ ತಿಳಿಸಿದ್ದು ಪಾರುಲ್ ಅವರೇ ಅನ್ನೋದು ವಿಶೇಷ

ಸದ್ಯ ಕೋಸ್ಟಲ್‌ವುಡ್‌ನ ಬಹು ಬೇಡಿಕೆಯ ನಟ ಆಗಿರುವ ಪೃಥ್ವಿ ಅಂಬರ್‍, ತುಳು ಭಾಷೆಯ ಬರ್ಕೆ ಸಿನಿಮಾದ ಬಣ್ಣದ ಜಗತ್ತಿಗೆ ಕಾಲಿಟ್ಟರು. ಈ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಜನಪ್ರೀಯರಾದ ಅವರು, 2016ರಲ್ಲಿ ಬಿಡುಗಡೆಯಾದ ‘ಪಿಲಿಬೈಲ್‌ ಯಮುನಕ್ಕ’ ಚಿತ್ರವು ದೊಡ್ಡ ಮಟ್ಟದ ಯಶಸ್ಸನ್ನು ತನ್ನದಾಗಿಸಿಕೊಂಡು ಎಲ್ಲೆಡೆ ಮನೆಮಾತಾದರು. ಇವರ ಅಭಿನಯದ ತುಳು ಚಿತ್ರ ಲಾಸ್ಟ್‌ಬೆಂಚ್‌ ಹಾಗೂ ಇಂಗ್ಲೀಷ್, ಮತ್ತು ಕನ್ನಡ ಸಿನಿಮಾ ಪ್ರವೇಶ, ದಿಯಾ, ಇನ್ನಷ್ಟೇ ತೆರೆ ಕಾಣಬೇಕಾಗಿದೆ. ಕೇವಲ ನಟನೆಯಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಆರ್‍.ಜೆ. ಹಾಗೂ ವಿ.ಜೆ. ಆಗಿ ಮಿಂಚಿರುವ ನಾಗರಾಜ್ ಅಲಿಯಾಸ್ ಪೃಥ್ವಿ ಅಂಬರ್‍ ಡ್ಯಾನ್ಸ್ ರಿಯಾಲಿಟಿ ಶೋ, ಧಾರವಾಹಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಹುಮುಖ ಪ್ರತಿಭೆಯಾಗಿದ್ದಾರೆ.

 

Vishwa News 24

Recent Posts

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

23 hours ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

23 hours ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

24 hours ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

1 day ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

1 day ago

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ – vishwanews24

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…

1 day ago