ಮಂಗಳೂರು: ಕೋಸ್ಟಲ್’ವುಡ್ ನ ಮೋಸ್ಟ್ ಹ್ಯಾಂಡ್ಸ್ ಸಮ್ ಬಾಯ್ “ಪ್ರಥ್ವಿ ಅಂಬರ್” ಅವರು ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ . ಹೌದು, ಎಷ್ಟೋ ಹುಡುಗಿಯರ ಕ್ರಶ್ ಆಗಿರುವ ತುಳುವ ರತ್ನ “ಪ್ರಥ್ವಿ ಅಂಬರ್ ” ಇದೀಗ ರಿಯಲ್ ಲೈಫ್ ನಲ್ಲಿ ಒಬ್ಬಾಕೆ ಹೃದಯ ಕದ್ದು ಮದುವೆಗೆ ಸಜ್ಜಾಗಿದ್ದಾರೆ.
10 ವರ್ಷಗಳಿಂದ ಹಿಂದೆ ಡ್ಯಾನ್ಸ್ ಶೋ ಒಂದರಲ್ಲಿ ಪಾರುಲ್ ಶುಕ್ಲಾ ಜೊತೆ ಆಕಸ್ಮಿಕವಾಗಿ ಮಾತನಾಡಿ, ಪರಿಚಯ ಮಾಡಿಕೊಂಡ ಪೃಥ್ವಿ ಅಂಬರ್, ಮಾತು, ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯ ದಡ ಸೇರಿದೆ. ಮೂಲತಃ ಉತ್ತರ ಭಾರತದ ಪಾರುಲ್ ಶುಕ್ಲಾ, ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಪಡೆದು ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರವೇ ಇವರಿಬ್ಬರು ಸತಿ ಪತಿಗಳಾಗಲಿದ್ದು ‘ಪ್ರಥ್ವಿ – ಪಾರುಲ್ ಪ್ರೇಮ ಕಾವ್ಯ’ವನ್ನು ಪ್ರಥ್ವಿ ಮನೆಯಲ್ಲಿ ತಿಳಿಸಿದ್ದು ಪಾರುಲ್ ಅವರೇ ಅನ್ನೋದು ವಿಶೇಷ
ಸದ್ಯ ಕೋಸ್ಟಲ್‌ವುಡ್‌ನ ಬಹು ಬೇಡಿಕೆಯ ನಟ ಆಗಿರುವ ಪೃಥ್ವಿ ಅಂಬರ್, ತುಳು ಭಾಷೆಯ ಬರ್ಕೆ ಸಿನಿಮಾದ ಬಣ್ಣದ ಜಗತ್ತಿಗೆ ಕಾಲಿಟ್ಟರು. ಈ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಜನಪ್ರೀಯರಾದ ಅವರು, 2016ರಲ್ಲಿ ಬಿಡುಗಡೆಯಾದ ‘ಪಿಲಿಬೈಲ್ ಯಮುನಕ್ಕ’ ಚಿತ್ರವು ದೊಡ್ಡ ಮಟ್ಟದ ಯಶಸ್ಸನ್ನು ತನ್ನದಾಗಿಸಿಕೊಂಡು ಎಲ್ಲೆಡೆ ಮನೆಮಾತಾದರು. ಇವರ ಅಭಿನಯದ ತುಳು ಚಿತ್ರ ಲಾಸ್ಟ್‌ಬೆಂಚ್ ಹಾಗೂ ಇಂಗ್ಲೀಷ್, ಮತ್ತು ಕನ್ನಡ ಸಿನಿಮಾ ಪ್ರವೇಶ, ದಿಯಾ, ಇನ್ನಷ್ಟೇ ತೆರೆ ಕಾಣಬೇಕಾಗಿದೆ. ಕೇವಲ ನಟನೆಯಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಆರ್.ಜೆ. ಹಾಗೂ ವಿ.ಜೆ. ಆಗಿ ಮಿಂಚಿರುವ ನಾಗರಾಜ್ ಅಲಿಯಾಸ್ ಪೃಥ್ವಿ ಅಂಬರ್ ಡ್ಯಾನ್ಸ್ ರಿಯಾಲಿಟಿ ಶೋ, ಧಾರವಾಹಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಹುಮುಖ ಪ್ರತಿಭೆಯಾಗಿದ್ದಾರೆ.
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…