Featured

ಸ್ವಂತ ಅಕ್ಕನ ಗಂಡನನ್ನೇ ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಕೊರಿಯರ್‌ ಬಾಯ್‌ ಜೊತೆ ಎಸ್ಕೇಪ್‌ – Vishwanews24

ಸ್ವಂತ ತನ್ನ ಅಕ್ಕನ ಗಂಡನನ್ನೇ ಮದುವೆಯಾಗಿದ್ದ ಮಹಿಳೆ

ಕೊರಿಯರ್‌ ಬಾಯ್‌ ಜೊತೆ ಪ್ರೇಮದಾಟದಲ್ಲಿ ಮುಳಗಿ ಆತನೊಂದಿಗೆ ಮದುವೆಯಾಗಿ ಎಸ್ಕೇಪ್‌

ತಮ್ಮನ್ನು ತಮ್ಮ ಪಾಡಿಗೆ ಬದುಕಲು ಬಿಡಿ ಎಂದು ಪೊಲೀಸರು ಹಾಗೂ ತಂದೆ ತಾಯಿ ಮುಂದೆ ಹೈ ಡ್ರಾಮ

ಮಗಳ ಪ್ರೇಮ ಪುರಾಣಕ್ಕೆ ಪೋಷಕರು ಹೈರಾಣ

ಚಿಕ್ಕಬಳ್ಳಾಪುರ :ತಮ್ಮ ಮಗಳ ಪ್ರೇಮ ಪುರಾಣಕ್ಕೆ ಪೋಷಕರೇ ಹೈರಾಣಾಗಿ ತಮ್ಮ ಮಗಳನ್ನು ತಮಗೆ ಒಪ್ಪಿಸುವಂತೆ ಪೊಲೀಸ್‌ ಠಾಣೆ ಎದುರು ಪರಿ ಪರಿಯಾಗಿ ಕೇಳಿದರೂ ಮಗಳು ಮಾತ್ರ ಜಪ್ಪಯ್ಯ ಅಂದರೂ ನಾನು ಬರಲ್ಲ ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಹೇಳಿ ಪ್ರೀತಿಸಿದಾತನ ಜೊತೆ ಹೊರಟಳು.

ಸ್ವಂತ ತನ್ನ ಅಕ್ಕನ ಗಂಡನನ್ನೇ ಪ್ರೀತಿಯ ಬಲೆಗೆ ಬಿಳೀಸಿ ಮದುವೆಯಾಗಿದ್ದ ಮಹಿಳೆ ಕೆಲ ದಿನಗಳ ಬಳಿಕ ಕೊರಿಯರ್‌ ಬಾಯ್‌ ಜೊತೆ ಪ್ರೇಮದಾಟದಲ್ಲಿ ಮುಳಗಿ ಆತನನ್ನೂ ಮದುವೆಯಾಗಿ ಇಬ್ಬರು ಗಂಡಂದಿರ ಜೊತೆಗೆ ಡಬಲ್‌ ಗೇಮ್‌ ಆಡುತ್ತಿದ್ದ ಪ್ರಸಂಗ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.

ಪ್ರಕರಣದ ವಿವರ:

ಸದ್ಯ ಇಬ್ಬರ ಗಂಡರ ಮಧ್ಯೆ ಡಬಲ್‌ ಗೇಮ್‌ ಆಡುತ್ತಿರುವ ಮಹಿಳೆ ದಿವ್ಯಾ ಬಿ.ಎಡ್…. ಎಂ.ಎಸ್ಸಿ ಪದವೀಧರೆ, ಕೈ ತುಂಬ ಸಂಬಳ ಬರುತ್ತಿದ್ದು. ಮುಳಬಾಗಿಲಿನ ಡಿ.ಸಿ.ಸಿ ಬ್ಯಾಂಕ್‌ ನಲ್ಲಿ ಉದ್ಯೋಗಿ, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಣಿಗಾನಹಳ್ಳಿ ನಿವಾಸಿ ಜಯಮ್ಮ ಹಾಗೂ ವಿ ನಾರಾಯಣಪ್ಪ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳು. ಅದರಲ್ಲಿ ದೊಡ್ಡ ಮಗಳು ಮಂಜುಳಾಳನ್ನು ಆಂಧ್ರದ ವಿ ಕೋಟೆ ಗ್ರಾಮದ ಸುಬ್ರಮಣ್ಯಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.

ನಾಳೆಯಿಂದ ಹಾಲು, ಮೊಸರು ದರ 3 ರೂ. ಹೆಚ್ಚಳ – Vishwanews24

ಮಂಜುಳಾರ ಕೊನೆಯ ತಂಗಿಯಾಗಿದ್ದ ದಿವ್ಯಾ ಸ್ವತಃ ತನ್ನ ಅಕ್ಕನ ಗಂಡ ಬಾವ ಸುಬ್ರಮಣ್ಯ ನನ್ನು ಪ್ರೀತಿಸಿದಳು. ಕಾಡಿ ಬೇಡಿ ಅತ್ತು ಕರೆದು ಭಾವನನ್ನೇ ಮದುವೆ ಮಾಡಿಕೊಂಡಿದ್ದಳು. ಆದರೆ ಮದುವೆಯಾಗಿ ಕೇವಲ ಹತ್ತು ತಿಂಗಳಲ್ಲೇಪರಿಚಯಸ್ಥನಾಗಿದ್ದ ಕೊರಿಯರ್‌ ಬಾಯ್‌ ಚಂದ್ರಶೇಖರ್‌ ಎಂಬುವರನ್ನು ಪ್ರೀತಿಸತೊಡಗಿದಳು. ಮನೆಯವರ ವಿರೋಧದ ನಡುವೆ ಮದುವೆಯೂ ಮಾಡಿಕೊಂಡಳು. ಇದನ್ನ ಅತ ಆಕೆಯ ಪೋಷಕರು ದಿವ್ಯಾಳನ್ನು ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಡಿ.ಸಿ.ಸಿ ಬ್ಯಾಂಕ್‌ ಗೆ ವರ್ಗಾವಣೆ ಮಾಡಿಸಿದ್ದರು.

ಅಲ್ಲಿಯೂ ದಿವ್ಯ ಕೊರಿಯರ್‌ ಬಾಯ್‌ ಜೊತೆ ತನ್ನ ಪ್ರೇಮ ಪುರಾಣ ಮುಂದುವರೆಸಿದ್ದಾರೆ. ದಿವ್ಯಾ-ಚಂದ್ರಶೇಖರ್‌ ಪ್ರೇಮಕ್ಕೆ, ಮರು ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಇದರಿಂದ ಆಕೆಯ ಪೋಷಕರು ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಬಂಟ್ವಾಳ: ದುಷ್ಕರ್ಮಿಗಳಿಂದ ಆಟೋ ಚಾಲಕನ ಮೇಲೆ ತಲವಾರು ದಾಳಿ – Vishwanews24

ಪೊಲೀಸರು ಇಬ್ಬರನ್ನೂ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಜೂನ್‌ 10ರಂದೇ ಮದುವೆ ಆಗಿದ್ದು, ಅಗಸ್ಟ… 10ರಂದು ಬಂಗಾರಪೇಟೆಯಲ್ಲಿ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದ ತಮ್ಮನ್ನು ತಮ್ಮ ಪಾಡಿಗೆ ಬದುಕಲು ಬಿಡಿ ಎಂದು ಪೊಲೀಸರು ಹಾಗೂ ತಂದೆ ತಾಯಿಯ ಎದುರು ಗೋಗರೆದಿದ್ದಾರೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್‌ ಠಾಣೆ ಮುಂದೆ ನಮ್ಮ ಮಗಳನ್ನು ನಮ್ಮ ಜೊತೆ ಕಳುಹಿಸಿ ಕೊಡಿ ಎಂದು ದಿವ್ಯಾಳ ವೃದ್ದ ತಂದೆ ತಾಯಿ, ಅತ್ತು ಕರೆದು ಗೋಳಾಡಿದ್ದಾರೆ.

 

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

2 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

2 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago