ಉಡುಪಿ

ಸ್ವಚ್ಛತೆಯಲ್ಲಿ ಕಾಪುವಿಗೆ ಕೀರ್ತಿ ತಂದ ಪುರಸಭೆ ಮುಖ್ಯಾಧಿಕಾರಿ ರಾಯಪ್ಪನವರಿಗೆ ಚುನಾವಣೆ ನೆಪದಲ್ಲಿ ವರ್ಗಾವಣೆ, ಕಾಪು ನಾಗರಿಕ ಸಮಾಜ ಆಕ್ರೋಶ

ಕಾಪು :  ಕಾಪು ಪುರಸಭೆ ಅಂದ ತಕ್ಷಣ ಪಕ್ಕನೆ ಹೆಸರು ಕೇಳಿಬರುವುದು ಮುಖ್ಯಾಧಿಕಾರಿಯಾಗಿದ್ದ ರಾಯಪ್ಪನವರದು. ನಿಷ್ಠಾವಂತ, ಭ್ರಷ್ಟಾಚಾರ ರಹಿತ ಅಧಿಕಾರಿ ಅಂತಾನೆ ಹೆಸರು ಪಡೆದಿದ್ದ ರಾಯಪ್ಪನವರಿಗೆ ಚುನಾವಣೆ ನೆಪದಲ್ಲಿ ಮೂಡಬಿದ್ರೆ ಪುರಸಭೆಗೆ ವರ್ಗಾವಣೆಯಾಗಿದೆ.

ಸ್ವಚ್ಛ ಕಾಪುವಿಗೆ ಶ್ರಮಿಸಿದ್ಧ ಅಧಿಕಾರಿಯ ವರ್ಗಾವಣೆ ಕಾಪುವಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಕೆಲಸ ಅಂದರೆ ಅಧಿಕಾರಿಗಳು ಬಂದೇನೋ ಹೋದೆನೋ ಅನ್ನುವ ಸ್ಥಿತಿ ಇರುವಾಗ ಅಂತಹ ಅಧಿಕಾರಿ ವರ್ಗಕ್ಕೆ ಇವರು ತದ್ವಿರುದ್ಧ.ಬೆಳಗ್ಗೆ ಆರು ಗಂಟೆಗೆ ಹಾಜರಿರುತ್ತಿದ್ದ ಮುಖ್ಯಾಧಿಕಾರಿ ಗೂಡಂಗಡಿ, ಹೋಟೆಲ್, ಬಾರ್ ಮಾಲಕರಿಗೆ ಮತ್ತು ಅಲ್ಲಲ್ಲಿ ಪಾನ್ ತಿಂದು ಉಗಿಯುವ ವಲಸೆ ಕಾರ್ಮಿಕರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಸ್ವಚ್ಛತೆಯ ಬಗೆಯಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಕಾರ್ಯ ನಿರ್ವಹಿಸುತ್ತಿದ್ದ ಕಡಕ್ ಅಧಿಕಾರಿ ರಾಯಪ್ಪ. ಮನ ಬಂದಂತೆ ಅಲ್ಲಲ್ಲಿ ನಡೆಯುತ್ತಿದ್ದ ಶುಕ್ರವಾರ ಸಂತೆ ವ್ಯಾಪಾರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲಬೇಕಾಗಿದೆ,ನಗರದಲ್ಲಿ ಗುಡ್ಡೆ ಬೀಳುತ್ತಿದ್ದ ಕಸದ ರಾಶಿಗೆ ಮುಕ್ತಿ ನೀಡಿದು ್ದ ಮತ್ತು ಮನೆಮನೆಗೆ ಗಾಡಿ ಕಳುಹಿಸಿ ಪ್ಲಾಸ್ಟಿಕ್ ಕಸ ಮತ್ತು ಹಸಿ ಕಸವನ್ನು ವಿಂಗಡಿಸಿ ತ್ಯಾಜ್ಯ ನಿರ್ವಹಣೆಯ ಮಾಡುವ ಕಾರ್ಯ ನಾಗರಿಕರಿಂದ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ ಕಾಪುವಿಗೆ ಹೆಸರು ತಂದುಕೊಟ್ಟಿತ್ತು.ಅಂತಹ ರಾಯಪ್ಪನವರನ್ನ ಬಾಯಿ ತುಂಬಾ ಹೊಗಲಿ ಶ್ಲಾಘಿಸಿದ್ಧ ಅಧಿಕಾರಿಗೆ ಚುನಾವಣಾ ನೆಪದಲ್ಲಿ ವರ್ಗಾವಣೆಯಾಗಿರುವುದು ನಾಗರಿಕರ ಆಕ್ರೋಶಕ್ಕೆ ಮತ್ತು ಬೇಸರಕ್ಕೆ ಕಾರಣವಾಗಿದೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago