ಕಾಪು : ಕಾಪು ಪುರಸಭೆ ಅಂದ ತಕ್ಷಣ ಪಕ್ಕನೆ ಹೆಸರು ಕೇಳಿಬರುವುದು ಮುಖ್ಯಾಧಿಕಾರಿಯಾಗಿದ್ದ ರಾಯಪ್ಪನವರದು. ನಿಷ್ಠಾವಂತ, ಭ್ರಷ್ಟಾಚಾರ ರಹಿತ ಅಧಿಕಾರಿ ಅಂತಾನೆ ಹೆಸರು ಪಡೆದಿದ್ದ ರಾಯಪ್ಪನವರಿಗೆ ಚುನಾವಣೆ ನೆಪದಲ್ಲಿ ಮೂಡಬಿದ್ರೆ ಪುರಸಭೆಗೆ ವರ್ಗಾವಣೆಯಾಗಿದೆ.
ಸ್ವಚ್ಛ ಕಾಪುವಿಗೆ ಶ್ರಮಿಸಿದ್ಧ ಅಧಿಕಾರಿಯ ವರ್ಗಾವಣೆ ಕಾಪುವಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಕೆಲಸ ಅಂದರೆ ಅಧಿಕಾರಿಗಳು ಬಂದೇನೋ ಹೋದೆನೋ ಅನ್ನುವ ಸ್ಥಿತಿ ಇರುವಾಗ ಅಂತಹ ಅಧಿಕಾರಿ ವರ್ಗಕ್ಕೆ ಇವರು ತದ್ವಿರುದ್ಧ.ಬೆಳಗ್ಗೆ ಆರು ಗಂಟೆಗೆ ಹಾಜರಿರುತ್ತಿದ್ದ ಮುಖ್ಯಾಧಿಕಾರಿ ಗೂಡಂಗಡಿ, ಹೋಟೆಲ್, ಬಾರ್ ಮಾಲಕರಿಗೆ ಮತ್ತು ಅಲ್ಲಲ್ಲಿ ಪಾನ್ ತಿಂದು ಉಗಿಯುವ ವಲಸೆ ಕಾರ್ಮಿಕರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಸ್ವಚ್ಛತೆಯ ಬಗೆಯಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಕಾರ್ಯ ನಿರ್ವಹಿಸುತ್ತಿದ್ದ ಕಡಕ್ ಅಧಿಕಾರಿ ರಾಯಪ್ಪ. ಮನ ಬಂದಂತೆ ಅಲ್ಲಲ್ಲಿ ನಡೆಯುತ್ತಿದ್ದ ಶುಕ್ರವಾರ ಸಂತೆ ವ್ಯಾಪಾರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲಬೇಕಾಗಿದೆ,ನಗರದಲ್ಲಿ ಗುಡ್ಡೆ ಬೀಳುತ್ತಿದ್ದ ಕಸದ ರಾಶಿಗೆ ಮುಕ್ತಿ ನೀಡಿದು ್ದ ಮತ್ತು ಮನೆಮನೆಗೆ ಗಾಡಿ ಕಳುಹಿಸಿ ಪ್ಲಾಸ್ಟಿಕ್ ಕಸ ಮತ್ತು ಹಸಿ ಕಸವನ್ನು ವಿಂಗಡಿಸಿ ತ್ಯಾಜ್ಯ ನಿರ್ವಹಣೆಯ ಮಾಡುವ ಕಾರ್ಯ ನಾಗರಿಕರಿಂದ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ ಕಾಪುವಿಗೆ ಹೆಸರು ತಂದುಕೊಟ್ಟಿತ್ತು.ಅಂತಹ ರಾಯಪ್ಪನವರನ್ನ ಬಾಯಿ ತುಂಬಾ ಹೊಗಲಿ ಶ್ಲಾಘಿಸಿದ್ಧ ಅಧಿಕಾರಿಗೆ ಚುನಾವಣಾ ನೆಪದಲ್ಲಿ ವರ್ಗಾವಣೆಯಾಗಿರುವುದು ನಾಗರಿಕರ ಆಕ್ರೋಶಕ್ಕೆ ಮತ್ತು ಬೇಸರಕ್ಕೆ ಕಾರಣವಾಗಿದೆ.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…