Featured

ಸ್ವತಂತ್ರ ಭಾರತದ ಅತ್ಯಂತ ದುರ್ಬಲ, ಅಸಮರ್ಥ ಗೃಹ ಸಚಿವ ಅಮಿತ್ ಶಾ : ಪ್ರಿಯಾಂಕ್ ಖರ್ಗೆ ಆಕ್ರೋಶ – vishwanews24

ಸ್ವತಂತ್ರ ಭಾರತದ ಅತ್ಯಂತ ದುರ್ಬಲ, ಅಸಮರ್ಥ ಗೃಹ ಸಚಿವ ಅಮಿತ್ ಶಾ : ಪ್ರಿಯಾಂಕ್ ಖರ್ಗೆ ಆಕ್ರೋಶ

ಬೆಂಗಳೂರು : ಸ್ವತಂತ್ರ ಭಾರತದ ಅತ್ಯಂತ ದುರ್ಬಲ, ಅಸಮರ್ಥ ಗೃಹ ಸಚಿವರು ಯಾರಾದರೂ ಇದ್ರೆ ಅದು ಅಮಿತ್ ಶಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪುಲ್ವಾಮಾ ಆಯ್ತು, ಮಣಿಪುರ ಆಯ್ತು, ಪಹಲ್ಗಾಮ್, ಇದೀಗ ದೆಹಲಿ ಹೀಗೆ ಸಾಕಷ್ಟು ಆಗಿದೆ. ಚುನಾವಣಾ ಭಾಷಣದಲ್ಲಿ ಬಾಂಗ್ಲಾದೇಶದವರು ಒಳಗೆ ಬರ್ತಾರೆ ಅಂತಾರೆ, ಆದರೆ ಈಗ ಆಡಳಿತ ನಡೆಸುತ್ತಿರುವವರು ಯಾರು? ಇದಕ್ಕೆಲ್ಲ ಯಾರು ಹೊಣೆಗಾರಿಕೆ? ಪ್ರಧಾನಿ ಮೋದಿಯವರು ಯಾಕೆ ಅಮಿತ್ ಶಾ ಅವರಿಗೆ ಹೆದರುತ್ತಿದ್ದಾರೆ. ನಮ್ಮ ಗುಟ್ಟು ಹೊರಗೆ ಬರುತ್ತೆ ಅಂತಾನಾ? ಚಪ್ಪನ್ ಇಂಚ್ ಎಲ್ಲಿ ಹೋಯ್ತು? ಬೇರೆ ದೇಶದಲ್ಲಿ ಆಗಿದ್ದರೆ ಇಷ್ಟೊತ್ತಿಗೆ ಗೃಹ ಸಚಿವರು ರಾಜೀನಾಮೆ ಕೊಡುತ್ತಿದ್ದರು. ನಿಮ್ಮ ಆರ್‌ಎಸ್‌ಎಸ್‌ನವರನ್ನು ಗಡಿಗೆ ಕಳುಹಿಸಿ” ಎಂದು ವಾಗ್ದಾಳಿ ನಡೆಸಿದರು.

“ಇನ್ನೂ ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು? ಇದರ ಹೊಣೆಗಾರಿಕೆ ಯಾರು? ನಾವು ವಿರೋಧ ಪಕ್ಷನಾ? ಮಾತೆತ್ತಿದ್ದರೆ ಅಭಿನವ ಸರ್ದಾರ್ ಪಟೇಲ್ ಎನ್ನುತ್ತಾರೆ, 56 ಇಂಚಿನ ಎದೆ ಎನ್ನುತ್ತಾರೆ. ಕಳೆದ 10 ವರ್ಷದ್ದನ್ನ ಲೆಕ್ಕ ತೆಗೆದುಕೊಳ್ಳಬೇಕು, ಇವರು ಮೊದಲು ರಾಜೀನಾಮೆ ಕೊಡಲಿ ಆಮೇಲೆ ಮಾತಾಡೋಣ ಇವರಿಗೆ ಏನೂ ಪ್ರಶ್ನೆ ಮಾಡೋಹಾಗಿಲ್ವಾ? ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಅಕೌಂಟೆಬಿಲಿಡಿ ಇರೋದಾ? ಕೇಂದ್ರ ಸರ್ಕಾರಕ್ಕೆ ಇಲ್ಲವಾ?” ಎಂದು ಪ್ರಶ್ನಿಸಿದ್ದಾರೆ.

“ಈಗ ಅಭಿನವ ಸರ್ದಾರ ಪಟೇಲ್ ಎಲ್ಲಿ ಮಾಯವಾದ್ರು? ಈಗ ಆರ್‌ಎಸ್‌ಎಸ್‌ನವರು ಎಲ್ಲೋದ್ರು? ಈ ಸಂದರ್ಭದಲ್ಲಿ ಏನು ಹೇಳ್ತಾರೆ? ದೊಡ್ಡ ದೊಡ್ಡ ಮಾತಾಡ್ತಾರಲ್ಲ ಇದೆಲ್ಲ ಸೋಷಿಯಲ್ ಮೀಡಿಯಾಗೆ ಮಾತ್ರ ಸೀಮಿತ” ಎಂದು ಕಿಡಿಕಾರಿದರು.

Vishwa News 24

Recent Posts

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…

1 hour ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು – vishwanews24

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…

3 hours ago

ಹಜ್ ಯಾತ್ರೆ – 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ – vishwanews24

ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…

4 hours ago

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  – vishwanews24

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…

4 hours ago

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ – vishwanews24

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…

4 hours ago

ಬ್ರಹ್ಮಾವರ : ಭೀಕರ ರಸ್ತೆ ಅಪಘಾತ ; ಖ್ಯಾತ ಹುಲಿ ವೇಷ ಕಲಾವಿದ ಸಾವು – vishwanews24

ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…

5 hours ago