Featured

ಸ್ವರ್ಣ ಗದ್ದುಗೆ ಏರಿದ ಕಾಪು ಶ್ರೀ ಹೊಸ ಮಾರಿಯಮ್ಮ – vishwanews24

ಸ್ವರ್ಣ ಗದ್ದುಗೆ ಏರಿದ ಶ್ರೀ ಚಕ್ರ, ಸ್ವರ್ಣ ಸಹಿತ 9 ಶಿಖರಗಳ ಸ್ಥಾಪನೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತ್ರಿಕಾಲ ಚಕ್ರಪೂಜೆ ಸಂಪನ್ನ

ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪ್ರಧಾನ ತಂತ್ರಿ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವ ಮತ್ತು ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಹಾಗೂ ಋತ್ವಿಜರ ಪಾಲ್ಗೊಳ್ಳುವಿಕೆಯೊಂದಿಗೆ ಶುಕ್ರವಾರ ಸೂರ್ಯೋದಯಕ್ಕೆ ಆರಂಭಗೊಂಡ ಶ್ರೀ ವಿದ್ಯಾಪೂರ್ಣಮಾನ ತ್ರಿಕಾಲ ಶ್ರೀ ಚಕ್ರೇಶ್ವರೀ ಪೂಜೆಯು ಶನಿವಾರ ಸೂರ್ಯೋದಯಕ್ಕೆ ಸಂಪನ್ನಗೊಂಡಿತು. ಬಳಿಕ ಸ್ವರ್ಣ ಗದ್ದುಗೆಯಲ್ಲಿ ಶ್ರೀ ಚಕ್ರ ಸ್ಥಾಪನಾಪೂರ್ವಕ ಧಾರ್ಮಿಕ ವಿಧಾನಗಳನ್ನು ನೆರವೇರಿಸಲಾಯಿತು.

ಐದನೇ ದಿನದಲ್ಲಿ ಲಕ್ಷ್ಮೀ ಗಣೇಶಯಾಗ, ಲಲಿತಾ ಸಹಸ್ರನಾಮ ಕದಳೀಯಾಗ, ಶತಾಕ್ಷರೀ ಮಂತ್ರಯಾಗ, ತ್ರಿಶಕ್ತೀಯಾಗ, ಸ್ವರ್ಣ ಶಿಖರ ಶುದ್ಧಿ, ಮಾರಿಯಮ್ಮನ ಸ್ವರ್ಣಮಯಪೀಠ ಶುದ್ಧಿ, ಉಚ್ಚಂಗೀ ಸ್ವರ್ಣಮಯಪೀಠ ಶುದ್ಧಿ, ಉಭಯ ದಾರು ಬಿಂಬಸಂಸ್ಥಾನ, ಉಭಯ ಕುಂಭ ಶುದ್ಧಿ, ಎರಡು ಸ್ವರ್ಣ ಶಿಖರ ಸಹಿತ 9 ಶಿಖರಗಳ ಸ್ಥಾಪನೆ, ಅನ್ನಪೂರ್ಣೇಶ್ವರೀ ಮಂತ್ರ ಪಾಯಸ ಹೋಮಗಳು ನೆರವೇರಿದವು.

ಸಂಜೆ ಭದ್ರಕಾಳೀ ಭದ್ರಕಮಂಡಲ ಪೂಜಾ, ಚತುಃಷಷ್ಠಿಯೋಗಿನೀ ಮಂಡಲಪೂಜಾ, ಶಯ್ನಾಶ್ರೀ ಪೂಜಾ, ನವಕುಂಡಾಧಿವಾಸಹೋಮ, ಶಯ್ನಾ ಧಿವಾಸ ಪೂಜಾ, ಶಿರಸ್ತಣ್ತೀಯಾಗ, ಅಗ್ನಿದುರ್ಗಾದೇವಿ ದೀಪ ನಮಸ್ಕಾರ, ವಾಕ್ಸಿದ್ಧಿಕರ ಚಂಡೀಪುರಶ್ಚರಣ ಮಂಡಲ ಪೂಜೆ, ಸಾನ್ನಿಧ್ಯವೃದ್ಧಿ ಸೂಚಕ ಕರ್ಮಾಂಗಗಳು, ಸ್ವರ್ಣ ಶಿಖರಾಧಿವಾಸ ಕಾರ್ಯಕ್ರಮಗಳು ನಡೆದವು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮತ್ತು ಮಹಾದಾನಿ ಕೆ. ಪ್ರಕಾಶ್‌ ಶೆಟ್ಟಿ, ಮಹಾದಾನಿಗಳಾದ ಕೆ. ಎಂ. ಶೆಟ್ಟಿ ದಂಪತಿ, ಕನ್ಯಾನ ಸದಾಶಿವ ಶೆಟ್ಟಿ ದಂಪತಿ, ಮಹೇಶ್‌ ಕೋಟ್ಯಾನ್‌ ದಂಪತಿ, ಬಂಟ್ವಾಳ ಶಾಸಕ ರಾಜೇಶ್‌ ನಾಯಕ್‌, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ-ಮಾಜಿ ಶಾಸಕ ಕೆ. ರಘುಪತಿ ಭಟ್‌, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಗೌರವಾಧ್ಯಕ್ಷರಾದ ಎಂ. ಸುಧಾಕರ ಹೆಗ್ಡೆ, ರವಿ ಸುಂದರ್‌ ಶೆಟ್ಟಿ, ವಿನಯ್‌ ಕುಮಾರ್‌ ಸೊರಕೆ, ಲಾಲಾಜಿ ಆರ್‌. ಮೆಂಡನ್‌, ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್‌, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್‌. ಪಾಲನ್‌, ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ಗಂಗಾಧರ ಸುವರ್ಣ, ಮನೋಹರ್‌ ಎಸ್‌. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್‌ ಹೆಗ್ಡೆ ಕಲ್ಯ, ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷರಾದ ಉದಯ್‌ ಸುಂದರ್‌ ಶೆಟ್ಟಿ, ಭಗವಾನ್‌ದಾಸ್‌ ಶೆಟ್ಟಿಗಾರ್‌, ಯೋಗೀಶ್‌ ವಿ. ಶೆಟ್ಟಿ, ಟ್ರಸ್ಟಿಗಳಾದ ಶೇಖರ್‌ ಸಾಲ್ಯಾನ್‌, ಮನೋಹರ ರಾವ್‌, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್‌. ಶೆಟ್ಟಿ, ಚರಿತಾ ದೇವಾಡಿಗ, ಅಂತರಾಷ್ಟ್ರೀಯ ಸಮಿತಿಯ ಶಶಿಧರ ಶೆಟ್ಟಿ ಮಲ್ಲಾರು, ದಿವಾಕರ ಶೆಟ್ಟಿ ಮಲ್ಲಾರು, ಪ್ರಮುಖರಾದ ಸಂತೋಷ್‌ ಶೆಟ್ಟಿ ಇನ್ನಾ ಕುರ್ಕಿಲ್‌ಬೆಟ್ಟು, ಸುಗ್ಗಿ ಸುಧಾಕರ ಶೆಟ್ಟಿ, ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು, ಹರೀಶ್‌ ಶೆಟ್ಟಿ ಎರ್ಮಾಳು, ವಿಕ್ರಂ ಕಾಪು, ಪ್ರಭಾಕರ ಪೂಜಾರಿ, ಡಾ| ಕೆ. ಪ್ರಶಾಂತ್‌ ಶೆಟ್ಟಿ, ಸುಧಾಕರ ಶೆಟ್ಟಿ ಮಕರ, ರೋಶನ್‌ ಕುಮಾರ್‌ ಶೆಟ್ಟಿ, ಶ್ರೀಕರ ಶೆಟ್ಟಿ ಕಲ್ಯ, ಹರಿಯಪ್ಪ ಕೋಟ್ಯಾನ್‌, ಅರುಣ್‌ ಶೆಟ್ಟಿ ಪಾದೂರು, ಸುರೇಶ್‌ ಶೆಟ್ಟಿ ಅಯೋಧ್ಯಾ ಮೊದಲಾದವರು ಉಪಸ್ಥಿತರಿದ್ದರು

Vishwa News 24

Recent Posts

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

2 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

2 hours ago

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

21 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

23 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

23 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

23 hours ago