ಲಾತೂರ್ :ಪಾಕಿಸ್ತಾನವನ್ನು ಸೃಷ್ಟಿಸಿದ್ದೇ ಕಾಂಗ್ರೆಸ್; ಈಗ ಈ ಕಾಂಗ್ರೆಸ್ ಪಾಕಿಸ್ತಾನದ ಭಾಷೆಯಲ್ಲೇ ಮಾತಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
‘ಕಾಶ್ಮೀರ ಕುರಿತ ವಿಚಾರಗಳಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಪಾಕಿಸ್ತಾನ ಒಂದೇ ಧ್ವನಿಯಿಂದ ಮಾತಾಡುತ್ತಿವೆ’ ಎಂದು ಪ್ರಧಾನಿ ಆರೋಪಿಸಿದರು. ಪಾಕಿಸ್ತಾನದ ವಿಮಾನವನ್ನು ನಮ್ಮ ವಾಯುಪಡೆ ಹೊಡೆದುರುಳಿಸಿರುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಇನ್ನೂ ಏನೇನು ಸಾಕ್ಷಿಗಳು ಬೇಕು?’ ಎಂದು ಪ್ರಧಾನಿ ಪ್ರಶ್ನಿಸಿದರು.
ಬಿಜೆಪಿ ಆಡಳಿತದಲ್ಲಿ ‘ನವ ಭಾರತ’ದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಭಯೋತ್ಪಾದಕರನ್ನು ಅವರ ಗುಹೆಗಳಿಗೇ ನುಗ್ಗಿ ಭಾರತ ನಾಶಪಡಿಸುತ್ತದೆ. ಇದು ನವ ಭಾರತದ ನೀತಿ. ಭಯೋತ್ಪಾದನೆಯ ಸಮೂಲ ನಾಶವೇ ನಮ್ಮ ಸಂಕಲ್ಪ’ ಎಂದು ಘೋಷಿಸಿದರು.
ಮೊದಲ ಬಾರಿ ಹಕ್ಕು ಚಲಾಯಿಸುವ ಮತದಾರರು ತಮ್ಮ ಮತಗಳನ್ನು ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ಮಾಡಿದ ಯೋಧರಿಗೆ ಸಮರ್ಪಿಸಬೇಕು ಎಂದು ಕರೆ ನೀಡಿದರು.
‘ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಬೇಕು ಎಂದು ಕೇಳುವ ಮಾನಸಿಕತೆಯನ್ನು ದಶಕಗಳ ಕಾಲ ಆಳಿದ ಪಕ್ಷ ಪೋಷಿಸಿಕೊಂಡು ಬಂದಿದೆ. ಅವರ ಹೃದಯದಲ್ಲಿದ್ದಿದ್ದು ಈಗ ಬಹಿರಂಗವಾಗಿದೆ’ ಎಂದು ಮೋದಿ ಟೀಕಿಸಿದರು.
‘ಪ್ರತ್ಯೇಕ ಪ್ರಧಾನಿ ಬೇಕು ಎನ್ನುವವರ ಬೆಂಬಲಕ್ಕೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನಿಂತಿವೆ. ಕಾಂಗ್ರೆಸ್ ಅಂತೂ ದೇಶವಿರೋಧಿ ಪಕ್ಷ ಎಂಬುದು ಸಾಬೀತಾಗಿದೆ. ಅದರ ಜತೆಗೆ ಶರದ್ ಸಾಬ್ ಕೂಡ ನಿಂತಿದ್ದಾರಲ್ಲ…? ಇದು ನಿಮಗೆ ಶೋಭೆಯೆ ಶರದ್ ಸಾಬ್?’ ಎಂದು ಮೋದಿ ಪ್ರಶ್ನಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…