ಕಾಪುಃ ಗೋವುಗಳಿಗೆ ವಿಹಾರತಾಣವೆಂಬ ಪರಿಕಲ್ಪನೆಯಲ್ಲಿ ಗುರ್ಮೆ ಫೌಂಡೇಶನ್ ವತಿಯಿಂದ ಶ್ರೀಮತಿ ಪದ್ಮಾವತಿ ಪಿ ಶೆಟ್ಟಿ ಗುರ್ಮೆ ಇವರ ನಾಲ್ಕನೇ ಪುಣ್ಯತಿಥಿಯ ಪ್ರಯುಕ್ತ “ಗುರ್ಮೆ ಗೋವಿಹಾರ” ಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿತು.
ಕೀರ್ತನ -ಸಾಂತ್ವನ-ಯಕ್ಷಗಾನ ಎಂಬ ಶೀರ್ಷಿಕೆಯಡಿಯಲ್ಲಿ ಪದ್ಮಾವತಿ ಪ್ರಭಾಕರ ಶೆಟ್ಟಿ ಸಭಾವೇದಿಕೆಯಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ ದೀಪ ಬೆಳಗಿಸುವ ಮುಖೇನ ಕಾರ್ಯಕ್ರಮ ಉದ್ಘಾಟಿಸಿ ಉದ್ಘಾಟನ ಭಾಷಣ ಮಾಡಿದರು.
ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸ್ವರ್ಣ ಪೀಠಿಕಾಪುರ ಗೌರಿಗದ್ದೆಯ ಶ್ರೀ ವಿನಯಗುರೂಜಿಯವರು ಆಶೀರ್ವಚನ ಮಾಡಿದರು.
ಈ ಸಂಧರ್ಭದಲ್ಲಿ 550 ಕ್ಕಿಂತ ಅಧಿಕ ಮಂದಿಗೆ ವೈದ್ಯಕೀಯ ನೆರವನ್ನು ಮತ್ತು 300 ಕ್ಕೂ ಅಧಿಕ ಆಶಾ ಕಾರ್ಯಕರ್ತೆ-ಆರೋಗ್ಯ ಕಾರ್ಯಕರ್ತರು, ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು.
ವೇದಿಕೆಯಲ್ಲಿ ಸಚಿವರಾದ ಸುನೀಲ್ ಕುಮಾರ್,ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ರಘುಪತಿ ಭಟ್ , ಎಂ.ಆರ್ .ಜಿ ಗ್ರೂಪ್ ನ ಚೇಯರ್ ಮೇನ್ ಬಂಜರ ಪ್ರಕಾಶ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಸಹೋದರರು ಉಪಸ್ಥಿತರಿದ್ದರು.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…