Featured

ಹಣಕ್ಕಾಗಿ ರಾಕ್ಷಸಿ ಕೃತ್ಯವೆಸಗಿದ ದೊಡ್ಡಮ್ಮ : ಮಗಳ ತೊಡೆಗೆ  ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಕಿರುಕುಳ  – Vishwanews24

ಹಣಕ್ಕಾಗಿ ರಾಕ್ಷಸಿ ಕೃತ್ಯವೆಸಗಿದ ದೊಡ್ಡಮ್ಮ : ಮಗಳ ತೊಡೆಗೆ  ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಕಿರುಕುಳ

ತುಮಕೂರು : ಬ್ಯಾಂಕ್​ನಲ್ಲಿ ಬಾಲಕಿಯ ಹೆಸರಿನಲ್ಲಿದ್ದ ಹಣಕ್ಕಾಗಿ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ಘಟನೆ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ನಡೆದಿದೆ. ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಾಲಕಿ ಲಕ್ಷ್ಮೀಗೆ ದೊಡ್ಡಮ್ಮ ನಂಜಮ್ಮ ಕಿರುಕುಳ ನೀಡಿದ್ದಾರೆ. ಲಕ್ಷ್ಮೀ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮೃತ ತಾಯಿ ನರಸಮ್ಮ ಹಾಗೂ ಬಾಲಕಿ ಲಕ್ಷ್ಮೀ ಹೆಸರಿನಲ್ಲಿ ಜಂಟಿ ಖಾತೆ ಇತ್ತು.

ಮೃತ ತಾಯಿ ತನ್ನ ಮಗಳಿಗಾಗಿ ನಾಲ್ಕು ಲಕ್ಷ ಫಿಕ್ಸ್ ಡೆಪಾಸಿಟ್ ಮಾಡಿದ್ದರು. ಇದು ನರಸಮ್ಮ ಅವರ ಕಣ್ಣು ಕುಕ್ಕುವಂತೆ ಮಾಡಿತು. ಹೀಗಾಗಿ ನಂಜಮ್ಮ ಶಿವರಾತ್ರಿ ಹಬ್ಬಕ್ಕೆಂದು (ಮಾ.09) ಲಕ್ಷ್ಮೀಯನ್ನು ತಮ್ಮ ಊರಿಗೆ ಕರೆಸಿದ್ದಾಳೆ. ಬಳಿಕ ನರಸಮ್ಮ ಚೆಕ್​ಗೆ ಸಹಿ‌ ಮಾಡು ಅಂತ ಬಾಲಕಿ ಲಕ್ಷ್ಮೀಗೆ ಕಿರುಕುಳ ನೀಡಿದ್ದಾಳೆ. ಆದರೂ ಬಾಲಕಿ ಲಕ್ಷ್ಮೀ ಒಪ್ಪದಿದ್ದಾಗ ನರಸಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಬಾಲಕಿ ಲಕ್ಷ್ಮೀ ತೊಡೆಗೆ ಸುಟ್ಟಿದ್ದಾಳೆ. ನಂಜಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾಳೆ.

ಈ ವೇಳೆ ಬಾಲಕಿ ಲಕ್ಷ್ಮೀ ಕಿರುಚದಂತೆ ನಂಜಮ್ಮ ಮಗ ಬಸವರಾಜ್​ ಆಕೆಯ ಬಾಯಿ ಮುಚ್ಚಿದ್ದಾನೆ. ಇನ್ನು ಬಾಲಕಿ ಲಕ್ಷ್ಮೀ ಐದನೇ ತರಗತಿ ಓದುತ್ತಿದ್ದಾಳೆ. ಆಕೆಯ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಸಂಬಂಧಿಕರು ಬಾಲಕಿಯನ್ನು ಊರಿಗೆ ಕರೆಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪೂಜಾರಹಳ್ಳಿಯಲ್ಲಿರುವ ಅಜ್ಜಿ ಊರಲ್ಲಿ ವಾಸವಿದ್ದ ಬಾಲಕಿ ಲಕ್ಷ್ಮಿಯನ್ನ ಊರಿಗೆ ಕರೆದುಕೊಂಡು ಬರುವಂತೆ ಪೋಷಕರಿಗೆ ತಿಳಿಸಿದ್ದ ಶಾಲಾ ಶಿಕ್ಷಕರು. ಈ ಹಿನ್ನೆಲೆಯಲ್ಲಿ ಬಾಲಕಿಯನ್ನ ಕರೆತರಲು ಹೋಗಿದ್ದ ಲಕ್ಷ್ಮೀ ಅಜ್ಜಿ ಹೋಗಿದ್ದರು. ಈ ವೇಳೆ ಬಾಲಕಿಗೆ ಟೀ ಚೆಲ್ಲಿದೆ ಎಂದು ಸುಳ್ಳು ಹೇಳಿ ಲಕ್ಷ್ಮೀ ದೊಡ್ಡಮ್ಮ ನಂಜಮ್ಮ ಬೆದರಿಕೆ ಹಾಕಿದ್ದಳು. ಬಾಲಕಿಯನ್ನ ಪೂಜಾರಹಳ್ಳಿಗೆ ಕರೆತಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿ ಲಕ್ಷ್ಮೀಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

5 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

6 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

6 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

6 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

6 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

6 days ago