ಹಣ ಖರ್ಚು ಮಾಡದೇ ದೇಶದಾದ್ಯಂತ ನನ್ನ ಬಗ್ಗೆ ಪ್ರಚಾರ ಮಾಡಿದ ಟ್ರೋಲ್ ಪೇಜ್ ಗಳಿಗೆ ಅಭಿನಂದನೆ , ನೀವು ನನ್ನ ವಿರೋಧಿಗಳಲ್ಲ, ದೇವರು : ನಳಿನ್ ಕುಮಾರ್ ಕಟೀಲ್ -Vishwanews24

ಮಂಗಳೂರು: ಹಣ ಖರ್ಚು ಮಾಡದೇ ದೇಶದಾದ್ಯಂತ ನನ್ನ ಬಗ್ಗೆ ಪ್ರಚಾರ ಮಾಡಿದ ಟ್ರೋಲ್ ಪೇಜ್ ಗಳಿಗೆ ಸಂಸದ ನಳೀನ್ ಕುಮಾರ್  ಅಭಿನಂದನೆ ತಿಳಿಸಿದರು.

ಪಂಪ್ ವೆಲ್ ಪ್ಲೈಓವರ್ ಉದ್ಘಾಟಿಸಿದ ನಂತರ ಮಾತನಾಡಿದ ಅವರು ಕಾಂಗ್ರೇಸ್ ವಿರುದ್ದ ವಾಗ್ದಾಳಿ ನಡೆಸಿದರು. ಪಂಪ್ವೆಲ್ ಫ್ಲೈ ಒವರ್ ತಡವಾಗಲು ಕಾರಣ ಮಂಗಳೂರು ಮಹಾನಗರಪಾಲಿಕೆ ಹಾಗೂ ಜಿಲ್ಲೆಯ ಕಾಂಗ್ರೇಸ್ ಮುಖಂಡರು  ಎಂದು ಆರೋಪಿಸಿದರು.

2009ರಿಂದ ಲೋಕಸಭಾ ಸದಸ್ಯನಾಗಿರುವ ನನಗೆ ಹತ್ತಾರು ಕಾಮಗಾರಿ ಉದ್ಘಾಟಿಸೋ ಭಾಗ್ಯ ಸಿಕ್ಕಿದ್ದು, 2009ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಹಲವು ಪ್ರತಿಭಟನೆ ನಡೆದಿದೆ. ನಾನು ಬಂದ ಮೇಲೆ ಅನೇಕ ಕಡೆ ಹೆದ್ದಾರಿ ಕಾಮಗಾರಿ ವೇಗ ಪಡೆದಿದೆ. ನಾನು ಲೋಕಸಭಾ ಸದಸ್ಯನಾಗಿ ನನಗೆ ಜವಾಬ್ದಾರಿ ಇದೆ. ಆದರೆ ಟೀಕೆಗೆ ಉತ್ತರ ಇಲ್ಲ, ಹಲವಾರು ಮಂದಿ ನಾಟಕ ಮಾಡಿದ್ದಾರೆ. ಚುನಾವಣೆಗೆ ನಿಂತು ಸೋತವರು, ಹಿಂದಿನ ಬಾಗಿಲಿನಿಂದ ಎಂಎಲ್ ಸಿ ಆದವರು ನಾಟಕ ಮಾಡುತ್ತಿದ್ದಾರೆ. ಈಗ ಹಗ್ಗ ಹಾಕಿ ನೇತಾಡುತ್ತಿದ್ದಾರೆ, ಗೆಲ್ಲಲು ಆಗದವರು ಎಂದು ಎಂಎಲ್ ಸಿ ಐವನ್ ಡಿಸೋಜಾಗೆ ಸಂಸದ ನಳಿನ್ ಕುಮಾರ್ ಟಾಂಗ್ ನೀಡಿದರು.

ಪಂಪ್ ಪ್ಲೈಓವರ್ ಟ್ರೋಲ್ ಆಗಿದೆ ಎಂದು ನಾವು ಕೆಲಸ ಮಾಡಿದ್ದಲ್ಲ. ಆಗಿನ ಎಲ್ಲಾ ಕಾಂಗ್ರೆಸ್ ಪ್ರತಿನಿಧಿಗಳು ಡಿಸೈನ್ ಚೇಂಜ್ ಮಾಡಬೇಕು ಅಂತ ತಗಾದೆ ತೆಗೆದರು. ಈ ಎಲ್ಲಾ ಸಮಸ್ಯೆಯಿಂದ ಮುಕ್ತಿ ಪಡೆದು ಹೊರಬಂದಾಗ 2016 ಆಗಿತ್ತು. ಬಳಿಕ ನವಯುಗ ಸಂಸ್ಥೆಗೆ ಹಣಕಾಸು ಸಮಸ್ಯೆ ಎದುರಾಯ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಮತ್ತೆ ಒಂದಷ್ಟು ಅನುಮತಿ ಸಮಸ್ಯೆ ಆಯ್ತು. ಇನ್ನು ಇಲ್ಲಿ ಟೋಲ್ ಗೇಟ್ ಮಾಡಲು ಅನುಮತಿ ಕೊಟ್ಟಿದ್ದು ನಾವಲ್ಲ, ಮನಮೋಹನ್ ಸಿಂಗ್ ಸರ್ಕಾರ. ಈಗ ಎಲ್ಲರೂ ನಾಟಕ ಮಾಡ್ತಾರೆ, ಆಗ ಇವರದ್ದೇ ಸರ್ಕಾರ ಇತ್ತಲ್ವಾ? ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರ ಹೇಳಿದಂತೆ ಈ ಬಾರಿ ಆರು ತಿಂಗಳಲ್ಲಿ ಕಾಮಗಾರಿ ಮುಗಿಸಿದೆ. ಇದಕ್ಕೆ ಸಹಕರಿಸಿದ ಮತದಾರ ಪ್ರಭುವಿಗೆ ಕೃತಜ್ಞತೆಗಳು ಎಂದರು. ಅದರೊಂದಿಗೆ ಟ್ರೋಲ್ ಮಾಡಿದ ಎಲ್ಲರಿಗೂ ನಾನು ಕೃತಘ್ನ. ತಾವು ನಮ್ಮನ್ನು ಕೆಲಸ ವೇಗ ಮಾಡಲು ಪ್ರೇರೆಪಿಸಿದವರು ನೀವು ನಮ್ಮ ವಿರೋಧಿಗಳಲ್ಲ, ದೇವರು ಎಂದರು. ಟೀಕಿಸಿವವರು ಇದ್ದಾಗ ಮಾತ್ರ ಕೆಲಸ ಕಾರ್ಯಗಳನ್ನು ಸೂಕ್ತವಾಗಿ ಮಾಡಲು ಸಾಧ್ಯವಾಗುತ್ತದೆ. ಎಲ್ಲರಿಗೂ ಈ ಫ್ಲೈ ಒವರ್ ಅರ್ಪಣೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ , ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

19 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

19 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

19 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

19 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

20 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

20 hours ago