ನವದೆಹಲಿ: ಹತ್ತು ರೂಪಾಯಿ ನಾಣ್ಯ ಸೇರಿದಂತೆ ಯಾವುದೇ 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ನಾಣ್ಯವನ್ನು ವ್ಯವಾಹರದಲ್ಲಿ ನಿರಾಕರಿಸುವಂತಿಲ್ಲವೆಂದು ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಹೇಳಿದೆ.
ಹತ್ತು ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಲು ಹಲವೆಡೆ ಹಿಂದೇಟು ಹಾಕುತ್ತಾರೆ. ಹಲವರು ಹತ್ತು ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳುವುದೇ ಇಲ್ಲ, ಆದರೆ ಆರ್‌ಬಿಐ ಇದನ್ನು ಸ್ಪಷ್ಟವಾಗಿ ತಪ್ಪು ಎಂದು ಹೇಳಿದ್ದು, 50 ಪೈಸೆಗಿಂತಲೂ ಹೆಚ್ಚಿನ ಮೌಲ್ಯದ ಯಾವ ನಾಣ್ಯವನ್ನೂ ತೆಗೆದುಕೊಳ್ಳದೆ ನಿರಾಕರಿಸುವಂತಿಲ್ಲ ಎಂದು ಆರ್‌ಬಿಐ ಹೇಳಿದೆ.
ಕೆಲವರು ಅಕಾರಣವಾಗಿ ನಾಣ್ಯ ನಿರಾಕರಿಸುತ್ತಿದ್ದಾರೆ ,ಒಂದು, ಎರಡು, ಐದು ಮತ್ತು ಹತ್ತು ರೂಪಾಯಿಯ ಹೊಸ ಮಾದರಿಯ ನಾಣ್ಯಗಳನ್ನು ಆರ್‌ಬಿಐ ಕೆಲವು ತಿಂಗಳ ಮುನ್ನಾ ಬಿಡುಗಡೆಗೊಳಿಸಿತ್ತು. ಇವನ್ನು ತೆಗೆದುಕೊಳ್ಳಲು ಕೆಲವು ವ್ಯಾಪಾರಸ್ತರು ಅಕಾರಣವಾಗಿ ನಿರಾಕರಿಸಿದ್ದರು, ಇದರಿಂದ ಇಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆರ್‌ಬಿಐ ಮೇಲಿನಂತೆ ಸೂಚನೆ ನೀಡಿದೆ.
ನಾಣ್ಯಗಳ ಕುರಿತಾಗಿ ಕೆಲವು ಗಾಳಿ ಸುದ್ದಿಗಳೂ ಸಹ ಹರಡಿ ನಾಣ್ಯಗಳನ್ನು ಸ್ವೀಕರಿಸಲು ವ್ಯಾಪಾರಿಗಳು ನಿರಾಕರಿಸುತ್ತಿದ್ದಾರೆಂದು ತಿಳಿದು ಬಂದಿರುವ ಕಾರಣ, ಹೀಗೆ ಗಾಳಿ ಸುದ್ದಿ ಹರಡಿಸಬಾರದೆಂದು ಆರ್‌ಬಿಐ ಮನವಿ ಮಾಡಿದೆ.
ಇಷ್ಟಾಗಿಯೂ ವ್ಯಾಪಾರಿಗಳು ಅಥವಾ ಇನ್ನಾರಾದರೂ ವ್ಯವಹಾರದ ಸಂಬಂಧ ಆರ್‌ಬಿಐನ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದರೆ, ಆರ್‌ಬಿಐನ ಸೂಚನೆಯ ಉಲ್ಲಂಘನೆ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
50 ಪೈಸೆ, ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ, ಹತ್ತು ರೂಪಾಯಿಯ ನಾಣ್ಯಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ. 50 ಪೈಸೆಗಿಂತಲೂ ಕಡಿಮೆ ಮೌಲ್ಯದ ನಾಣ್ಯಗಳು ಪ್ರಸ್ತುತ ಚಾಲ್ತಿಯಲ್ಲಿಲ್ಲ.
ಡಿವೈಡರ್‌ಗೆ ಕಾರು ಡಿಕ್ಕಿ : ಭೀಕರ ಅಪಘಾತದಲ್ಲಿ ಖ್ಯಾತ ನಟಿ ಮಾಡೆಲ್ ಹರ್ಷಿಲ್ ಕಾಲಿಯಾ ಸಾವು ಜೈಪುರ: ಜೈಪುರದಲ್ಲಿ ಕಾರು…
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…