ಮಹಾನಗರ: ‘ಅಂಬರ್ ಕ್ಯಾಟರರ್’ ತುಳು ಚಲನಚಿತ್ರ ನಿರ್ಮಿಸಿರುವ ನಾಗೇಶ್ವರ ಸಿನಿ ಕಂಬೈನ್ಸ್ ಸಂಸ್ಥೆ ಇದೀಗ ಹದಿನೇಳು ತಾಸುಗಳಲ್ಲಿ ತುಳುಚಲನಚಿತ್ರ ನಿರ್ಮಿಸಿ ಗಿನ್ನೆಸ್ ದಾಖಲೆಗೆ ತುಳು ಚಲನಚಿತ್ರವನ್ನು ಕೊಂಡೊಯ್ಯಲು ಸಿದ್ಧತೆ ನಡೆಸಿದೆ.
ನಗರದಲ್ಲಿ ಶನಿವಾರ ಪ ಈ ಬಗ್ಗೆ ವಿವರಿಸಿದ ನಾಗೇಶ್ವರ ಸಿನಿ ಕಂಬೈನ್ಸ್ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ ಅವರು ಗಿನ್ನೆಸ್ ದಾಖಲೆಗೆ ತುಳುಚಿತ್ರವನ್ನು ಕೊಂಡೋಯ್ಯುವ ದೃಷ್ಟಿಯಿಟ್ಟುಕೊಂಡು 17 ಗಂಟೆಯಲ್ಲಿ ತುಳುಚಿತ್ರ ನಿರ್ಮಾಣ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.
ತುಳು ಚಿತ್ರರಂಗದಲ್ಲಿ 10 ಯಶಸ್ವಿ ಚಿತ್ರಗಳನ್ನು ನೀಡಿರುವ 10 ನಿರ್ದೇಶಕರು ಏಕಕಾಲದಲ್ಲಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 10 ನಾಯಕ ನಟರು ಅಭಿನಯಿಸಲಿದ್ದು ಬಹುಶಃ ತುಳುಚಲನಚಿತ್ರ ರಂಗದಲ್ಲಿ ಪ್ರಥಮ ಮಲ್ಟಿಸ್ಟಾರ್ ಚಿತ್ರ ಇದಾಗಲಿದೆ ಎಂದರು. ಕಥೆ, ಚಿತ್ರಕಥೆ-ಸಂಭಾಷಣೆ-ಸಂಕಲನ ಹರೀಶ್ ಕೊಟ್ಪಾಡಿಯವರದ್ದಾಗಿದೆ. ಖ್ಯಾತ ನಿರ್ದೇಶಕರಾದ ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲಬೈಲ್, ಪ್ರಕಾಶ್ ಪಾಂಡೇಶ್ವರ, ಮಯೂರ್ ಶೆಟ್ಟಿ, ರಂಜಿತ್ ಸುವರ್ಣ, ರಾಜ್‌ಕಮಲ್, ರಿತೇಶ್ ಬಂಗೇರ, ರಘುಶೆಟ್ಟಿ ಮುಂತಾದವರು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅರ್ಜುನ್ ಕಾಪಿಕಾಡ್, ಸೌರಭ್ ಭಂಡಾರಿ, ರೂಪೇಶ್ ಶೆಟ್ಟಿ , ಪ್ರಥ್ವಿ ಅಂಬರ್, ಅಸ್ತಿಕ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಲಿದ್ದಾರೆ. ಖ್ಯಾತ ಹಾಸ್ಯ ನಟರ ಸಮಾಗಮ ಇದರಲ್ಲಿದೆ. ತಮಿಳಿನ ಧನುಷ್ ಅವರ ‘ಪುಲಿಕುಟ್ಟಿ ‘ ಚಿತ್ರ ಖ್ಯಾತಿಯ, ಸುಮಾರು 40 ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿರುವ ರಾಜಸಿಂಹ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಲಿದ್ದಾರೆ ಎಂದರು.
ಪೃಥ್ವಿ ಅಂಬರ್ ಅವರು ಮಾತನಾಡಿ, ಚಿತ್ರ ಶೀರ್ಷಿಕೆಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಈಗ ಶಿವರಾಜ್ ಕುಮಾರ್ ಅವರ ಅಭಿನಯದ, 18 ತಾಸುಗಳಲ್ಲಿ ನಿರ್ಮಾಣವಾಗಿರುವ ‘ಸುಗ್ರೀವ’ ಚಿತ್ರ ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣದ ದಾಖಲೆಯನ್ನು ಹೊಂದಿದೆ. ತುಳುವಿನಲ್ಲಿ 24 ತಾಸುಗಳಲ್ಲಿ ನಿರ್ಮಾಣಗೊಂಡಿರುವ ‘ಸೆಪ್ಟಂಬರ್ 8’ ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣವಾದ ಚಿತ್ರವಾಗಿದೆ ಎಂದು ವಿವರಿಸಿದರು.
ವಿಜಯ ಕುಮಾರ್ ಕೊಡಿಯಾಲಬೈಲ್, ಪ್ರಕಾಶ್ ಪಾಂಡೇಶ್ವರ, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ತುಳು ಚಿತ್ರರಂಗಕ್ಕೆ ಇನ್ನಷ್ಟು ಉತ್ತೇಜನ ದೊರೆಯುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ ಎಂದು ಹೇಳಿ ಶುಭಹಾರೈಸಿದರು.
ಮಯೂರ್ ಶೆಟ್ಟಿ, ರಂಜಿತ್ ಸುವರ್ಣ, ರಾಜ್‌ಕಮಲ್, ರಿತೇಶ್ ಬಂಗೇರ, ರಘುಶೆಟ್ಟಿ, ಪಮ್ಮಿ ಕೊಡಿಯಾಲಬೈಲ್, ತಮಿಳು ನಟ ರಾಜಸಿಂಹ, ನಟರಾದ ಸೌರಭ್ ಭಂಡಾರಿ, ಅಸ್ತಿಕ್ ಶೆಟ್ಟಿ , ಚೇತನ್ ರೈ, ಪೂಜಾ ಶೆಟ್ಟಿ , ಇಸ್ಮಾಯಿಲ್ ಮೂಡುಶೆಡ್ಡೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…