ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು – Vishwanews24

ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು – Vishwanews24

ಹಿಂದೂ ಧರ್ಮದಲ್ಲಿ ವಿವಿಧ ಬಗೆಯ ಆಚರಣೆ ಹಾಗೂ ನಂಬಿಕೆಗಳು ಇರುವಂತೆ ಹಲವಾರು ದೇವತೆಗಳನ್ನು ಪೂಜಿಸಲಾಗುವುದು. ಅಂತಹ ದೇವತೆಗಳಲ್ಲಿ ಹನುಮಂತನೂ ಒಬ್ಬ. ಬ್ರಹ್ಮಚಾರಿಯಾದ ಹನುಮಂತನು ಭಗವಾನ್ ಶ್ರೀರಾಮನ ಪರಮ ಭಕ್ತ ಹಾಗೂ ಶನಿಯ ಆತ್ಮೀಯ ಸ್ನೇಹಿತ. ಸದಾ ರಾಮ ನಾಮವನ್ನು ಜಪಿಸುವ ಹನುಮಂತನಿಗೆ ವಿಶೇಷ ಮಂತ್ರಗಳನ್ನು ಹಾಗೂ ಪೂಜೆಯನ್ನು ಕೈಗೊಂಡರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಸುಲಭವಾಗಿ ಕರಗಿಹೋಗುತ್ತವೆ. ಜೀವನವು ಉತ್ಸಾಹ ಹಾಗೂ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸಾಲದ ತೊಂದರೆ, ಮಾನಸಿಕ ತೊಂದರೆ ಹಾಗೂ ಸಂಕಟಗಳಂತಹ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಹನುಮಾನ್ ದೇವರ ಮಂತ್ರವನ್ನು ಗಣನೀಯವಾಗಿ ಜಪಿಸಿದರೆ ವ್ಯಕ್ತಿಗೆ ಆತ್ಮವಿಶ್ವಾಸ ಹಾಗೂ ಧೈರ್ಯವು ಹೆಚ್ಚುವುದು. ಶತ್ರುಗಳನ್ನು ಹತ್ತಿರ ಸುಳಿಯದಂತೆ ಮಾಡುವುದು. ಜೊತೆಗೆ ವ್ಯಕ್ತಿಯು ಸಕಾರಾತ್ಮಕ ಹಾದಿಯಲ್ಲಿ ಜೀವನವನ್ನು ನಡೆಸುವನು. ದೀರ್ಘಾವಧಿಯ ಜೀವನವನ್ನು ನಡೆಸುವುದರ ಮೂಲಕ ಯಶಸ್ಸನ್ನು ಪಡೆದುಕೊಳ್ಳುವರು. ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಕ್ರಿಯರಾಗಿ ಮತ್ತು ಶಕ್ತಿಯುತರಾಗಿ ಕೆಲಸ ನಿರ್ವಹಿಸುವರು. ಯಾವುದೇ ಬಗೆಯ ಸೋಮಾರಿತನ ಹಾಗೂ ಬೇಸರಕ್ಕೆ ಒಳಗಾಗುವುದಿಲ್ಲ ಎಂದು ಹೇಳಲಾಗುವುದು.

ಹನುಮಾನ್ ಮಂತ್ರ-1
“ಓಂ ಹನುಮತೇ ನಮಃ” ಈ ಮಂತ್ರವನ್ನು ನಿತ್ಯವೂ ಜಪಿಸಿದರೆ ದೈಹಿಕ ಶಕ್ತಿ, ತ್ರಾಣ ಮತ್ತು ಶಕ್ತಿಯನ್ನು ಪಡೆದುಕೊಳ್ಳಬಹುದು. ಜೀವನದಲ್ಲಿ ನೀವು ಬಯಸಿದ ಸಂಗತಿಯನ್ನು ಪಡೆದುಕೊಳ್ಳಲು ಸದಾ ಈ ಮಂತ್ರವನ್ನು ಜಪಿಸಿ.

ಹನುಮಾನ್ ಮಂತ್ರ-2
“ಓಂ ಪವನ ನಂದನಾಯ”
“ಹಂಗ್ ಹನುಮಂತೇ ರುದ್ರಾತ್ಮಕಾಯ ಹಂಗ್ ಪಟ್” ಈ ಮಂತ್ರವು ಅಪರಿಮಿತ ಶಕ್ತಿಯನ್ನು ಹೊಂದಿರುವ ಅತ್ಯಂತ ರಹಸ್ಯವಾದ ಮಂತ್ರವಾಗಿದೆ. ಈ ಹನುಮಾನ್ ಮಂತ್ರವು ತ್ವರಿತ ಫಲಿತಾಂಶವನ್ನು ತರುತ್ತದೆ. ಯಾರು ಈ ಮಂತ್ರವನ್ನು ಜಪಿಸುತ್ತಾರೆ ಅವರಿಗೆ ಅಸಾಧಾರಣ ಶಕ್ತಿ ಹಾಗೂ ಅದೃಷ್ಟವು ಪ್ರಾಪ್ತಿಯಾಗುವುದು. ಈ ಮಂತ್ರವನ್ನು ನಿತ್ಯವೂ ಜಪಿಸಿ, ಮನಸ್ಸಿನ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು.

ಹನುಮಾನ್ ಮಂತ್ರ-3
” ಓಂ ನಮೋ ಭಗವತ ಆಂಜನೇಯ ಮಹಾಬಲಾಯ ಸ್ವಾಹಾ” ಈ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮನ್ನು ಕಾಡುತ್ತಿರುವ ರೋಗಗಳು ನಿವಾರಣೆಯಾಗುವುದು. ದುಷ್ಟ ಶಕ್ತಿಯ ಕಾಟಗಳಿಂದ ರಕ್ಷಣೆ ದೊರೆಯುವುದು. ಜೊತೆಗೆ ಜೀವನದಲ್ಲಿ ಇರುವ ಅನೇಕ ಅಡಚಣೆಗಳನ್ನು ನಿವಾರಣೆಹೊಂದುವುದು. ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುವುದು. ಮನೆ ಮಂದಿಗೆ ಸಂತೋಷ ದೊರೆಯುವುದು. ನಾವು ಅಂದುಕೊಂಡ ಆಸೆಗಳು ಸುಲಭವಾಗಿ ನೆರವೇರುವುದು

ಹನುಮಾನ್ ಮಂತ್ರ-4
“ಓಂ ಐಂಗ್ ಹರಿಂಗ್ ಹನುಮತೆ ರಾಮದೂತೇ ಲಂಕವಿಧ್ವಾನ್‌ಸೇ
ಅಂಜನೀ ಗರ್ಭ್ ಸಂಭೂತಯ್ ಶಾಕಿನಿ ಡಾಕಿನಿ ಡಾಕಿನಿವಿಧ್ವಾನ್‍ಸೇ

ಕಿಲಿಕಿಲಿ ಬುಬುಕರೇನ ವಿಭಿಷನಯ ಹನುಮದ್ದೇವಾಯ
ಓಂ ಹ್ರಿಂಗ್ ಶ್ರಿಂಗ್ ಹಂಗ್ ಹಾ ಫತ್ ಸ್ವಾಹಾ.”

 

 

 

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

15 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

15 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

15 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

16 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

16 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

16 hours ago