ಹಸಿದವರ ಪಾಲಿನ‌ ಅನ್ನಪೂರ್ಣೇಶ್ವರಿ” ಗೀತಾಂಜಲಿ ಎಮ್ ಸುವರ್ಣ “

ಹಸಿದವರ ಪಾಲಿನ‌ ಅನ್ನಪೂರ್ಣೇಶ್ವರಿ” ಗೀತಾಂಜಲಿ ಸುವರ್ಣ “

ಕಟಪಾಡಿ: ಉಡುಪಿ ಜಿಲ್ಲಾ ‌ಪಂಚಾಯತ್ ಸದಸ್ಯೆ ,ರಾಜ್ಯ ಬಿಜೆಪಿ ನಾಯಕಿ ಗೀತಾಂಜಲಿ ಎಮ್ ಸುವರ್ಣ ಭಾರತ ಲಾಕ್-ಡೌನ್ ಆದ ದಿನದಿಂದ ಪ್ರತಿದಿನ‌ ಮಧ್ಯಾಹ್ನ ಹಸಿವಿನಿಂದ ಬಳಲುತ್ತಿರುವ ಬಡವರಿಗೆ,ನಿರ್ಗತಿಕರಿಗೆ,ಕೂಲಿ‌ಕಾರ್ಮಿಕರಿಗೆ ಅನ್ನವನ್ನು ಖುದ್ದಾಗಿ ತಯಾರಿಸುತ್ತಿದ್ದಾರೆ.

ಪ್ರತಿದಿನ ಸುಮಾರು 400 ಮಂದಿಗೆ ಅನ್ನದ ಪೊಟ್ಟನ ತಯಾರಿಸಿ ವಿತರಿಸುತ್ತಿದ್ದು ಸ್ಥಳಿಯ ಯುವಕರು ಸಹಕರಿಸುವ ಮೂಲಕ ವಿತರಣೆ ಕಾರ್ಯ ನಡೆಯುತ್ತಿದೆ.

ಮಾತ್ರವಲ್ಲದೆ ಮನೆಬಾಗಿಲಿಗೆ ಬರುವ ಎಲ್ಲಾ ಬಡ ಕುಟುಂಬಗಳಿಗೆ ಅಕ್ಕಿ ದಿನಸಿ ಪದಾರ್ಥಗಳನ್ನು ವಿತರಿಸಿ ಮಾತೃಹೃದಯ ತೋರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅವರ ಬೆಂಬಲಿಗ ಯುವಕರ‌ ತಂಡವೊಂದು ಔಷಧಿಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದು ಧನ ಸಹಾಯ ರೂಪದ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.

ಈ ಬಗ್ಗೆ ಮಾಧ್ಯಮದ ಜತೆ ಮಾತಾಡಿ ” ಈ ಎಲ್ಲಾ ಕೆಲಸ ಕಾರ್ಯಗಳು ದೇವರ ಸೇವೆ ಎಂಬ ದೃಷ್ಟಿಯಿಂದ ಮಾಡುತ್ತಿದ್ದೇವೆ ಜನರಿಗೆ ಇಂತಹ ಸಂಧರ್ಭದಲ್ಲಿ ಸಹಕಾರ ಮಾಡದೇ ಇದ್ದರೆ ಉಲ್ಲವರು ಇದ್ದರೂ ಏನು ಪ್ರಯೋಜನ,ಅನ್ನದಾನ‌ದ ಭಾಗ್ಯ ದೇವರು ಕರುಣಿಸಿದ್ದು ಖುದ್ದಾಗಿ ತಯಾರಿಸಿ ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇವೆ ಇದಕ್ಕೆ ನನ್ನ ಕುಟುಂಬ ವರ್ಗ ಮತ್ತು ಆತ್ಮೀಯರ ಸಹಕಾರ ಇದೆ,ಯಾರು ಬಂದರು ನನ್ನಿಂದಾಗುವ ಸಹಾಯ ಮಾಡಲು ಸದಾಸಿದ್ದ ಎಂದರು”
ಇವರ ಈ ಕಾಯಕದಲ್ಲಿ ಅವರ ಸುಪುತ್ರ ಅಭಿರಾಜ್,ಭಾಜಪ ಕಾರ್ಯಕರ್ತರು ,ವಿವಿಧ ಸಂಘಟನೆಯ ಯುವಕರು ವಿತರಣೆಗೆ ಕೈ ಜೋಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಗೀತಾಂಜಲಿ ಸುವರ್ಣ ರು ನಿರ್ಗತಿಕರು ಬಡವರ ಪಾಲಿಗೆ ಅನ್ನಪೂರ್ಣೇಶ್ವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago