ಕಟಪಾಡಿ: ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ,ರಾಜ್ಯ ಬಿಜೆಪಿ ನಾಯಕಿ ಗೀತಾಂಜಲಿ ಎಮ್ ಸುವರ್ಣ ಭಾರತ ಲಾಕ್-ಡೌನ್ ಆದ ದಿನದಿಂದ ಪ್ರತಿದಿನ ಮಧ್ಯಾಹ್ನ ಹಸಿವಿನಿಂದ ಬಳಲುತ್ತಿರುವ ಬಡವರಿಗೆ,ನಿರ್ಗತಿಕರಿಗೆ,ಕೂಲಿಕಾರ್ಮಿಕರಿಗೆ ಅನ್ನವನ್ನು ಖುದ್ದಾಗಿ ತಯಾರಿಸುತ್ತಿದ್ದಾರೆ.
ಪ್ರತಿದಿನ ಸುಮಾರು 400 ಮಂದಿಗೆ ಅನ್ನದ ಪೊಟ್ಟನ ತಯಾರಿಸಿ ವಿತರಿಸುತ್ತಿದ್ದು ಸ್ಥಳಿಯ ಯುವಕರು ಸಹಕರಿಸುವ ಮೂಲಕ ವಿತರಣೆ ಕಾರ್ಯ ನಡೆಯುತ್ತಿದೆ.
ಮಾತ್ರವಲ್ಲದೆ ಮನೆಬಾಗಿಲಿಗೆ ಬರುವ ಎಲ್ಲಾ ಬಡ ಕುಟುಂಬಗಳಿಗೆ ಅಕ್ಕಿ ದಿನಸಿ ಪದಾರ್ಥಗಳನ್ನು ವಿತರಿಸಿ ಮಾತೃಹೃದಯ ತೋರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅವರ ಬೆಂಬಲಿಗ ಯುವಕರ ತಂಡವೊಂದು ಔಷಧಿಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದು ಧನ ಸಹಾಯ ರೂಪದ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಈ ಬಗ್ಗೆ ಮಾಧ್ಯಮದ ಜತೆ ಮಾತಾಡಿ ” ಈ ಎಲ್ಲಾ ಕೆಲಸ ಕಾರ್ಯಗಳು ದೇವರ ಸೇವೆ ಎಂಬ ದೃಷ್ಟಿಯಿಂದ ಮಾಡುತ್ತಿದ್ದೇವೆ ಜನರಿಗೆ ಇಂತಹ ಸಂಧರ್ಭದಲ್ಲಿ ಸಹಕಾರ ಮಾಡದೇ ಇದ್ದರೆ ಉಲ್ಲವರು ಇದ್ದರೂ ಏನು ಪ್ರಯೋಜನ,ಅನ್ನದಾನದ ಭಾಗ್ಯ ದೇವರು ಕರುಣಿಸಿದ್ದು ಖುದ್ದಾಗಿ ತಯಾರಿಸಿ ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇವೆ ಇದಕ್ಕೆ ನನ್ನ ಕುಟುಂಬ ವರ್ಗ ಮತ್ತು ಆತ್ಮೀಯರ ಸಹಕಾರ ಇದೆ,ಯಾರು ಬಂದರು ನನ್ನಿಂದಾಗುವ ಸಹಾಯ ಮಾಡಲು ಸದಾಸಿದ್ದ ಎಂದರು”
ಇವರ ಈ ಕಾಯಕದಲ್ಲಿ ಅವರ ಸುಪುತ್ರ ಅಭಿರಾಜ್,ಭಾಜಪ ಕಾರ್ಯಕರ್ತರು ,ವಿವಿಧ ಸಂಘಟನೆಯ ಯುವಕರು ವಿತರಣೆಗೆ ಕೈ ಜೋಡಿಸುತ್ತಿದ್ದಾರೆ.
ಒಟ್ಟಾರೆಯಾಗಿ ಗೀತಾಂಜಲಿ ಸುವರ್ಣ ರು ನಿರ್ಗತಿಕರು ಬಡವರ ಪಾಲಿಗೆ ಅನ್ನಪೂರ್ಣೇಶ್ವರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅರೆಂಜ್ ಅಲರ್ಟ್ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…
ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ ಬೆಂಗಳೂರು: ರಾಜ್ಯ ರೈತ…
ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…
ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…