ಉದಯ್ಪುರ: ಮೋದಿ ಯಾವ ರೀತಿಯ ಹಿಂದು? ಅವರಿಗೆ ಹಿಂದುತ್ವ ಅಂದರೆ ಏನು ಎಂದು ಗೊತ್ತೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ರಾಜಸ್ಥಾನದ ಉದಯ್ಪುರ್ನಲ್ಲಿ ಬ್ಯುಸಿನೆಎಸ್ ಕಮ್ಯುನಿಟಿ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿಗೆ ಹಿಂದೂ ಧರ್ಮದ ಅಡಿಪಾಯ ಅಂದರೆ ಏನು? ಅದರ ಉದ್ದೇಶವೇನು ಎಂಬುದು ಗೊತ್ತಿಲ್ಲ” ಎಂದು ಟೀಕಿಸಿದ್ದಾರೆ.
“ಮೋದಿ ತಾನು ಹಿಂದೂ ಎಂದು ಹೇಳುತ್ತಾರೆ. ಆದರೆ ಅವರಿಗೆ ಹಿಂದುತ್ವದ ಮೂಲತತ್ವ ಏನು? ಭಗವದ್ಗೀತೆ ಏನು ಮಾಡಬೇಕು ಎಂದು ಹೇಳುತ್ತೆ? ಎಂದು ಪ್ರಶ್ನಿಸಿದರು. ಜ್ಞಾನವು ಪ್ರತಿಯೊಬ್ಬರೊಂದಿಗೂ ಆಗಿದೆ, ಜ್ಞಾನವು ನಿಮ್ಮ ಸುತ್ತಲೂ ಇದೆ. ಪ್ರತಿಯೊಂದು ಜೀವಿಯು ಜ್ಞಾನವನ್ನು ಹೊಂದಿದೆ. ಆದರೆ ಮೋದಿ ತಾನು ಹಿಂದೂ ಎಂದು ಹೇಳುತ್ತಾರೆ. ಹಿಂದುತ್ವದ ಮೂಲತತ್ವವೇ ಗೊತ್ತಿರದ ಅವರು ಯಾವ ರೀತಿಯ ಹಿಂದೂ?” ಎಂದು ಪ್ರಶ್ನಿಸಿದರು.
ಅಲ್ಲದೆ ಮೋದಿ ತಮ್ಮೊಳಗೆ ಜ್ಞಾನ ಹುಟ್ಟುತ್ತದೆ ಅಂದ್ಕೊಂಡಿದ್ದಾರೆ. ಅದಕ್ಕಾಗಿಯೇ ಎಲ್ಲ ವಿಷಯದಲ್ಲೂ ಅವರು ತಲೆಹಾಕುತ್ತಿದ್ದಾರೆ” ಎಂದು ಹರಿಹಾಯ್ದರು.
ಹಿಂದು ಧರ್ಮದ ಬಗ್ಗೆ ಮೋದಿಗೆ ಎಷ್ಟು ಗೊತ್ತಿದೆ? ಪ್ರಧಾನಿ ಮೋದಿ ಯಾವ ರೀತಿಯ ಹಿಂದು? ಮೋದಿ ಅವರಿಗೆ ಹಿಂದು ಧರ್ಮದ ಆಂತರ್ಯ ತಿಳಿದಿಲ್ಲ. ಗೀತೆ ಏನು ಹೇಳುತ್ತದೆ ಎಂದರೆ, ಜ್ಞಾನ ಎಲ್ಲೆಡೆಯೂ ಇದೆ. ನಮ್ಮ ಸುತ್ತಮುತ್ತಲಿರುವ ಎಲ್ಲರಲ್ಲೂ ಜ್ಞಾನವಿರುತ್ತದೆ. ನಮ್ಮ ಪ್ರಧಾನ ಮಂತ್ರಿ ನಾನು ಹಿಂದು ಎನ್ನುತ್ತಾರೆ. ಆದರೆ ಧರ್ಮದ ಆಳ ಅರಿತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…