Featured

ಹಿಜಾಬ್ ವಿವಾದ : ಯಾರ್ಯಾರದೋ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಡಿ, ಮುಂದೆ ನಿಮ್ಮ ಜೀವನದಲ್ಲಿ ಅವರ್ಯಾರು ಬರೋದಿಲ್ಲ : ಶೋಭಾ ಕರಂದ್ಲಾಜೆ – Vishwanews24

ಕಾಂಗ್ರೆಸನ್ನು ಮುಳುಗಿಸುವುದಕ್ಕೆ ಬೇರೆ ಯಾರು ಬೇಕಾಗಿಲ್ಲ, ಕಾಂಗ್ರೆಸ್ ನವರೇ ಸಾಕು

ಸಿದ್ದರಾಮಯ್ಯ, ಡಿಕೆಶಿ ಯವರು ಕಾಂಗ್ರೆಸನ್ನು ಉಸಿರುಗಟ್ಟಿಸುತ್ತಿದ್ದಾರೆ..

ನೀವು ನಿಮ್ಮ ಶಿಕ್ಷಣದ ಬಗ್ಗೆ ಗಮನ ಕೊಡಿ. ಯಾವುದೇ ಸಂಘಟನೆ ನಿಮ್ಮ ಮುಂದಿನ ಬದುಕಿನ ಜೊತೆ ಬರುವುದಿಲ್ಲ

ಉಡುಪಿ: ಕಾಂಗ್ರೆಸನ್ನು ಮುಳುಗಿಸುವುದಕ್ಕೆ ಬೇರೆ ಯಾರು ಬೇಕಾಗಿಲ್ಲ, ಕಾಂಗ್ರೆಸ್ ನವರೇ ಸಾಕು , ರಾಜ್ಯದಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಸೇರಿ ಉಸಿರು ಗಟ್ಟಿಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ಉಡುಪಿಯಲ್ಲಿ ಮಾತನಾಡಿದ ಅವರು , ನಿರಂತರ ಓಟ್ ಬ್ಯಾಂಕ್ ಮಾಡಿ, ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ದೇಶದಲ್ಲಿ ನಾಪತ್ತೆಯಾಗಿದೆ. ಒಂದು ಕಾಲದಲ್ಲಿ 40-50 ವರ್ಷಗಳ ಕಾಲ ಉತ್ತರಪ್ರದೇಶದಲ್ಲಿ ಅವರೇ ರಾಜರಂತೆ ಇದ್ದು, ಉತ್ತರ ಪ್ರದೇಶ ಗೆದ್ದರೆ ಇಡೀ ದೇಶ ಗೆದ್ದಿತು ಎಂಬ ಭಾವನೆ ಇತ್ತು . ಆದರೆ ಇಷ್ಟು ಹೀನಾಯವಾಗಿ ಸೋತು ಕೆಳ ಹಂತಕ್ಕೆ ಬಂದರೂ ಕಾಂಗ್ರೆಸ್ ಗೆ ಬುದ್ಧಿ ಕಲಿತಿಲ್ಲ.ಕರ್ನಾಟಕದಲ್ಲಿ ಕಾಂಗ್ರೆಸ್ ಏನೋ ಉಸಿರಾಡ್ತಿದೆ , ಆದರೆ ಸಿದ್ದರಾಮಯ್ಯ, ಡಿಕೆಶಿ ಯವರು ಕಾಂಗ್ರೆಸನ್ನು ಉಸಿರುಗಟ್ಟಿಸುತ್ತಿದ್ದಾರೆ ಎಂದು ಹೇಳಿದರು.

ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯನವರು ಸ್ವತಃ ವಕೀಲರಾದರು ಹೈಕೋರ್ಟ್ ತೀರ್ಪನ್ನು ವಿಧಾನಸಭೆಯಲ್ಲಿ ವಿರೋಧ ಮಾಡ್ತಾರೆ ಎಂದರೆ ಅವರ ಮಾನಸಿಕತೆ ಅರ್ಥ ಆಗುತ್ತೆ. ಈ ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕನು ಗೌರವಿಸಬೇಕು. ನೆಲದ ಕಾನೂನನ್ನು ಪ್ರತಿಯೊಬ್ಬ ಗೌರವಿಸಬೇಕು. ಕೆಲವರಿಗೆ ತಾವು ಸಂವಿಧಾನಕ್ಕಿಂತಲೂ ಮೇಲು ಅಂಥ ಅನಿಸಿದೆ. ಹೈಕೋರ್ಟ್ ತೀರ್ಪಿಗಿಂತ ದಾರ್ಷ್ಟ್ಯ ದುರಹಂಕಾರವನ್ನು ತೋರಿಸ್ತಾ ಇದ್ದಾರೆ. ಇದಕ್ಕೆ ಕಾನೂನಿನಂತೆ ಶಿಕ್ಷೆ ಆಗಬೇಕು. ಮಕ್ಕಳಿಗೆ ಬೇಕಾಗಿರುವುದು ಒಳ್ಳೆಯ ಶಿಕ್ಷಣ. ಆದರೆ ಶಿಕ್ಷಣಕ್ಕೆ ಉದ್ಯೋಗಕ್ಕೆ ಧರ್ಮ ಇಲ್ಲ. ಮಕ್ಕಳು ಓದಿ ಬುದ್ದಿವಂತರಾಗಿ, ಉದ್ಯೋಗ ಪಡೆಯಬೇಕು, ಉತ್ತಮ ಶಿಕ್ಷಣ ಪಡೆದು ಸ್ವಾವಲಂಭಿಯಾಗಬೇಕು. ಆದರೆ ಇಲ್ಲಿ ಬಡ ಹೆಣ್ಣು ಮಕ್ಕಳನ್ನು ಹಿಜಾಬ್ ಹೆಸರಲ್ಲಿ ಪ್ರಚೋದಿಸಿದ್ದಾರೆ. ಹಿಜಾಬ್ ಗೆ ಬಡವರು ಶ್ರೀಮಂತರ ಭೇದ ಇಲ್ಲ. ಆದರೆ ಶ್ರೀಮಂತರು ಹಿಜಾಬ್ ಇಲ್ಲದೆ ತಿರುಗುತ್ತಾರೆ. ಹಿಜಾಬ್ ಇಲ್ಲದೆ ಶಿಕ್ಷಣ ಬೇಕಿಲ್ಲ ಅನ್ನುವ ಈ ವಾದವನ್ನು ವ್ಯವಸ್ಥಿತವಾಗಿ ಸಂಘಟನೆ ಮಾಡುತ್ತಿದೆ. ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕಿದೆ. ಹೀಗಾಗಿ ವಿದ್ಯಾರ್ಥಿನಿಯರು ದಯಮಾಡಿ ಶಾಲೆಗೆ ಬನ್ನಿ, ಶಾಲೆಯ ಪ್ರಾಂಶುಪಾಲರು ಆಡಳಿತ ಮಂಡಳಿ ನಿಮ್ಮ ರಕ್ಷಣೆಯನ್ನು ನೋಡಿಕೊಳ್ಳುತ್ತಾರೆ. ಯಾರಿಗೂ ಆತಂಕ ಇಲ್ಲ ಎಂದು ಕರೆ ನೀಡಿದರು

ಹಿಂದೂ – ಮುಸ್ಲಿಂ ಹೆಣ್ಣುಮಕ್ಕಳು ಸ್ವಾವಲಂಬಿ ಆಗಬೇಕು ಎನ್ನುವುದು ನಮ್ಮ ಆದ್ಯತೆ . ಹೆಣ್ಣು ಮಕ್ಕಳಿಗೆ ಯಾರ ಕನಿಕರ ಬೇಕಾಗಿಲ್ಲ ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗ ಸಿಕ್ಕರೆ ಸಾಕು ಕೈಗೆ ದುಡ್ಡು ಬಂದರೆ ದ್ವನಿಯೂ ಬರುತ್ತೆ ಅಂತ ಆಗಾಗ ಹೇಳ್ತೇನೆ. ಇದು ಎಲ್ಲಾ ಧರ್ಮದವರಿಗೂ ಅನ್ವಯಿಸುತ್ತೆ. ಯಾರ್ಯಾರದೋ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಡಿ. ಮುಂದೆ ನಿಮ್ಮ ಜೀವನದಲ್ಲಿ ಅವರ್ಯಾರು ಬರೋದಿಲ್ಲ ಎಂದು ಹೇಳಿದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago