ಉಡುಪಿ

ಹಿರಿಯಡ್ಕ : ಕೊಂಡಾಡಿ ಭಜನೆಕಟ್ಟೆಯ ಶ್ರೀ ರಾಮ ಭಜನಾ ಮಂಡಳಿಯವರಿಂದ ಸುವರ್ಣ ಮಹೋತ್ಸವದ ಪ್ರಯುಕ್ತ “ನೆನೆದವರ ಮನೆಯಲ್ಲಿ ಭಜನೆ” ಕಾರ್ಯಕ್ರಮ” – vishwanews24

ಹಿರಿಯಡ್ಕ : ಕೊಂಡಾಡಿ ಭಜನೆಕಟ್ಟೆಯ ಶ್ರೀ ರಾಮ ಭಜನಾ ಮಂಡಳಿಯವರಿಂದ ಸುವರ್ಣ ಮಹೋತ್ಸವದ ಪ್ರಯುಕ್ತ “ನೆನೆದವರ ಮನೆಯಲ್ಲಿ ಭಜನೆ” ಕಾರ್ಯಕ್ರಮ”

ಹಿರಿಯಡ್ಕ: ಶ್ರೀ ರಾಮ ಭಜನಾ ಮಂಡಳಿ ಭಜನೆಕಟ್ಟೆ ಕೊಂಡಾಡಿಯ ಸುವರ್ಣ ಮಹೋತ್ಸವದ ಅಂಗವಾಗಿ *”ನೆನೆದವರ ಮನೆಯಲ್ಲಿ ಭಜನೆ”* ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಕೇಮಾರು ಮಠ ಇವರಿಂದ ಚಾಲನೆಗೊಂಡು ಭಕ್ತಿಭಾವದಿಂದ ಯಶಸ್ವಿಯಾಗಿ ಮನೆಮಾತಾಗಿ ನಡೆಯುತ್ತಿದೆ.

ಮದುವೆಯ ಮೆಹಂದಿ, ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ, ಈ ರೀತಿ ಅವರವರ ಇಚ್ಛಾನುಸಾರ ವಿಶೇಷವಾಗಿ ಇಷ್ಟರವರೆಗೆ 60ನೇ ದಿನದ ಭಜನೆಯು ಶ್ರೀ ಆನಂದ ಶೆಟ್ಟಿ ಕೊಂಡಾಡಿ ಇವರ ಮನೆಯಲ್ಲಿ ನಡೆಯಿತು.

ಭಜನೆ ನಡೆದ ಪ್ರತಿ ಮನೆಯವರಿಗೆ ಪುರಂದರದಾಸರ ಒಂದು ಭಜನೆ ಪುಸ್ತಕವನ್ನು ನೀಡಿ ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರಿಗೆ ಹಾಗೂ ಭಜನಾ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಭಕ್ತಾದಿಯವರಿಗೆ ಪರಮಾತ್ಮನು ಆಯುರಾರೋಗ್ಯ, ಸಕಲ ಐಶ್ವರ್ಯ, ನೆಮ್ಮದಿ, ಗೌರವವನ್ನು ಕರುಣಿಸಲೆಂದು ಪರಸ್ಪರ ಪ್ರಾರ್ಥಿಸುವುದು ವಾಡಿಕೆಯಾಗಿದೆ. ಇದೇ ರೀತಿ ಮುಂದುವರಿದು ದೇವರನ್ನು ಸಂತ್ರಪ್ತಿ ಪಡಿಸಲು ಇರುವ ಏಕೈಕ ಮಾರ್ಗ ಭಜನೆ ಎಲ್ಲೆಡೆಯೂ ನಡೆಯುತ್ತಿದೆ. ಮುಂದಿನ ಶ್ರೀ ರಾಮ ನವಮಿಯಂದು ನಡೆಯಲಿರುವ ಅಖಂಡ ಏಕಾಹ ಭಜನಾ ಮಂಗಲೋತ್ಸವದ ಸುವರ್ಣ ಮಹೋತ್ಸವಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕೆಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

10 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

10 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

11 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

11 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

11 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

11 hours ago