Featured

ಹಿರಿಯ ನಟ ಅನಂತ್‌ ನಾಗ್‌ಗೆ 75ನೇ ಜನ್ಮದಿನ; ಮಂಗಳೂರಿನಲ್ಲಿ ನಡೆದ ಅದ್ಧೂರಿ ‘ಅನಂತ ಅಭಿನಂದನೆ -Vishwanews24

ಹಿರಿಯ ನಟ ಅನಂತ್‌ ನಾಗ್‌ಗೆ 75ನೇ ಜನ್ಮದಿನ; ಮಂಗಳೂರಿನಲ್ಲಿ ನಡೆದ ಅದ್ಧೂರಿ ‘ಅನಂತ ಅಭಿನಂದನೆ’

ನಾನು ಕರಾವಳಿಯಲ್ಲಿ ಬೆಳೆದವ ಎಂಬುದು ಹೆಮ್ಮೆ , ಮಂಗಳಾದೇವಿ ಕೃಪೆಯಿಂದ ಇಲ್ಲಿ ಹುಟ್ಟುಹಬ್ಬ ನೆರವೇರಿದೆ : ಅನಂತ ನಾಗ್‌

ಹಿರಿಯ ನಟ ಅನಂತ ನಾಗ್‌ ಅವರ 75ನೇ ಜನ್ಮದಿನ, ವೃತ್ತಿಜೀವನದ 50ರ ಸಂಭ್ರಮ ಮತ್ತು ಸನ್ಮಾನದ ‘ಅನಂತ ಅಭಿನಂದನೆ’ ಕಾರ್ಯಕ್ರಮ ನಗರದ ಟಿ ವಿ ರಮಣ ಪೈ ಸಭಾಂಗಣದಲ್ಲಿ ಭಾನುವಾರ (ಸೆ.3) ನಡೆಯಿತು. ನಟ ಅನಂತ ನಾಗ್‌ ಮತ್ತು ಗಾಯತ್ರಿ ದಂಪತಿಯನ್ನು ಅತಿಥಿಗಳು ಮಲ್ಲಿಗೆ, ಜಾಜಿ ಹೂವಿನ ಮಾಲೆ, ಬೆಳ್ಳಿಯ ವೀಳ್ಯದ ಎಲೆ, ತುಳುನಾಡಿನ ಪರಂಪರೆಯ ಕಂಬಳದ ಬೆತ್ತ, ಪುಷ್ಪವೃಷ್ಟಿ ಸಹಿತ ವಿಶೇಷವಾಗಿ ಸನ್ಮಾನಿಸಿ, ಗೌರವಿಸಿದರು.

ವಿಧಾನಸಭೆ ಸ್ಪೀಕರ್‌ ಯು ಟಿ ಖಾದರ್‌ ಅಧ್ಯಕ್ಷತೆ ವಹಿಸಿ, ‘ಈ ಸನ್ಮಾನವು ಸಂಸ್ಕೃತಿ ವಿನಿಮಯ ಮೂಲಕ ಎಲ್ಲರಿಗೂ ಪ್ರೇರಣೆ ಕೊಡುವ ಕಾರ್ಯಕ್ರಮ. ಅನಂತ ನಾಗ್‌ ಕಾಲ ನಿರ್ಣಾಯಕರು. ಅವರ ಕಾಲದಲ್ಲಿ ನಾವಿದ್ದೇವೆ ಎಂಬುದು ಹಿರಿಮೆ. ಅನಂತ ನಾಗ್‌ ಕರ್ನಾಟಕದ ಅಮಿತಾಭ್‌ ಬಚ್ಚನ್‌’ ಎಂದು ಹೊಗಳಿದರು.

‘ಅನಂತನಾಗ್‌ ಅವರ ಚಿತ್ರರಂಗದ 50 ವರ್ಷ ಅಂದರೆ ಮಹಾನ್‌ ಸಾಧನೆ. ಅವರಿಗೆ ಪದ್ಮಭೂಷಣ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದರೆ, ಪ್ರಶಸ್ತಿಗೆ ಮೌಲ್ಯ ಬರುತ್ತದೆ. ಅವರು ನೂರ್ಕಾಲ ಬಾಳಲಿ’ ಎಂದು ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಹಾರೈಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ದೇಶ ಕಂಡ ಅದ್ಭುತ ನಾಯಕ ನಟ ಅನಂತ ನಾಗ್‌. ಮಲಯಾಳಂ ಸಿನಿಮಾದ ಸರಳ ನಟನೆ ಅನಂತ ನಾಗ್‌ ಅವರಲ್ಲಿ ಕಂಡಿದ್ದೇನೆ. ಅವರೊಬ್ಬ ಅಪ್ಪಟ ರಾಷ್ಟ್ರಭಕ್ತ’ ಎಂದು ಅಭಿನಂದಿಸಿದರು.

ಶಾಸಕ ಡಿ ವೇದವ್ಯಾಸ ಕಾಮತ್‌ ಮಾತನಾಡಿ, ‘ಇಡೀ ಕುಟುಂಬ ನೋಡುವ ಸಿನಿಮಾ ನೀಡುತ್ತಿದ್ದ ಅನಂತ ನಾಗ್‌ ಅವರ ಕೊಡುಗೆ ಸಮಾಜಕ್ಕೆ ದೊಡ್ಡದು. ಮನಸ್ಸಿನ ದುಗುಡಕ್ಕೆ ಸಿನಿಮಾ ಸಾಂತ್ವನ ನೀಡುತ್ತದೆ. ಹಾಗಾಗಿ ಕಲಾವಿದರ ಶ್ರಮ ಸಾರ್ಥಕ. ಕಲಾವಿದರಾಗಿ ಅನಂತನಾಗ್‌ ಹಲವರನ್ನು ಬೆಳೆಸಿದ್ದಾರೆ. ಅವರ ಮಾರ್ಗದರ್ಶನ ಕಿರಿಯರಿಗೆ ಸಿಗಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮಾತನಾಡಿ, ‘ನಾಡಿನ ಜನರ ಪ್ರೀತಿ ತೋರಿಸುವ ಕಾರ್ಯಕ್ರಮವಿದು. ಸುಂದರ ಕ್ಷಣದ ಗೊಂಚಲಿನ ಅನುಭವ ಇಲ್ಲಿಆಗಿದೆ. ಅನಂತನಾಗ್‌ ನಮ್ಮವರಾಗಿ ಸಂಬಂಧ ಬೆಳೆದವರು’ ಎಂದರು. ಹಿರಿಯ ನಟ ಡಾ ದೇವದಾಸ ಕಾಪಿಕಾಡ್‌ ಮಾತನಾಡಿ, ‘ಕನ್ನಡದ ಸ್ಫುರದ್ರೂಪಿ ನೈಜ ನಟನೆಯ ನಟ ಅನಂತ ನಾಗ್‌ ನಮಗೆ ಆದರ್ಶ. ಅವರ ಸಿನಿಮಾದ ಎಲ್ಲ ಹಾಡುಗಳೂ ಸೂಪರ್‌ ಹಿಟ್‌ ಆಗಿವೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ’ ಎಂದರು.

ಮಂಗಳಾದೇವಿ ಕೃಪೆ ಕಾರಣ
‘ನಾನು ಕರಾವಳಿಯಲ್ಲಿ ಬೆಳೆದವ ಎಂಬುದು ಹೆಮ್ಮೆ. ನೂರಾರು ಬಾರಿ ಇಲ್ಲಿಂದ ಓಡಾಡಿದ್ದೇನೆ. ಮಂಗಳಾದೇವಿ ಕೃಪೆಯಿಂದ ಇಂದು ಇಲ್ಲಿ ಹುಟ್ಟುಹಬ್ಬ ನೆರವೇರಿದೆ. ಎಲ್ಲ ಮಹಾನ್‌ ವ್ಯಕ್ತಿಗಳ ನಟನೆ ಮಾಡಿದ್ದೇನೆ. ಗುರುಗಳ ಆಶಿರ್ವಾದದಿಂದ ಇಲ್ಲಿ ಸನ್ಮಾನ ಪಡೆದಿದ್ದು, ಧನ್ಯತಾ ಭಾವನೆ ಮೂಡಿದೆ. ನನ್ನ ಹಾಡಿಗೆ ಪುಟಾಣಿಗಳ ನೃತ್ಯ ಅದ್ಭುತ ಕಲ್ಪನೆ..’ ಎನ್ನುತ್ತಾ ‘ಭಾಗ್ಯದ ಲಕ್ಷ್ಮೀ ಬಾರಮ್ಮಾ..’ ಹಾಡನ್ನು ಹಾಡಿ ಹಿರಿಯ ನಟ ಅನಂತ್‌ ನಾಗ್‌ ಎಲ್ಲರನ್ನೂ ರಂಜಿಸಿದರು.

ಕೆನರಾ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ವಾಸುದೇವ ಕಾಮತ್‌, ತುಳು ಸಾಂಸ್ಕೃತಿಕ ಪ್ರತಿಷ್ಠಾನದ ಗಿರಿಧರ ಶೆಟ್ಟಿ, ರಂಗ ಸಂಗಾತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಸ್ವಾಗತಿಸಿದರು. ಶಶಿರಾಜ್‌ ಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತನಾಗ್‌ ಅಭಿನಂದನಾ ಸಮಿತಿ ಸಂಚಾಲಕ ಗೋಪಿನಾಥ್‌ ಭಟ್‌ ವಂದಿಸಿದರು.

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

4 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

4 hours ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

4 hours ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

7 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

8 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

8 hours ago