ಉಡುಪಿ: ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ,ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಮೇಲೆ ಗೂಂಡಾರಾಜ್ಯವಾಗಿದೆ.ಸರ್ಕಾರ ಬಂದಾಲೇ ಪಾಕಿಸ್ತಾನ ಕರ ಘೋಷಣೆ ಆಯಿತು. ವಿಜಯೋತ್ಸವದಲ್ಲಿ ಪಾಕಿಸ್ತಾನ ಧ್ವಜ ಹಾರಿತು.ಬೆಳಗಾಂನಲ್ಲಿ ಒಬ್ಬ ಮುನಿಯ ಹತ್ಯೆ ಆಯಿತು.ಹಲ್ಲೆ ಗೂಂಡಾ ಪ್ರವರ್ತನೆಗಳು ನಿತ್ಯ ನಿರಂತರವಾಗಿದೆ ಎಂದು ಹೇಳಿದ್ದಾರೆ.
ವಿಧಾನಸೌಧದ ಒಳಗೆ ಪಾಕಿಸ್ತಾನಕ್ಕೆ ಜಯಕಾರ ಹಾಕಿದವರನ್ನು ಬಂಧನ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅತ್ಯಾಚಾರಗಳು ಜಾಸ್ತಿ ಆಗುತ್ತಿವೆ.ಕೆಡಿಪಿ ಸಭೆಯಲ್ಲಿ ನಮ್ಮ ಶಾಸಕರ ಮೇಲೆ ಕಾಂಗ್ರೆಸ್ ಶಾಸಕರು ಕೈ ಎತ್ತುತ್ತಾರೆ. ಬಳ್ಳಾರಿಯಲಿ ಗುಂಡು ಹೊಡೆಯುತ್ತಾರೆ.ಶಾಸಕರ ಸಹವರ್ತಿ ಅವರದ್ದೇ ಕಾರ್ಯಕರ್ತನನ್ನು ಕೊಲ್ಲುತ್ತಾರೆ.ಇದು ಕಾಂಗ್ರೆಸ್ ಸರಕಾರದ ಮಾನಸಿಕತೆಯನ್ನು ತೋರಿಸುತ್ತದೆ.ಈ ಎಲ್ಲಾ ಕೃತ್ಯಗಳನ್ನು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಸಮರ್ಥನೆ ಮಾಡುತ್ತಾರೆ.ರಾಮರಾಜ್ಯ ಗಾಂಧಿಯ ಕನಸು ನನಸಾಗಿಲ್ಲ, ಇದು ರಾವಣ ರಾಜ್ಯ.ಕರ್ನಾಟಕ ಲಂಕಾಪುರ ಆಗುತ್ತಿದೆ.ರಾವಣನು ಕೂಡ ಸಿದ್ದರಾಮಯ್ಯನಂತೆ ಬುದ್ಧಿವಂತನಿದ್ದ. ರಾವಣ ಕೂಡ ಸಿದ್ದರಾಮಯ್ಯನವರಂತೆ ಅದ್ಭುತ ಜ್ಞಾನಿಯಾಗಿದ್ದ.ಸಿದ್ದರಾಮಯ್ಯನವರ ಹೆಸರು ಬದಲಾವಣೆ ಯಾಗುತ್ತಿದೆಯಾ ಸಂಶಯ. ನಮ್ಮಲ್ಲೂ ಸೀತೆಯ ಅಪಹರಣವಾಗುತ್ತಿದೆ,ಸೀತೆಯ ಮೇಲೆ ಹಲ್ಲೆಗಳು ನಡೆಯುತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…