ನವದೆಹಲಿ:,-ಅನೇಕರನ್ನು ಬಲಿ ತೆಗೆದುಕೊಂಡ ಬ್ಲೂವೇಲ್ ಗೇಮ್ ಹಾವಳಿ ಕಡಿಮೆಯಾಗಿ ಜನರ ನಿರಾಶವಾಗುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮಹಾಮಾರಿ ಆತಂಕ ಮೂಡಿಸಿದೆ. ಬ್ಲೂವೇಲ್‍ಗಿಂತಲೂ ಖತರ್ನಾಕ್ ಆಗಿರುವ ಇದರ ಹೆಸರು ಮೊಮೊ ಚಾಲೆಂಜ್. ವ್ಯಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಗೇಮ್‍ಗೆ ಆಹ್ವಾನಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಭಯಾನಕ ಗೇಮ್ ಇದಾಗಿದೆ.
ಮಕ್ಕಳು ಮತ್ತು ಯುವಜನಾಂಗಕ್ಕೆ ಇದರಿಂದ ದೊಡ್ಡ ಕಂಟಕವಾಗುವ ಭೀತಿ ಆವರಿಸಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮೊಮೊ ಚಾಲೆಂಜ್‍ನ ಕಬಂಧ ಬಾಹುಗಳು ಚಾಚಿಕೊಂಡಿರುವುದು ಪೊಲೀಸರ ನಿದ್ದೆಗೆಡಿಸಿದೆ. ಕೀಕೀ ಡ್ಯಾನ್ಸ್ ಚಾಲೆಂಜ್‍ನಿಂದ ಜನರು ಕಿರಿಕಿರಿ ಅನುಭವಿಸುತ್ತಿರುವಾಗಲೇ ಮೊಮೊ ಭೂತದ ಆತಂಕದಿಂದ ಭಯಪಡುವಂತಾಗಿದೆ. ದೊಡ್ಡ ಕಣ್ಣುಗುಡ್ಡೆಗಳು ಹೊರಬಂದಿರುವ ವಿಕಾರ ರೂಪದ ಮೊಮೊ ಹೆಸರಿನಲ್ಲಿ ಚಾಲೆಂಜ್ ಹಾಕುವ ಸಂದೇಶಗಳು ಮೊಬೈಲ್ ಫೋನ್‍ಗಳಲ್ಲಿ ಈಗಾಗಲೇ ಹರಿದಾಡುತ್ತಿವೆ. ಯಾವುದೇ ಒಂದು ಸ್ಥಳಕ್ಕೆ ಮಕ್ಕಳು ಅಥವಾ ಯುವಕ-ಯುವತಿಯರನ್ನು ಆಹ್ವಾನಿಸಿ ಸೂಸೈಡ್ ಗೇಮ್‍ಗಳಿಗೆ ಪ್ರಚೋದನೆ ನೀಡುವ ಭಯಾನಕ ಸೂಸೈಡ್ ಗೇಮ್ ಇದಾಗಿದೆ.
ವ್ಯಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಮಕ್ಕಳನ್ನು ಹೆದರಿಸಿ ಕಾಡುವ ಮೊಮೊ ಗುಮ್ಮ ಇದಾಗಿದೆ. ಈ ಚಾಲೆಂಜ್ ಸ್ವೀಕರಿಸಿ ಅದನ್ನು ಅನುಸರಿಸಿದರೆ ಬ್ಲೂವೇಲ್ ಆನ್‍ಲೈನ್ ಗೇಮ್‍ನಂತೆ ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇರಳ ರಾಜ್ಯದ ಅಳಪುಳದಲ್ಲಿ ನಿನ್ನೆಯಷ್ಟೇ ಮೊಮೊ ಹೆಸರಿನಲ್ಲಿ ಯುವಕನೊಬ್ಬನಿಗೆ ಸಂದೇಶವೊಂದು ರವಾನೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ತಲೆದೋರಿತ್ತು. ಜಿಲ್ಲಾ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಇಂಥ ಸಂದೇಶಗಳಿಗೆ ಹೆದರಬೇಡಿ. ಮೆಸೇಜ್‍ನಲ್ಲಿ ಹಾಕುವ ಸವಾಲುಗಳನ್ನು ಯಾವುದೇ ಕಾರಣಕ್ಕೂ ಅನುಸರಿಸಬೇಡಿ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…