Featured

ಹುಷಾರ್…ಬ್ಲೂವೇಲ್‍ಗಿಂತಲೂ ಡೇಂಜರಸ್ ಮೊಮೊ ಸೂಸೈಡ್ ಗೇಮ್..!

ನವದೆಹಲಿ:,-ಅನೇಕರನ್ನು ಬಲಿ ತೆಗೆದುಕೊಂಡ ಬ್ಲೂವೇಲ್ ಗೇಮ್ ಹಾವಳಿ ಕಡಿಮೆಯಾಗಿ ಜನರ ನಿರಾಶವಾಗುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮಹಾಮಾರಿ ಆತಂಕ ಮೂಡಿಸಿದೆ. ಬ್ಲೂವೇಲ್‍ಗಿಂತಲೂ ಖತರ್ನಾಕ್ ಆಗಿರುವ ಇದರ ಹೆಸರು ಮೊಮೊ ಚಾಲೆಂಜ್. ವ್ಯಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಗೇಮ್‍ಗೆ ಆಹ್ವಾನಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಭಯಾನಕ ಗೇಮ್ ಇದಾಗಿದೆ.

ಮಕ್ಕಳು ಮತ್ತು ಯುವಜನಾಂಗಕ್ಕೆ ಇದರಿಂದ ದೊಡ್ಡ ಕಂಟಕವಾಗುವ ಭೀತಿ ಆವರಿಸಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮೊಮೊ ಚಾಲೆಂಜ್‍ನ ಕಬಂಧ ಬಾಹುಗಳು ಚಾಚಿಕೊಂಡಿರುವುದು ಪೊಲೀಸರ ನಿದ್ದೆಗೆಡಿಸಿದೆ. ಕೀಕೀ ಡ್ಯಾನ್ಸ್ ಚಾಲೆಂಜ್‍ನಿಂದ ಜನರು ಕಿರಿಕಿರಿ ಅನುಭವಿಸುತ್ತಿರುವಾಗಲೇ ಮೊಮೊ ಭೂತದ ಆತಂಕದಿಂದ ಭಯಪಡುವಂತಾಗಿದೆ.  ದೊಡ್ಡ ಕಣ್ಣುಗುಡ್ಡೆಗಳು ಹೊರಬಂದಿರುವ ವಿಕಾರ ರೂಪದ ಮೊಮೊ ಹೆಸರಿನಲ್ಲಿ ಚಾಲೆಂಜ್ ಹಾಕುವ ಸಂದೇಶಗಳು ಮೊಬೈಲ್ ಫೋನ್‍ಗಳಲ್ಲಿ ಈಗಾಗಲೇ ಹರಿದಾಡುತ್ತಿವೆ. ಯಾವುದೇ ಒಂದು ಸ್ಥಳಕ್ಕೆ ಮಕ್ಕಳು ಅಥವಾ ಯುವಕ-ಯುವತಿಯರನ್ನು ಆಹ್ವಾನಿಸಿ ಸೂಸೈಡ್ ಗೇಮ್‍ಗಳಿಗೆ ಪ್ರಚೋದನೆ ನೀಡುವ ಭಯಾನಕ ಸೂಸೈಡ್ ಗೇಮ್ ಇದಾಗಿದೆ.

ವ್ಯಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಮಕ್ಕಳನ್ನು ಹೆದರಿಸಿ ಕಾಡುವ ಮೊಮೊ ಗುಮ್ಮ ಇದಾಗಿದೆ. ಈ ಚಾಲೆಂಜ್ ಸ್ವೀಕರಿಸಿ ಅದನ್ನು ಅನುಸರಿಸಿದರೆ ಬ್ಲೂವೇಲ್ ಆನ್‍ಲೈನ್ ಗೇಮ್‍ನಂತೆ ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇರಳ ರಾಜ್ಯದ ಅಳಪುಳದಲ್ಲಿ ನಿನ್ನೆಯಷ್ಟೇ ಮೊಮೊ ಹೆಸರಿನಲ್ಲಿ ಯುವಕನೊಬ್ಬನಿಗೆ ಸಂದೇಶವೊಂದು ರವಾನೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ತಲೆದೋರಿತ್ತು. ಜಿಲ್ಲಾ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಇಂಥ ಸಂದೇಶಗಳಿಗೆ ಹೆದರಬೇಡಿ. ಮೆಸೇಜ್‍ನಲ್ಲಿ ಹಾಕುವ ಸವಾಲುಗಳನ್ನು ಯಾವುದೇ ಕಾರಣಕ್ಕೂ ಅನುಸರಿಸಬೇಡಿ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

11 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

11 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

11 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

15 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

15 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

15 hours ago