ನವದೆಹಲಿ : ‘ಅನುಪಮಾ’ ಧಾರಾವಾಹಿಯ ನಟ ನಿತೀಶ್ ಪಾಂಡೆ ತಮ್ಮ 51 ನೇ ವಯಸ್ಸಿನಲ್ಲಿ ನಿಧನರಾದರು. ಮೇ 23ರ ಮಂಗಳವಾರ ನಿತೀಶ್ ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ವರದಿಗಳ ಪ್ರಕಾರ, ನಾಸಿಕ್ ಬಳಿಯ ಇಗತ್ಪುರಿಯಲ್ಲಿ ತಡರಾತ್ರಿ ನಟನಿಗೆ ತೀವ್ರ ಹೃದಯ ಸ್ತಂಭನವಾಗಿದೆ ಅಂತ ಕುಟುಂಬ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಉತ್ತರಾಖಂಡದ ಅಲ್ಮೋರಾ ಕುಮಾವೂನ್ ಮೂಲದ ನಿತೇಶ್ ನಟಿ ಅರ್ಪಿತಾ ಪಾಂಡೆ ಅವರನ್ನು ವಿವಾಹವಾದರು. ಅವರು 2003ರಲ್ಲಿ ವಿವಾಹವಾದರು. ನಿತೇಶ್ ಈ ಹಿಂದೆ ನಟಿ ಅಶ್ವಿನಿ ಕಲ್ಸೇಕರ್ ಅವರನ್ನು ವಿವಾಹವಾಗಿದ್ದರು.
ಖೋಸ್ಲಾ ಕಾ ಘೋಸ್ಲಾʼದಲ್ಲಿನ ಅವರ ಅಭಿನಯ ಅಪಾರ ಜನರನ್ನು ರಂಜಿಸಿತ್ತು. ʼಅನುಪಮಾʼ ಮತ್ತು ʼಪ್ಯಾರ್ ಕಾ ದರ್ದ್ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾʼ ಧಾರಾವಾಹಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.
ತೇಜಸ್, ಮಂಜಿಲೀನ್ ಅಪಾನಿ ಅಪಾನಿ, ಸಾಯಾ, ಅಸ್ತಿತ್ವ ಏಕ್ ಪ್ರೇಮ್ ಕಹಾನಿ, ಜುಸ್ತಜೂ ಮತ್ತು ದುರ್ಗೇಶ್ ನಂದಿನಿಯಂತಹ ಶೋಗಳಲ್ಲಿ ಕಾಣಿಸಿಕೊಂಡರು. ಅವರು ಡ್ರೀಮ್ ಕ್ಯಾಸಲ್ ಪ್ರೊಡಕ್ಷನ್ ಹೌಸ್ ಕೂಡ ಹೊಂದಿದ್ದರು. ʼಓಂ ಶಾಂತಿ ಓಂʼ ,ʼಬದಾಯಿ ದೋʼ ಮುಂತಾದ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…