Featured

ಹೃದಯಾಘಾತ : WWE ದಿಗ್ಗಜ ರಸ್ಲರ್ ಹಲ್ಕ್ ಹೋಗಾನ್ ನಿಧನ – vishwanews24

ಹೃದಯಾಘಾತ : WWE ದಿಗ್ಗಜ ರಸ್ಲರ್ ಹಲ್ಕ್ ಹೋಗಾನ್ ನಿಧನ

ಫ್ಲೋರಿಡಾ: ವೃತ್ತಿಪರ ಕುಸ್ತಿ ಸೂಪರ್‌ಸ್ಟಾರ್ ಹಲ್ಕ್ ಹೋಗನ್(71) ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.

ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE)ನ ಅತಿದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದ ಹೋಗನ್ ಅವರು ತಮ್ಮ ಫ್ಲೋರಿಡಾದ ಮನೆಯಲ್ಲಿ ನಿಧನರಾಗಿರುವುದಾಗಿ ವರದಿಯಾಗಿದೆ. ಹೋಗನ್ ಬಹಳ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಗುರುವಾರ ಬೆಳಿಗ್ಗೆ 9.51 ರ ಸುಮಾರಿಗೆ, ಹಲ್ಕ್ ಹೋಗನ್ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ವೈದ್ಯಕೀಯ ತಂಡವನ್ನು ಮನೆಗೆ ಕರೆಸಿ, ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

1953 ರ ಆಗಸ್ಟ್ 11ರಂದು ಜಾರ್ಜಿಯಾದ ಆಗಸ್ಟಾದಲ್ಲಿ ಹೋಗನ್ ಜನಿಸಿದರು. ಹೋಗನ್ ಅವರ ನಿಜವಾದ ಹೆಸರು ಟೆರ್ರಿ ಜೀನ್ ಬೊಲಿಯಾ. 1977 ರಲ್ಲಿ ವೃತ್ತಿಪರ ಕುಸ್ತಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, 1983 ರಲ್ಲಿ WWE ಗೆ ಪ್ರವೇಶಿಸುತ್ತಾರೆ. ಹೋಗನ್ ತಮ್ಮ WWE ವೃತ್ತಿಜೀವನದಲ್ಲಿ ಆರು ಬಾರಿ WWE ಚಾಂಪಿಯನ್‌ಶಿಪ್ ಮತ್ತು ಆರು ಬಾರಿ WCW ವರ್ಲ್ಡ್ ಹೆವಿವೇಟ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಅನೇಕ ಪ್ರಸಿದ್ಧ ಕುಸ್ತಿಪಟುಗಳನ್ನು ಸೋಲಿಸುವ ಮೂಲಕ ಹೋಗನ್ ಅವರು 1980 ರ ದಶಕವನ್ನು ಸಂಪೂರ್ಣವಾಗಿ ಆಳಿದರು.

ಮೊದಲ 9 ರೆಸಲ್‌ಮೇನಿಯಾ ಈವೆಂಟ್‌ಗಳಲ್ಲಿ 8 ರಲ್ಲಿ ಹೋಗನ್ ಭಾಗವಹಿಸಿದ್ದರು. 2012 ರ ಜನವರಿಯಲ್ಲಿ ಹೋಗನ್ ಕುಸ್ತಿಯಿಂದ ನಿವೃತ್ತರಾಗುತ್ತಾರೆ. ಅವರು ಅನೇಕ ಹಾಲಿವುಡ್ ಚಲನಚಿತ್ರಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಜೊತೆಗೆ 2005 ರಲ್ಲಿ ಹೋಗನ್ ಅವರನ್ನು WWE ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿತ್ತು. ಇನ್ನು ಹೋಗನ್ ಅವರ ನಿಧನಕ್ಕೆ ಪ್ರಪಂಚದಾದ್ಯಂತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Vishwa News 24

Recent Posts

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

2 hours ago

ಸುರತ್ಕಲ್ ಬಾಲಕಿ ಆತ್ಮಹತ್ಯೆ ಪ್ರಕರಣ : ಪೋಷಕರ ನಡೆ ಕುರಿತು ವಿಷಾದ ವ್ಯಕ್ತಪಡಿಸಿದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ – vishwanews24

ಸುರತ್ಕಲ್ ಬಾಲಕಿ ಆತ್ಮಹತ್ಯೆ ಪ್ರಕರಣ : ಪೋಷಕರ ನಡೆ ಕುರಿತು ವಿಷಾದ ವ್ಯಕ್ತಪಡಿಸಿದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಂಗಳೂರು …

2 hours ago

ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ಆಗಿಲ್ಲ:  ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ  – vishwanews24

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್ ಆಗಿಲ್ಲ:  ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ  ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾಲೋಪವಾಗಿದೆ ಅಂತ ಸಿಎಜಿ…

2 hours ago

ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ – vishwanews24

ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ ಮಂಗಳೂರು :…

2 hours ago

ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ – vishwanews24

ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ ಅಯೋಧ್ಯೆ: ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತಾದಿಗಳು ನೀಡಿದ್ದ…

2 hours ago

ಆರ್‌ ಎಸ್‌ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ – vishwanews24

ಆರ್‌ ಎಸ್‌ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ…

3 hours ago