ಬೆಂಗಳೂರು: ಇದೀಗ ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹೆಚ್ಡಿಕೆ ಸರ್ಕಾರವನ್ನು ಯಾರು ಕೆಡುವಲು ಸಾಧ್ಯವಿಲ್ಲ. ನಾವು ಒಟ್ಟಾಗಿದ್ದೇವೆ ಹಾಗೂ ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ಮಾಧ್ಯಮದವರ ಸಹಕಾರ ಬೇಕು ಅಷ್ಟೆ. ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಉತ್ತಮ ಬಜೆಟ್ ಮಂಡನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಇದೇ ಸಮದರ್ಭದಲ್ಲಿ ಸಾಲಮನ್ನಾದ ಕುರಿತಾಗಿ ಮಾತನಾಡಿದ ಅವರು ಸಾಲಮನ್ನಾಕ್ಕೆ ಈ ವರ್ಷ 10,500 ಕೋಟಿ ಇಟ್ಟಿದ್ದೇವೆ. ಬೆಳೆ ಸಾಲ ಮಾತ್ರ ಈಗ ಮನ್ನಾ ಮಾಡಲಾಗಿದೆ. ಸಾಲಮನ್ನಾವನ್ನು 2 ಲಕ್ಷ ಕ್ಕೆ ನಿಗದಿ ಮಾಡಿದ್ದೇವೆ. ಕೆಲವು ರೈತರ 40-50 ಲಕ್ಷದ ವರೆಗೂ ಸಾಲ ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೇ ಅಕ್ಕಿಯಲ್ಲಿ ಕಡಿತ ಮಾಡಿದರೂ ಪೌಷ್ಟಿಕಾಂಶದಲ್ಲಿ ಹೆಚ್ಚಳವಾಗಿದೆ. ಈ ಬಜೆಟ್ ಹಳೆಯ ಬಜೆಟ್ನ ಗಾತ್ರ ಹೆಚ್ಚಿಸಿದೆ. ಇದು ಪೂರ್ಣ ಪ್ರಮಾಣದ ಬಜೆಟ್ ಎಂದೂ ತಿಳಿಸಿದ್ದಾರೆ
ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಬಜೆಟ್ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಕರಾವಳಿ ಭಾಗದ ಜನರಿಗೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂದಿ ದೂರಿದ್ದಾರೆ. ಇದೀಗ ಬಜೆಟ್ ಮಂಡನೆ ಬಳಿಕ ಸಿಎಂ ಕುಮಾರಸ್ವಾಮಿ ಬಿಜೆಪಿಯವರ ಟೊಳ್ಳು ಮಾತುಗಳನ್ನು ಜನ ನಂಬಬಾರದು, ಸಮ್ಮಿಶ್ರ ಸರ್ಕಾರವಿರುವುದು ನಾಡಿನ ಸಮಗ್ರ ಅಭಿವೃದ್ಧಿಗೆ ಇರುವುದು. ಕಲಾಪದಲ್ಲಿ ಇದಕ್ಕೆಲ್ಲಾ ಉತ್ತರಿಸುತ್ತೇನೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಬಿಜೆಪಿಯವರ ಟೊಳ್ಳು ಮಾತುಗಳನ್ನು ಜನ ನಂಬಬಾರದು, ಸಮ್ಮಿಶ್ರ ಸರ್ಕಾರವಿರುವುದು ನಾಡಿನ ಸಮಗ್ರ ಅಭಿವೃದ್ಧಿಗೆ ಇರುವುದು. ಕಲಾಪದಲ್ಲಿ ಇದಕ್ಕೆಲ್ಲಾ ಉತ್ತರಿಸುತ್ತೇನೆ ಎಂದಿದಸ್ದಾರೆ. ಅಲ್ಲದೇ ಬೆಂಗಳೂರು ನಗರಾಭಿವೃದ್ಧಿಗೆ ಸಮಗ್ರ ಒತ್ತು ನೀಡಿದ್ದೇವೆ. ನೀಡಿದ ಭರವಸೆಗಳ ಪೂರೈಸಲು ಅಧಿಕಾರಿಗಳು ಜೊತೆ ನೀಡಲಿದ್ದಾರೆ. 5 ದಿನಗಳಿಂದ ಅಧಿಕಾರಿಗಳ ನಿದ್ದೆಗೆಡಿಸಿದ್ದೇನೆ.
ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಅಧಿಕಾರಿಗಳಿಗೆ ಹೆಚ್ಚಿನ ಕೆಲಸ ಕೊಟ್ಟಿದ್ದೇನೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…
ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಉಡುಪಿ : ಮಲಬಾರ್…
ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…
ಪ್ರಧಾನಿ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…
ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…
ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…