ಉಡುಪಿ

ಹೆಜಮಾಡಿ: ಅಪಾಯ ಆಹ್ವಾನಿಸುವ ರಸ್ತೆ

ಪಡುಬಿದ್ರಿ: ಹೆಜಮಾಡಿಯ ಹಳೇ ಎಂಬಿಸಿ ರಸ್ತೆ ಗುಡ್ಡೆ ಅಂಗಡಿ ಪ್ರದೇಶದಲ್ಲಿ ನವಯುಗ ಟೋಲ್‌ ಗೇಟ್‌ ಬಳಿಕ ಹೆದ್ದಾರಿ ಸೇರುವಲ್ಲಿ ಬೃಹದಾಕಾರದ ಹೊಂಡವೊಂದು ಬಾಯ್ದೆರೆದಿದೆ. ಇಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿ ಗಾಯಗೊಳ್ಳಲು ಕಾರಣವಾಗಿದೆ.

ವರ್ಷದ ಹಿಂದೆ ಟೋಲ್‌ ಸೋರಿಕೆ ತಡೆಗಟ್ಟಲು, ನವಯುಗ ಕಂಪನಿ ಇದೇ ಹಳೆ ಎಂಬಿಸಿ ರಸ್ತೆಯಲ್ಲಿ ಇನ್ನೊಂದು ಟೋಲ್‌ ನಿರ್ಮಾಣಕ್ಕೆ ಮುಂದಾಗಿತ್ತು. ಜಿಲ್ಲಾಡಳಿತದ ಗಮನಕ್ಕೆ ತಾರದೇ ಈ ಕೆಲಸವನ್ನು ಅದು ಮಾಡಿದ್ದು, ಪರಿಣಾಮ ಸಾರ್ವಜನಿಕರು ತೀವ್ರ ಪ್ರತಿರೋಧ ಒಡ್ಡಿದ್ದರು. ಬಳಿಕ ಅದನ್ನು ಕಂಪನಿ ಕೈಬಿಟ್ಟಿತ್ತು.

ಟೋಲ್‌ ನಿರ್ಮಾಣದ ಸಂದರ್ಭ ಜೆಸಿಬಿಯಲ್ಲಿ ಮಾಡಿದ್ದ ಕೆಲವೊಂದು ಹೊಂಡಗಳನ್ನು ಕಂಪನಿ ಮುಚ್ಚಿದ್ದರೂ, ಈಗ ಸಮಸೆ‌Âಯಾಗಿರುವ ಹೊಂಡವನ್ನು ಹಾಗೆಯೇ ಬಿಡಲಾಗಿತ್ತು.  ಈಗ ಹೆದ್ದಾರಿಯಿಂದ ಒಳನುಗ್ಗಿ ಬರುವ ಘನವಾಹನಗಳ ಭರಾಟೆಯಲ್ಲಿ ದ್ವಿಚಕ್ರವಾಹನ ಸವಾರರು ಅರಿವಿಲ್ಲದೇ ಹೊಂಡಕ್ಕೆ ಬೀಳುವಂತಾಗಿದೆ.  ಈಗೀಗ ಹೆದ್ದಾರಿಯಿಂದ ಒಳ ನುಗ್ಗಿ ಬರುವ ಘನ ವಾಹನಗಳ ಭರಾಟೆಯಲ್ಲಿ  ದ್ವಿಚಕ್ರ ಸವಾರರು ಅರಿವಿಲ್ಲದೇ ಹೊಂಡಕ್ಕೆ ಬೀಳುವಂತಾಗಿದೆ.  ರಸ್ತೆ ಹೊಂಡದ ಬಗ್ಗೆ ಹೆಜಮಾಡಿ ಗ್ರಾ,ಪಂ ಪಿಡಿಒ ಮೂಲಕ ಲೋಕೋಪಯೋಗಿ ಇಲಾಖೆಗೆ ಗಮನಸೆಳೆಯಲಾಗಿದೆ.

ಸಾರ್ವಜನಿಕರ ಜೀವಹಾನಿಯಾಗುವ ಮೊದಲು ಈ ಕುರಿತಾಗಿ ಲೋಕೋಪಯೋಗಿ ಇಲಾಖೆ  ಶೀಘ್ರ ಗುಂಡಿ ಮುಚ್ಚಬೇಕು. ಅಥವಾ ನವಯುಗ ಕಂಪನಿಯಿಂದಲೇ ಇದನ್ನು ಮುಚ್ಚುವ ಕೆಲಸ ಮಾಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago