ಪಡುಬಿದ್ರಿ: ಹೆಜಮಾಡಿಯ ಕೆ. ಕೆ. ಆರ್. ಟೋಲ್ ಪ್ಲಾಝಾದಲ್ಲಿ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳ ಮಾಲಕರು ವಾಹನದ ಆರ್. ಸಿ. ಪ್ರತಿ ಸಲ್ಲಿಸಲು ಆ. 31 ಅಂತಿಮ ದಿನವಾಗಿದೆ.
ಆ. 6ರಂದು ಬಂಟ್ವಾಳದ ಯುವಕನೊಬ್ಬ ದಾಂಧಲೆ ನಡೆಸಿದ ಘಟನೆ ಬಳಿಕ ಟೋಲ್ ಮುಖ್ಯಸ್ಥರು ವಿನಾಯಿತಿ ಹೊಂದಿದ ಸ್ಥಳೀಯ ವಾಹನಗಳ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದರು. ಈ ಸಂದರ್ಭ ಜುಲೈ„ ತಿಂಗಳೊಂದರಲ್ಲೆ 2000ಕ್ಕೂ ಅಧಿಕ ಹೊಸ ಸ್ಥಳೀಯ ವಾಹನಗಳು ಟೋಲ್ ವಿನಾಯಿತಿ ಪಡೆದ ಮಾಹಿತಿ ಲಭ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಸಂಪೂರ್ಣ ಟೋಲ್ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳು ತಮ್ಮ ಆರ್. ಸಿ. ಪ್ರತಿಯೊಂದನ್ನು ಟೋಲ್ ಕಛೇರಿಯಲ್ಲಿ ಆ. 10ರೊಳಗೆ ನೀಡುವಂತೆ ಬ್ಯಾನರ್ ಮೂಲಕ ಮಾಹಿತಿ ನೀಡಿತ್ತು.
ಈ ಬಗ್ಗೆ ಸ್ಥಳೀಯರೆಲ್ಲರಿಗೂ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಆ. 9 ಶುಕ್ರವಾರ ಸಂಜೆ ಟೋಲ್ ವಿರೋಧಿ ಹೋರಾಟ ಸಮಿತಿಯು ಅಧ್ಯಕ್ಷ ಶೇಖರ್ ಹೆಜ್ಮಾಡಿ ನೇತೃತ್ವದಲ್ಲಿ ಟೋಲ್ ಮ್ಯಾನೇಜರ್ ತಿಮ್ಮಯ್ಯ ಎ. ಎಸ್.
ಈ ಸಂದರ್ಭ ಮಾತನಾಡಿದ ತಿಮ್ಮಯ್ಯ ಅವರು, ಜಿಲ್ಲಾಡಳಿತ ತಿಳಿಸಿದಂತೆ ಹಿಂದಿನಂತೆ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ. ಅದರೆ ಹೆಜಮಾಡಿ ಗ್ರಾಮವೊಂದರಲ್ಲೇ 2000ಕ್ಕೂ ಹೊಸ ವಾಹನಗಳು ಜುಲೈ ತಿಂಗಳಲ್ಲಿ ಟೋಲ್‌ನಲ್ಲಿ ಸಂಚರಿಸಿದೆ. ಈ ಪೈಕಿ ಹೆಚ್ಚು ನಕಲಿ ದಾಖಲೆಗಳಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಾಹನಗಳು ಆರ್. ಸಿ. ಪ್ರತಿ ಒದಗಿಸಿದರೆ ಕಂಪ್ಯೂಟರ್ ಮೂಲಕ ದಾಖಲೆ ಸಂಗ್ರಹಿಸಿ ಅರ್ಹರಿಗೆ ವಿನಾಯಿತಿ ನೀಡಲು ಸಾಧ್ಯವಾಗುತ್ತದೆ. ಹಾಗಾಗಿ ಸಮಿತಿಯ ಬೇಡಿಕೆ ಹಿನ್ನೆಲೆಯಲ್ಲಿ ದಾಖಲೆ ಪ್ರತಿ ಒದಗಿಸಲು ಆ. 31ರವರೆಗೆ ಅವಕಾಶ ಕಲ್ಪಿಸಲಾಗುವುದು ಎಂದವರು ಹೇಳಿದರು.
ಈ ಸಂದರ್ಭ ಟೋಲ್ ಪ್ಲಾಝಾದಲ್ಲಿ ಸ್ಥಳೀಯ ನೌಕರರ ಬಗ್ಗೆ ಶೇಖರ್ ಹೆಜಮಾಡಿ ಮೌಖೀಕ ಮನವಿ ಸಲ್ಲಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಜತೆಗೆ ಭದ್ರತೆಯನ್ನೂ ಒದಗಿಸುವಂತೆ ವಿನಂತಿಸಿದರು.
ಸಮಿತಿಯ ಪದಾಧಿಕಾರಿಗಳಾದ ಪಾಂಡುರಂಗ ಕರ್ಕೇರ, ಮಧು ಅಚಾರ್ಯ ಮೂಲ್ಕಿ, ಸುಧೀರ್ ಕರ್ಕೇರ, ತೇಜಪಾಲ್ ಸುವರ್ಣ, ಸಂತೋಷ್ ಪಡುಬಿದ್ರಿ, ರಮೀಝ್ ಹುಸೈನ್, ಖಾದರ್ ಹೆಜ್ಮಾಡಿ, ಪ್ರಾಣೇಶ್ ಹೆಜ್ಮಾಡಿ, ವಿಕ್ರಮ್‌ರಾಜ್ ಸುವರ್ಣ, ಅಹಮ್ಮದ್ ಕಬೀರ್, ಅಬ್ದುಲ್ ರೆಹ್ಮಾನ್, ಹನೀಫ್ ಕನ್ನಂಗಾರ್, ಕಾಸಿಮ್ ಮತ್ತಿತರರು ಉಪಸ್ಥಿತರಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…