Featured

ಹೆಜಮಾಡಿ ಬಂದರಿನ ಜೊತೆ ಆಧುನಿಕ ತಂತ್ರಜ್ಞಾನದೊಂದಿಗೆ ಸಮುದ್ರದಲ್ಲಿ ತೇಲುವ ಜೆಟ್ಟಿ ನಿರ್ಮಾಣ ಮಾಡಲಾಗುವುದು: ಸಚಿವ ನಾಡಗೌಡ

ಕಾಪು : ಕರ್ನಾಟಕ ಸರ್ಕಾರ ಪಶುಸಂಗೋಪನ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೆಜಮಾಡಿ ಬಂದರು ಪ್ರದೇಶಕ್ಕೆ ಭೇಟಿ ನೀಡಿದರು. ಬಂದರು ಸಂಪರ್ಕ ರಸ್ತೆ ಕೋಟಿ ಅನುದಾನದಲ್ಲಿ ಇಷ್ಟರ ತನಕ ಕಾಮಗಾರಿ ಮುಗಿದು ಜನರ ಉಪಯೋಗಕ್ಕೆ ಬರಬೇಕಿತ್ತು. ಎಪ್ರಿಲ್ ತಿಂಗಳಲ್ಲಿ ಟೆಂಡರಾದ ಕಾಮಗಾರಿ ಚುನಾವಣಾ ನೀತಿ ಸಂಹಿತೆಯ ಕಾರಣ ವಿಳಂಭವಾಯಿತು. ಆದರೂ ಚುನಾವಣೆ ಮುಗಿದು ತಿಂಗಳು ಎರಡಾದರೂ ಕಾಮಗಾರಿ ಪ್ರಾರಂಭಿಸದೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಸಚಿವರು ಬರುವ ಸೂಚನೆ ಸಿಕ್ಕದ ಕೂಡಲೇ ಗುತ್ತಿಗೆ ದಾರರು ರಾತೋರಾತ್ರಿ ರಸ್ತೆಗೆ ಜಲ್ಲಿ ಸುರಿದು ರಿಪೇರಿ ಪ್ರಾರಂಭಿಸಿದರು. ಜೆಸಿಬಿ ಕೈ ಕೊಟ್ಟಿದ್ದರಿಂದ ಕಾಮಗಾರಿ ಅರ್ಧದಲ್ಲಿಯೇ ನಿಂತು. ಬಂದರು ಪ್ರದೇಶಕ್ಕೆ ಯಾವುದೇ ವಾಹನ ತೆರಳದಂತಾಯಿತು.
ಸಚಿವರ ಆಗಮನವಾಗುತಿದ್ದಂತೆಯೇ ಸಚಿವರಿಗೆ ಬಂದರ ದರ್ಶನ ಭಾಗ್ಯ ಲಭಿಸದೆ ದಾರಿಯಲ್ಲಿಯೇ ಅವರನ್ನು ಸ್ವಾಗತಿಸಿದರು. ಮಾಧ್ಯಮದೊಡನೆ ಮಾತನಾಡಿದ ನಾಡೆಗೌಡ ಈ ಪ್ರದೇಶದ ಬಂದರು ನಿರ್ಮಾಣಕ್ಕಾಗಿ ಕೆಂದ್ರ ಹಾಗು ರಾಜ್ಯ ಸರಕಾರ ಈಗಾಗಲೇ ಒಪ್ಪಿಕೊಂಡಿವೆ. ಇದರ ಬಗ್ಗೆ ಕರಾವಳಿಯನ್ನು ಯಾವುದೇ ರೀತಿಯಲ್ಲಿ ಸರಕಾರ ಕಡೆಗೆಣಿಸಿಲ್ಲ. ಹಿಂದಿನ ಸರಕಾರ ಏನು ಬಜೆಟ್ ಮಂಡಿಸಿದೆಯೋ ಅದನ್ನೆÃ ಮುಂದುರೆಸಿ ಕುಮಾರಸ್ವಾಮಿ ಸರ್ಕಾರ ಕಾರ್ಯ ವೆಸಗಲಿದೆ. ಇಲ್ಲಿ ಸಮುದ್ರದಲ್ಲಿ ತೇಲುವ ಜೆಟ್ಟಿಗಳನ್ನು ನಿರ್ಮಿಸು ಯೋಜನೆ ಇದೆ. ಸಮುದ್ರದಲ್ಲಿ ಇದನ್ನು ಮಾಡುವುದರಿಂದ ಯಾರದೇ ಪರವಾನಿಗೆ ಅಗತ್ಯ ಬೀಳುವುದಿಲ್ಲ. ಆಕ್ಷೆÃಪಣೆ ಗಳೂ ಬರುವುದಿಲ್ಲ. ಗೋವಾ ಮಾದರಿಯಲ್ಲಿ ಆಧುನಿಕ ತಂತ್ರಜ್ನಾನವನ್ನುಪಯೋಗಿಸಿ ಮಾಡಲಿದ್ದೆÃವೆ. ಇದರ ಬಗ್ಗೆ ತಜ್ಙರ ತಂಡವೊಂದನ್ನು ಗೋವಾಕ್ಕೆ ಕಳುಹಿಸಿ ಅಧ್ಯಯನ ಮಾಡಿ ಆಮೇಲೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಡಲಿದ್ದೆÃವೆ ಎಂದರು.
ಈ ಸಂದರ್ಭ ಮುಲ್ಕಿ ಪರ್ಸಿನ್ ಮತ್ತು ಟ್ರಾಲ್ ಬೋಟು ಸಂಘದ ವಿಜಯ ಬಂಗೇರ ಮಾತನಾಡಿ “ಹೆಜಮಾಡಿ ಬಂದರು ಬಗ್ಗೆ ನಾವು ಕಳೆದ ೪೦ ವರ್ಷಗಳಿಂದ ಶತಪ್ರಯತ್ನ ಮಾಡಿದ್ದೆÃವೆ. ಈಗ ರಾಜ್ಯ ಮತ್ತು ಕೇಂದ್ರ ಸರಕಾರ ಇದರ ಬಗ್ಗೆ ಅನುಮೋದನೆ ಮಾಡಿದೆ. ರಾಜ್ಯ ಸರ್ಕಾರ ೫೦ ಶೇಕಡಾ ಕೊಡಲು ಒಪ್ಪಿದ್ದಾರೆ. ಇನ್ನಾದರೂ ಈ ಭಾಗಕ್ಕೆ ಬಂದರು ನಿರ್ಮಾಣ ಮಾಡಿದರೆ ನಮ್ಮ ಬಹುಕಾಲದ ಕನಸು ನನಸು” ಆದಂತಾಗುತ್ತದೆ ಎಂದರು.
ಸಚಿವರ ಜೊತೆಯಲ್ಲಿ ಶಾಸಕ ಲಾಲಜಿ ಮೆಂಡನ್,ಜೆಡಿಎಸ್ ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ , ಮುಂತಾದವರಿದ್ದರು.

Vishwa News 24

Recent Posts

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ – vishwanews24

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…

36 minutes ago

ಉಡುಪಿ : ಜೂ.12 ರಂದು ನೇರ ಸಂದರ್ಶನ – vishwanews24

ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…

43 minutes ago

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ಭೇಟಿ – vishwanews24

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…

49 minutes ago

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ – vishwanews24

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…

1 hour ago

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ – vishwanews24

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…

2 hours ago

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ – vishwanews24

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…

2 hours ago