ಪಡುಬಿದ್ರಿ : ಹೆಜಮಾಡಿಯ ಅಮಾಸೆಕರಿಯ ಸಮುದ್ರ ದಡದಲ್ಲಿ ಮೀನುಗಳ ಸುಗ್ಗಿ. ತಾ ಮುಂದು ನಾ ಮುಂದು ಪೈಪೋಟಿಯಲ್ಲಿ ಮೀನು ಹೆಕ್ಕಲು ಜನರು ಮುಗಿಬಿದ್ದಿದ್ದರು. ಅಪಾರ ಪ್ರಮಾಣ ದಲ್ಲಿ ಮೀನುಗಳು ನೀರಿನಿಂದ ಮೇಲಕ್ಕೆ ಬಂದು ಬೀಳುತ್ತಿದ್ದು ಸ್ಥಳೀಯರು ಗೋಣಿ ಚೀಲಗಳಲ್ಲಿ ತುಂಬಿಸಿ ವಾಹನಗಳಲ್ಲಿ ಕೊಂಡೊಯ್ದರು,, ಅಮಾಸೆಕರಿಯ ಜನರಿಗಂತು ಹಬ್ಬದ ವಾತಾವರಣ. ರಸ್ತೆಯಲ್ಲಿ ಹಾದು ಹೋಗುವವರ ಕೈಯಲ್ಲಿ ಚೀಲ ತುಂಬಾ ಮೀನು. ವಿಷಯ ತಿಳಿದ ಪಕ್ಕದ ಊರುಗಳಿಂದಲೂ ವಾಹನದಲ್ಲಿ ಬಂದು ಮೀನು ಕೊಂಡು ಹೋಗಿದ್ದಾರೆ. ಕಡಲ ಬದಿಯಲ್ಲಿ ಬಲು ಅಪರೂಪದ ಸನ್ನಿವೇಷ ,, ಮಕ್ಕಳಿಂದ ಹಿಡಿದು ಮುದುಕರೂ ಸಮುದ್ರ ತೀರದಲ್ಲಿ ಮೀನು ಹೆಕ್ಕುತಿರುವ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲೂ ಹೆಂಗಸರು ಮೀನು ಹೆಕ್ಕುವಲ್ಲಿ ಎತ್ತಿದ ಕೈ. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈ ರೀತಿ ಮೀನು ಸಿಗುವುದು ಬಲು ಅಪರೂಪ.
ಕೈ ರಂಪಣಿ ಬಲೆಯವರು ಮೀನಿಗಾಗಿ ಹಾಕಿದ ಬಲೆಗೆ ಸಿಲ್ವರ್ ಫಿಷ್ (ಬೊಳೆಂಜೀರ್) ತುಂಬಿದ್ದರಿಂದ ಬಲೆ ಎಳೆಯಲು ಕಷ್ಟವಾಗಿ ದಡಕ್ಕೆ ಬಂದು ಬಲೆಯನ್ನು ಎಳೆಯಲು ಪ್ರಯತ್ನಿಸುತಿದ್ದರು. ಬಲೆಯಲ್ಲಿ ಮೀನು ತುಂಬಿ ತುಳುಕಿದ್ದು, ಅತಿಯಾದ ಮೀನುಗಳು ಸಮುದ್ರ ದಡದಲ್ಲಿ ಎಲ್ಲರ ಕೈಗೆ ಸಿಗುವಂತೆ ಒದ್ದಾಡುವ ದೃಶ್ಯ ಸಾಮಾನ್ಯವಾಗಿತ್ತು. ಸಮುದ್ರ ತೀರದಲ್ಲಿ ಈ ದೃಶ್ಯ ನೋಡಲು ಜನಸಾಗರವೇ ಇದ್ದರೂ ಎಲ್ಲರ ಚಿತ್ತ ಮೀನು ಹಿಡಿಯುವಲ್ಲೇ ಇತ್ತು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…