ರಾಜ್ಯಾದ್ಯಂತ ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಸಾಹಸ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ.
ವೀರಗಾಸೆ ಕಲೆಗೆ ಮತ್ತು ಅದಕ್ಕೆ ಸಂಬಂಧಿಸಿದ ವೀರಭದ್ರ ದೇವರಿಗೆ ಅವಮಾನ ಮಾಡಿದ ನಿರ್ದೇಶಕರು, ಕಲಾವಿದರು ಹಾಗೂ ನಿರ್ಮಾಪಕರು ಕೂಡಲೇ ಕ್ಷಮೆ ಕೇಳಬೇಕು ಹಾಗೂ ಆ ದೃಶ್ಯವನ್ನು ಸಿನಿಮಾದಿಂದ ಕೈ ಬಿಡಬೇಕು ಎಂಬ ಆಗ್ರಹ ಕೂಡ ಕೇಳಿ ಬರುತ್ತಿದೆ. ಈ ಕುರಿತು ನಟ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : ಕರಾವಳಿಯ ಕೆಲವು ಕಡೆಗಳಲ್ಲಿ ಕೆಂಗಣ್ಣುಕಾಯಿಲೆ ಸಮಸ್ಯೆ.. ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ – Vishwanews24
ಧನಂಜಯ್ ಈವರೆಗೂ ಯಾವುದೇ ವಿವಾದಕ್ಕೆ ಒಳಗಾದವರು ಅಲ್ಲ. ಅದರಲ್ಲೂ ಶರಣ ಪರಂಪರೆಯನ್ನು ಓದಿಕೊಂಡು ಬೆಳೆದವರು. ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ಈ ಕಾರಣದಿಂದಾಗಿಯೇ ಇಂದು ವೀರಗಾಸೆ ಕಲಾವಿದರನ್ನು ಧನಂಜಯ್ ಭೇಟಿ ಮಾಡುತ್ತಿದ್ದಾರೆ. ಅವರೊಂದಿಗೆ ಆ ದೃಶ್ಯದ ಕುರಿತು ವಿವರಣೆಯನ್ನು ಕೊಡಲಿದ್ದಾರೆ. ಆ ದೃಶ್ಯ ಹಾಗೂ ಅದನ್ನು ಸಿನಿಮಾದಲ್ಲಿ ಯಾಕೆ ಆ ರೀತಿ ಅಳವಡಿಸಲಾಗಿದೆ ಎನ್ನುವ ಕುರಿತು ಚರ್ಚಿಸಲಿದ್ದಾರೆ.
ಇದನ್ನೂ ಓದಿ : ಲಾಲಾಜಿಗೆ ಊರಿನ ಅಭಿವೃದ್ಧಿಯ ಕಾಳಜಿಗಿಂತ ತನ್ನ ಬಂಡವಾಳ ಗಟ್ಟಿ ಮಾಡಿಕೊಳ್ಳುವುದೇ ಟೆಂಕ್ಷನ್..
ಇಂದು ವೀರಗಾಸೆ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇನೆ. ಕಲಾವಿದರೊಂದಿಗೆ ಚರ್ಚೆ ಮಾಡಿ, ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ. ವೀರಗಾಸೆ ಕಲೆಯನ್ನು ತುಂಬಾ ಇಷ್ಟ ಪಡುವವನು. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲ ಎಂದಿದ್ದಾರೆ ಧನಂಜಯ್.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…