ಸೂರತ್: ಸೂರತ್ ಪುರಸಭೆ ವ್ಯಾಪ್ತಿಯ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿರುವ ರಾಕೇಶ್ ಅಲಿಯಾಸ್ ಗಿರೀಶ್ ಪಟೇಲ್ ಎಂಬವರ ಪತ್ನಿ 45 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೀಯಾ ನಾಮಾಂಕಿತ ಹೆಣ್ಣುಮಗುವನ್ನು ಮನೆಯ ಮಹಾಲಕ್ಷ್ಮೀ ಎಂದು ಭಾವಿಸಿರುವ ರಾಕೇಶ್, ಸ್ನೇಹಿತರೊಬ್ಬರ ಸಾಲಂಕೃತ ಕಾರಿನಲ್ಲಿ ಶುಕ್ರವಾರ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ಮೂಲಕ ಮುದ್ದಿನ ಮಗಳನ್ನು ಮನೆ ತುಂಬಿಸಿಕೊಂಡಿದ್ದಾರೆ.
ಸಂಭ್ರಮಾಚರಣೆಯ ಭಾಗವಾಗಿ ಸೂರತ್‌ನಿಂದ 35 ಕಿ.ಮೀಟರ್ ದೂರದಲ್ಲಿರುವ ಡೆಹೆನ್ ಎಂಬ ಹಳ್ಳಿಯ ರಸ್ತೆಯಲ್ಲಿ 200 ಅಡಿ ಉದ್ದದ ರಂಗೋಲಿಯ ಸಿಂಗಾರವಿತ್ತು. ರಾಕೇಶ್ ಪತ್ನಿ ಧರ್ಮಿಷ್ಠಾ ಅವರು ತವರು ಮನೆಯಿಂದ ಪತಿಯ ಊರಿಗೆ ಆಗಮಿಸುತ್ತಿದ್ದಂತೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಈ ವೇಳೆ ಅಲ್ಲಿಯ ಮಹಿಳೆಯರು ಗರ್ಬಾ ನೃತ್ಯ ಪ್ರದರ್ಶಿಸಿ ತಾಯಿ ಮಗುವನ್ನು ಸ್ವಾಗತಿಸಿದರು.
ಹೀಯಾ ನನಗೆ ಮೊದಲ ಮಗಳಾಗಿ ಜನಿಸಿದ್ದಾಳೆ. ನಮ್ಮ ಮನೆಗೆ ಮಹಾಲಕ್ಷ್ಮೀ ಇದ್ದಂತೆ ನನ್ನ ಮಗಳು. ಆದ್ದರಿಂದ ನನ್ನ ಮಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಮನೆಗೆ ಸ್ವಾಗತ ಮಾಡಿಕೊಳ್ಳಲಾಗಿದೆ. ನಮ್ಮ ಸಮಾಜಕ್ಕೆ ಹೆಣ್ಣು ಮಗುವಿನ ಮಹತ್ವ ತಿಳಿಸುವ ಉದ್ದೇಶ ನನ್ನದು ಎಂದು ತಂದೆ ರಾಕೇಶ್ ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…