ಹೆಬ್ರಿ : ಜು. 30 ರಂದು ಹಿರಿಯಡ್ಕದ ಪಡ್ಡಂ ಕಾರ್ನಿಕದ ಬಬ್ಬು ದೈವಸ್ಥಾನವನ್ನು ಹೊಕ್ಕ ಕಳ್ಳರು, ದೈವದ ಪ್ರಮುಖ ವಿಗ್ರಹವನ್ನು ಕದಿಯಲು ಆಗದೆ ಕೊನೆಗೆ ಹೊರಗೆ ಇರುವ ಕೊರಗಜ್ಜ ದೈವದ ಪಂಚಲೋಹದ ವಿಗ್ರಹವನ್ನು ಹಾಗೂ ಗಂಟೆ ಮಣಿಯನ್ನು ಕಳ್ಳತನ ಮಾಡಿದ್ದರು.
ಇನ್ನು ದೈವಸ್ಥಾನದಲ್ಲಿರುವ ದೈವದ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ಹಿಂದಿನ ದಿನವಷ್ಟೇ ತೆಗೆದಿದ್ದ ಕಾರಣ ಕಳ್ಳರು ಕಾಣಿಕೆ ಡಬ್ಬಿ ಒಡೆದರೂ ಅವರಿಗೆ ಅಲ್ಲಿಯೂ ಎನೂ ಸಿಕ್ಕಿರಲಿಲ್ಲ. ಕಳ್ಳತನವಾದ ಬಗ್ಗೆ ದೈವಸ್ಥಾನ ಆಡಳಿತ ಮಂಡಳಿ ಹಾಗೂ ಊರಿನವರು ಹುಡುಕಾಡಿ ಸುತ್ತಮುತ್ತ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಊರಿನವರು ಎಲ್ಲರೂ ಒಟ್ಟಾಗಿ ಸೇರಿ ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಪ್ರಾರ್ಥನೆ ಸಲ್ಲಿಸಿದ ಮರುದಿನವೇ ದೈವಸ್ಥಾನದ ಎಡಭಾಗದಲ್ಲಿ ಕದ್ದ ಸೊತ್ತುಗಳಾದ ಗಂಟೆಮಣಿ ಹಾಗೂ ಕೊರಗಜ್ಜ ದೈವದ ಪಂಚಲೋಹ ವಿಗ್ರಹ ಪತ್ತೆಯಾಗಿದ್ದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…