Featured

ಹೆಸ್ಕಾಂನಲ್ಲಿ 86 ಕೋಟಿ ರೂ. ಅಕ್ರಮ : 20 ಮಂದಿ ಸಸ್ಪೆಂಡ್‌ ;  7 ಅಧಿಕಾರಿಗಳ ವರ್ಗಾವಣೆ :ಇಂಧನ ಸಚಿವ ಸುನಿಲ್‌ ಕುಮಾರ್ ಆದೇಶ – Vishwanews24

7 ಅಧಿಕಾರಿಗಳ ವರ್ಗಾವಣೆ: ತನಿಖೆ ನಡೆಸಿ ಶಿಕ್ಷೆ ..
ಅವ್ಯವಹಾರಕ್ಕೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ..

ಬೆಂಗಳೂರು : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ ) ವ್ಯಾಪ್ತಿಯ ಅಥಣಿ ವಿಭಾಗದಲ್ಲಿ ನಡೆದ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರ ಸಂಬಂಧ ತನಿಖೆ ನಡೆಸಿರುವ ಇಂಧನ ಇಲಾಖೆ ಅಕ್ರಮಕ್ಕೆ ಕಾರಣರಾದ 20 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಸುಮಾರು 86 ಕೋಟಿ ರೂ. ಮೊತ್ತದ ಅವ್ಯವಹಾರಕ್ಕೆ ಅಧಿಕಾರಿಗಳು ಕಾರಣರಾಗಿದ್ದು, ಇದರಿಂದ ಇಲಾಖೆಗೆ ಆಥಿಕ ನಷ್ಟವಾಗುವ ಜತೆಗೆ ಸಾರ್ವಜನಿಕರಿಗೆ ಅಗತ್ಯವಾದ ಕಾಮಗಾರಿಗಳ ಗುಣಮಟ್ಟದಲ್ಲೂ ನ್ಯೂನ್ಯತೆ ಸೃಷ್ಟಿಯಾಗಿತ್ತು. ಈ ಸಂಬಂಧ ತನಿಖಾ ತಂಡ ನೀಡಿದ ವರದಿಯ ಶಿಫಾರಸಿನ ಅನ್ವಯ ಹೆಚ್ಚುವರಿ ಕಾರ್ವನಿರ‍್ವಾಹಕ ಎಂಜಿನಿಯರ್ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಕನ್ನಡ-ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆದೇಶ ನೀಡಿದ್ದಾರೆ.

2018ರಿಂದ 2021ರ ಅವಧಿಯಲ್ಲಿ ನಡೆದ ಯುಎನ್‌ಐಪಿ, ಕಾಪೆಕ್ಸ್, ಗಂಗಾ ಕಲ್ಯಾಣ, ನೀರು ಸರಬರಾಜು, ಓಟಿಎಂ, ಪ್ರಧಾನಮಂತ್ರಿ ಗ್ರಾಮೀಣ ವಿದ್ಯುದೀಕರಣ ಯೋಜನೆ ಸೇರಿದಂತೆ ನಾಗರಿಕರಿಕರಿಗೆ ನೇರವಾಗಿ ಸಂಬಂಧಪಟ್ಟ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವುದು ಇಲಾಖೆ ನಡೆಸಿದ ಆಂತರಿಕ ತನಿಖೆಯಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ :

2018ರಿಂದ 2021ರ ಅವಧಿಗೆ ಅನ್ವಯವಾಗುವಂತೆ ಹೆಸ್ಕಾಂನ ಅಥಣಿ ವಿಭಾಗದಲ್ಲಿ ನಾನಾ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಟೆಂಡರ್ ಕರೆಯಲಾಗಿತ್ತು. ಆದರೆ ಇದರಲ್ಲಿ ಅವ್ಯವಹಾರವಾಗಿದೆ. ಸಂಸ್ಥೆಗೆ ಆರ್ಥಿಕ ನಷ್ಟವುಂಟು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ಅನೇಕ ಸಂಘಟನೆಗಳಿಂದ ದೂರು ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ತಾಂತ್ರಿಕ ನಿರ್ದೇಶಕ, ಹಣಕಾಸು ಅಧಿಕಾರಿಗಳ ತಂಡ ಆಗಷ್ಟ್ 14ರಂದು ಸ್ಥಳ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಖಾತ್ರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಾಖಾವಾರು ವರದಿ ನೀಡುವಂತೆ ಸೂಚನೆ ನೀಡಿದ್ದರ ಜತೆಗೆ ಆಂತರಿಕ ತನಿಖೆಗೆ ಸೂಚನೆ ನೀಡಲಾಗಿತ್ತು.

ತನಿಖಾ ಸಂರ‍್ಭದಲ್ಲಿ ಅಧಿಕಾರಿಗಳ ಕೈವಾಡದಿಂದಲ್ಲೇ ಅವ್ಯವಹಾರ ಹಾಗೂ ನಷ್ಟವುಂಟಾಗಿರುವುದು ದೃಢಪಟ್ಟಿದೆ. ಒಟ್ಟಾರೆಯಾಗಿ 29.72ಕೋಟಿ ರೂ.ನ್ನು ಕಾಮಗಾರಿ ನಿರ್ವಹಣೆ ಮಾಡದೇ ಹಣ ಪಾವತಿ ಮಾಡಿರುವ ಗಂಭೀರ ಲೋಪ ಪತ್ತೆಯಾಗಿದೆ. ಜತೆಗೆ ಇದರಿಂದಾಗಿ ಇಲಾಖೆಗೆ 57.16ಕೋಟಿ ರೂ. ನಿಯಮ ಬಾಹಿರವಾಗಿ ವೆಚ್ಚವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ :

 

Vishwa News 24

Recent Posts

ಶೂಟಿಂಗ್‌ ವೇಳೆ ಸಮುದ್ರದಲ್ಲಿ ಮಗುಚಿದ ದೋಣಿ: ಬಂಗಾಳಿ ಸೀರಿಯಲ್ ನಟ ಸಾವು – vishwanews24

ಶೂಟಿಂಗ್‌ ವೇಳೆ ಸಮುದ್ರದಲ್ಲಿ ಮಗುಚಿದ ದೋಣಿ: ಬಂಗಾಳಿ ಸೀರಿಯಲ್ ನಟ ಸಾವು ಮುಂಬಯಿ: ಬಂಗಾಳಿ ಖ್ಯಾತ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ(43)…

3 minutes ago

ಉಡುಪಿ : ಮೂವರು ಪೊಲೀಸ್ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ – vishwanews24

ಉಡುಪಿ : ಮೂವರು ಪೊಲೀಸ್ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ಉಡುಪಿ: ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ…

11 minutes ago

ಎ.2ರಂದು ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ ಪ್ರದಾನ- vishwanews24

ಎ.2ರಂದು ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ ಪ್ರದಾನ ಮಂಗಳೂರು: ದಕ್ಷಿಣ ಕನ್ನಡ…

16 minutes ago

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

2 days ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

3 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

3 days ago