ಬೆಂಗಳೂರು: ನಾವು ಏನು ಬೇಕಾದರೂ ಮಾಡ್ತೀವಿ ಇವರ್ಯಾರು ಕೇಳೋಕೆ ಎಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾತಿಗೆ ಸಿಡಿಮಿಡಿಕೊಂಡಿರುವ ಬಿಜೆಪಿ , ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ ಎಂದು ತಿರುಗೇಟು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ , “ಸುವರ್ಣಸೌಧದ ಎದುರು ದಾಂಧಲೆಗೆ ಪ್ರೇರಣೆ ನೀಡಿ ಸಂಸದೀಯ ನಿಯಮಾವಳಿಗಳನ್ನು ದುರುಪಯೋಗಪಡಿಸಿಕೊಂಡು ರಕ್ಷಣೆ ಪಡೆಯಲು ಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸಂವಿಧಾನ, ಸದನದ ಮೇಲೆ ಕಿಂಚಿತ್ ಗೌರವವೂ ಇಲ್ಲವಾಗಿದೆ ಎಂದು ಆರೋಪಿಸಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ಹಕ್ಕುಚ್ಯುತಿ ಎಂದರೇನೆಂದು ಸ್ವಲ್ಪ ನಿಯಮ ಪುಸ್ತಕ ತೆರೆದು ನೋಡಿ. ನೀವು ಕಾನೂನು – ಸುವ್ಯವಸ್ಥಗೆ ಧಕ್ಕೆ ತರುವುದಕ್ಕಾಗಿಯೇ ಮಾಡುವ ಅನಗತ್ಯ ಸಂಗತಿಗಳನ್ನು ಸದನದದಲ್ಲಿ ಪ್ರಸ್ತಾಪಿಸಲು ಹೇಗೆ ಸಾಧ್ಯ? ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ ಎಂದು ಕಿಡಿಕಾರಿದೆ.
ಸುವರ್ಣ ಸೌಧದೊಳಗೆ ಟ್ರ್ಯಾಕ್ಟರ್ ನುಗ್ಗಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.ದೆಹಲಿಯ ಕೆಂಪುಕೋಟೆಯಲ್ಲೂ ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ಇದೇ ಮಾದರಿಯಲ್ಲಿ ನಡೆದಿತ್ತು. ಅದೇ ಮಾದರಿಯನ್ನು ಇಂದು ಕಾಂಗ್ರೆಸ್ ಮಾಡುತ್ತಿದೆ. ಎಂದು ಪ್ರಶ್ನಿಸಿದೆ.
ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಟ್ರ್ಯಾಕ್ಟರ್ ಮೂಲಕವೇ ಸುವರ್ಣ ಸೌಧದ ಒಳಗೆ ಪ್ರವೇಶಿಸೋದಕ್ಕೆ ಮುಂದಾದಾಗ ಪೊಲೀಸರು ಬ್ಯಾರಿಗೇಡ್ ಹಾಕಿ ತಡೆದಿದ್ದು ಇದು ಸುವರ್ಣ ಸೌಧದ ಮುಂದೆ ಹೈಡ್ರಾಮ ಸೃಷ್ಠಿಗೆ ಕಾರಣವಾಗಿತ್ತು. ಪೊಲೀಸರು ತಡೆದ ವಿಚಾರವಾಗಿ ಕಿಡಿಕಾರಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ಎಸ್ಪಿ ವಿರುದ್ಧ ಕಿಡಿಕಾರಿದ್ದರು. ನಾವು ವಿಧಾನಸೌಧದದ ಒಳಗೆ ಹೋಗೋದಕ್ಕೆ ಬಿಡೋದಿಲ್ಲ ಎನ್ನೋದಕ್ಕೆ ಇವರಾರು.? ನಾವು ಹೇಗೆ ಬೇಕಾದರೂ ಬರುತ್ತಿವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…