Featured

ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ : ಸಿದ್ಧರಾಮಯ್ಯ ಗೆ ಬಿಜೆಪಿ ತಿರುಗೇಟು – Vishwanews24

ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ : ಸಿದ್ಧರಾಮಯ್ಯ ಗೆ ಬಿಜೆಪಿ ತಿರುಗೇಟು

ಕಾಂಗ್ರೆಸ್ಸಿಗರೇ, ಅಂದು ಕೆಂಪುಕೋಟೆಯೊಳಗೆ ನುಗ್ಗಿದ ಭಯೋತ್ಪಾದಕರಿಗೂ ನಿಮಗೂ ಏನು ವ್ಯತ್ಯಾಸ?

ಬೆಂಗಳೂರು: ನಾವು ಏನು ಬೇಕಾದರೂ ಮಾಡ್ತೀವಿ ಇವರ್ಯಾರು ಕೇಳೋಕೆ ಎಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾತಿಗೆ ಸಿಡಿಮಿಡಿಕೊಂಡಿರುವ ಬಿಜೆಪಿ , ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ ಎಂದು ತಿರುಗೇಟು ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ , “ಸುವರ್ಣಸೌಧದ ಎದುರು ದಾಂಧಲೆಗೆ ಪ್ರೇರಣೆ ನೀಡಿ ಸಂಸದೀಯ ನಿಯಮಾವಳಿಗಳನ್ನು ದುರುಪಯೋಗಪಡಿಸಿಕೊಂಡು ರಕ್ಷಣೆ ಪಡೆಯಲು ಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್‌ ನಾಯಕರಿಗೆ ಸಂವಿಧಾನ, ಸದನದ ಮೇಲೆ ಕಿಂಚಿತ್ ಗೌರವವೂ ಇಲ್ಲವಾಗಿದೆ ಎಂದು ಆರೋಪಿಸಿದೆ.

ಮಾನ್ಯ ಸಿದ್ದರಾಮಯ್ಯ ಅವರೇ, ಹಕ್ಕುಚ್ಯುತಿ ಎಂದರೇನೆಂದು ಸ್ವಲ್ಪ ನಿಯಮ ಪುಸ್ತಕ ತೆರೆದು ನೋಡಿ. ನೀವು ಕಾನೂನು – ಸುವ್ಯವಸ್ಥಗೆ ಧಕ್ಕೆ ತರುವುದಕ್ಕಾಗಿಯೇ ಮಾಡುವ ಅನಗತ್ಯ ಸಂಗತಿಗಳನ್ನು ಸದನದದಲ್ಲಿ ಪ್ರಸ್ತಾಪಿಸಲು ಹೇಗೆ ಸಾಧ್ಯ? ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ ಎಂದು ಕಿಡಿಕಾರಿದೆ.

ಸುವರ್ಣ ಸೌಧದೊಳಗೆ ಟ್ರ್ಯಾಕ್ಟರ್‌ ನುಗ್ಗಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.ದೆಹಲಿಯ ಕೆಂಪುಕೋಟೆಯಲ್ಲೂ ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ಇದೇ ಮಾದರಿಯಲ್ಲಿ ನಡೆದಿತ್ತು. ಅದೇ ಮಾದರಿಯನ್ನು ಇಂದು ಕಾಂಗ್ರೆಸ್ ಮಾಡುತ್ತಿದೆ.  ಎಂದು ಪ್ರಶ್ನಿಸಿದೆ.

ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಟ್ರ್ಯಾಕ್ಟರ್ ಮೂಲಕವೇ ಸುವರ್ಣ ಸೌಧದ ಒಳಗೆ ಪ್ರವೇಶಿಸೋದಕ್ಕೆ ಮುಂದಾದಾಗ ಪೊಲೀಸರು ಬ್ಯಾರಿಗೇಡ್ ಹಾಕಿ ತಡೆದಿದ್ದು ಇದು ಸುವರ್ಣ ಸೌಧದ ಮುಂದೆ ಹೈಡ್ರಾಮ ಸೃಷ್ಠಿಗೆ ಕಾರಣವಾಗಿತ್ತು. ಪೊಲೀಸರು ತಡೆದ ವಿಚಾರವಾಗಿ ಕಿಡಿಕಾರಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ಎಸ್ಪಿ ವಿರುದ್ಧ ಕಿಡಿಕಾರಿದ್ದರು. ನಾವು ವಿಧಾನಸೌಧದದ ಒಳಗೆ ಹೋಗೋದಕ್ಕೆ ಬಿಡೋದಿಲ್ಲ ಎನ್ನೋದಕ್ಕೆ ಇವರಾರು.? ನಾವು ಹೇಗೆ ಬೇಕಾದರೂ ಬರುತ್ತಿವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

 

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

4 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

6 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

6 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

6 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

7 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

7 hours ago