ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಇಂದಿನವರೆಗೆ ಹಲವಾರು ಜನಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದು ದೇಶದ ರಕ್ಷಣೆಯ, ರೈತರ ವಿಚಾರದಲ್ಲಿ, ರೈಲ್ವೆ ಇಲಾಖೆ ಉನ್ನತೀಕರಣ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಹಿಂದೆಂದೂ ಕಾಣದಂತೆ ಕ್ಷಿಪ್ರಗತಿಯ ಅಭಿವೃದ್ಧಿ ಸಾಧಿಸುತ್ತಿದ್ದು ದಶಕಗಳಿಂದ ಈಡೇರದೇ ಇರುವ ಜನರ ಹಲವಾರು ಬೇಡಿಕೆಗಳನ್ನು ಈಡೇರಿಸಿ ದೇಶವಾಸಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
http://clnk.in/fUjz
ಈಗ ಮತ್ತೊಮ್ಮೆ ಮೋದಿ ಸರಕಾರ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಬಿಗ್ ಗಿಫ್ಟ್ ಒಂದನ್ನು ನೀಡಿದ್ದು. ಈ ಭಾಗದ ಜನರ ಹಲವು ದಶಕಗಳ ಕನಸನ್ನು ನನಸು ಮಾಡಿ ಸಿಹಿ ಸುದ್ದಿಯನ್ನು ಮೋದಿ ಸರಕಾರ ನೀಡಿದೆ. ಈ ಹಿಂದೆ ಬಿಸಿಲನಾಡು ಕಲಬುರಗಿ ಸೇರಿದಂತೆ ಹೈದರಾಬಾದ್ ಕರ್ನಾಟಕದ ಇತರ ಭಾಗಗಳ ಜನರಿಗೆ ಪ್ರಾಕೃತಿಕ ಸೌಂದರ್ಯ ಉಳ್ಳಂತಹ ಜಿಲ್ಲೆಗಳಿಗೆ ತೆರಳಲು ರೈಲಿನ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದರು. ಈಗ ಮೋದಿ ಸರಕಾರ ಇದಕ್ಕೆಲ್ಲಾ ಅಂತ್ಯ ಆಡಿದೆ.
ಕೇಂದ್ರ ಸರಕಾರವು ಕಲಬುರ್ಗಿಯಿಂದ ಹಾಸನ ಮಾರ್ಗದ ರೈಲು ಓಡಾಟಕ್ಕೆ ಹಸಿರು ನಿಶಾನೆ ತೋರಿಸಿದೆ. ಈ ಹಿಂದೆ ಹೈದರಾಬಾದ್ ಕರ್ನಾಟಕದ ಜನರು ಕರುನಾಡಿನ ಖ್ಯಾತ ಪ್ರವಾಸಿ ತಾಣಗಳಾದ ಚಿಕ್ಕಮಗಳೂರು ಹಾಗೂ ಹಾಸನ ಭಾಗಗಳಿಗೆ ಪ್ರವಾಸಕ್ಕೆ ತೆರಳಲು ಎರಡು ದಿನಗಳು ತಗಲುತ್ತಿದ್ದವು ಈ ಭಾಗಕ್ಕೆ ಪ್ರವಾಸಕ್ಕೆ ತೆರಳುವವರು ಒಂದು ವಾರಗಳಷ್ಟು ಇದಕ್ಕಾಗಿ ಮೀಸಲಿಡಬೇಕಿತ್ತು. ಆದರೆ ಇದೀಗ ಇದಕ್ಕೆಲ್ಲಾ ಅಂತ್ಯ ಆಡೋ ಸಮಯ ಬಂದಿದ್ದು ಈ ಹಿಂದೆ ಬೆಂಗಳೂರಿನವರೆಗೆ ಮಾತ್ರ ಸೀಮಿತವಾಗಿದ್ದ ಯಶವಂತಪುರ – ಸೊಲ್ಲಾಪುರ ರೈಲನ್ನು ಕೇಂದ್ರ ಸರಕಾರ ಇದೀಗ ಹಾಸನದವರೆಗೆ ವಿಸ್ತರಿಸಿ ಹೈದರಾಬಾದ್ ಕರ್ನಾಟಕದವರೆಗೆ ವಿಸ್ತರಣೆ ಮಾಡಲು ಮುಂದಾಗಿ ಆ ಭಾಗದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ.
ಈ ರೈಲು ಮುಂದಿನ ದಿನಗಳಲ್ಲಿ ಕಲಬುರಗಿಯಿಂದ ಪ್ರತಿನಿತ್ಯ ರಾತ್ರಿ 09 ಗಂಟೆಗೆ ಹೊರಡಿ ಬೆಳಗ್ಗೆ 10.30ಕ್ಕೆ ಹಾಸನ ರೈಲು ನಿಲ್ದಾಣವನ್ನು ತಲುಪಲಿದೆ. ಈ ಮೂಲಕ ವಾರಾಂತ್ಯದ ಪ್ರವಾಸಕ್ಕೆ ಹೋಗಲಿರುವ ಹೈದರಾಬಾದ್ ಕರ್ನಾಟಕ ಮಂದಿಗೆ ಮೋದಿ ಸರಕಾರ ಭರ್ಜರಿ ಗಿಫ್ಟ್ ನೀಡಿದೆ
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…