ಬೆಂಗಳೂರು: ಪೊಲೀಸರೆಂದರೆ ನೋಡಲು ಫಿಟ್ ಆಗಿರಬೇಕು. ಕೆಲಸಕ್ಕೆ ಸೇರಲು ಸಾಕಷ್ಟು ವರ್ಕೌಟ್ ಮಾಡುವ ಪೊಲೀಸರು ಕೆಲಸ ಸಿಕ್ಕಿದ ಬಳಿಕ ಬಹುತೇಕರು ಹೊಟ್ಟೆ ಬೆಳೆಸಿಕೊಳ್ಳುತ್ತಾರೆ. ಅಂತಹ ಪೊಲೀಸರಿಗೆ ಖಡಕ್ ಐಪಿಎಸ್ ಅಧಿಕಾರಿ ಎಂದೇ ಹೆಸರಾಗಿರುವ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹೊಟ್ಟೆ ಮುಂದಕ್ಕೆ ಬಿಟ್ಟುಕೊಂಡಿದ್ರೆ ಅತ್ಯುನ್ನತ ಪದಕಗಳಿಗೆ ಶಿಫಾರಸ್ಸು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇನ್ಮೇಲೆ ಮುಖ್ಯಮಂತ್ರಿ ಪದಕ ಅಥವಾ ರಾಷ್ಟ್ರಪತಿ ಪದಕವಾಗಲಿ ಹೊಟ್ಟೆ ಇರುವವರಿಗೆ ಸಿಗುವುದಿಲ್ಲ ಎಂದು ಎಚ್ಚರಿಸಿರುವ ಅಲೋಕ್ ಕುಮಾರ್ ಎರಡು ತಿಂಗಳಲ್ಲಿ ಹೊಟ್ಟೆ ಕರಿಗಿಸಿಲ್ಲ ಅಂದ್ರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಂಗಳೂರು ಕೆಎಸ್ಆರ್ಪಿಯಲ್ಲಿ 1010 ಜನ ಸಿಬ್ಬಂದಿ ಇದ್ದಾರೆ. ಅದರಲ್ಲಿ 162 ಸಿಬ್ಬಂದಿಗೆ ಭಾರೀ ಹೊಟ್ಟೆ ಇದೆ. ಹೀಗಾಗಿ ಅವರನ್ನು ಗ್ರೌಂಡ್ನಲ್ಲಿ ನಿಲ್ಲಿಸಿ ವಾರ್ನ್ ಮಾಡಿದ್ದಾರೆ. ಏನ್ ಮಾಡ್ತಿರೋ ಗೊತ್ತಿಲ್ಲ, ಇನ್ನು ಎರಡು ತಿಂಗಳಲ್ಲಿ ಹೊಟ್ಟೆ ಕರಗಿಸಲೇಬೇಕು ಎಂದು ಅಲೋಕ್ ಕುಮಾರ್ ಗಡುವು ನೀಡಿದ್ದಾರೆ.
ಹೊಟ್ಟೆ ಬಿಟ್ಟಿಕೊಂಡಿರುವುದನ್ನು ಕರಗಿಸುವ ಜತೆಗೆ ತೂಕದ ಮಿತಿಯನ್ನು ಅಲೋಕ್ ಕುಮಾರ್ ನೀಡಿದ್ದಾರೆ. 175 ಸೆ.ಮೀ ಉದ್ದ ಇದ್ರೆ ಅವರು 75 KG ತೂಕದ ಜತೆಗೆ 10 ಕೆಜಿ ವಿನಾಯತಿ ಅಂದ್ರೆ 85 ಕೆ.ಜಿ ಇರಬಹುದು. 185 ಸೆ.ಮೀ ಉದ್ದ ಇದ್ರೆ 10 ಕೆ.ಜಿ ವಿನಾಯತಿ ಸೇರಿ 95 ಕೆ.ಜಿ ಇರಬಹುದು. ರಾಜ್ಯಾಂದ್ಯಂತ ಇರೋ ಕೆಎಸ್ಆರ್ಪಿ ಸಿಬ್ಬಂದಿಯಲ್ಲಿ ಹೆಚ್ಚು ತೂಕ ಇರೋರು ತೂಕ ಇಳಿಸುವಂತೆ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.
ಡೊಳ್ಳು ಹೊಟ್ಟೆ ಕರಗಿಸದಿದ್ದರೆ ಅಂತಹ ಪೊಲೀಸರಿಗೆ ರಾಷ್ಟಪತಿ ಪದಕ ಸಿಗುವುದಿಲ್ಲ. ರಾಷ್ಟ್ರಪತಿ ಪದಕ ಶಿಫಾರಸ್ಸಿಗೆ ಫಿಟ್ ಅಂಡ್ ಫೈನ್ ಆಗಿರಲೇಬೇಕು. ಉತ್ತಮ ಸೇವೆ ಜತೆಗೆ ಸದೃಢ ಆರೋಗ್ಯ ಹೊಂದಿರಲೇಬೇಕು. ಇದಕ್ಕೆ ಪೂರಕವೆಂಬಂತೆ ಮೂರು ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು. ಪದಕಕ್ಕಾಗಿ ತಮ್ಮ ಸಾಧನೆ ಜತೆಗೆ ವೈದ್ಯಕೀಯ, ಮಾನಸಿಕ ಹಾಗೂ ದೈಹಿಕ ಕ್ಷಮತೆ ಪ್ರಮಾಣಪತ್ರ ಸಲ್ಲಿಸಬೇಕು. ಮುಖ್ಯಮಂತ್ರಿಗಳ ಪೊಲೀಸ್ ಪದಕಕ್ಕೂ ಮುಂದಿನ ದಿನಗಳಲ್ಲಿ ಪ್ರಮುಖ ಮಾನದಂಡವಾಗಲಿದೆ. ಕೆಎಸ್ಆರ್ಪಿ 12 ಪ್ಲಾಟೂನ್ಗಳಲ್ಲಿ ನಿಗದಿತ ಅವಧಿಯಲ್ಲಿ ಡೊಳ್ಳು ಹೊಟ್ಟೆ ಕರಗಿಸಲು ಸಿಬ್ಬಂದಿಗೆ ತಾಕೀತು ಮಾಡಲಾಗಿದೆ.
ಡೊಳ್ಳು ಹೊಟ್ಟೆ ಕರಗಿಸದವರಿಗೆ ನಿತ್ಯ ವ್ಯಾಯಾಮ, ಪರೇಡ್ ಸೇರಿದಂತೆ ದೈಹಿಕ ವ್ಯಾಯಾಮ ಜತೆಗೆ ಜಾಗಿಂಗ್ ಹಾಗೂ ಈಜು ಕಡ್ಡಾಯಪಡಿಸಲಾಗಿದೆ. ಈ ಬಾರಿ ಐದು ಸಿಬ್ಬಂದಿಗೆ ಮಾತ್ರ ರಾಷ್ಟ್ರಪತಿ ಪದಕಕ್ಕೆ ಶಿಫಾರಸ್ಸು ಮಾಡಲಾಗಿದೆ. ಡೊಳ್ಳು ಹೊಟ್ಟೆ ಕರಗಿಸಿ ಸದೃಢ ಆರೋಗ್ಯ ಹೊಂದಿದವರಿಗೆ ಮಾತ್ರ ರಾಷ್ಟ್ರಪತಿ ಪದಕ ಸಿಗಲಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…