Featured

ಹೊಟ್ಟೆ ಬಿಟ್ಕೊಂಡು ಕೆಲಸ ಮಾಡೋ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ​ಎಡಿಜಿಪಿ ಅಲೋಕ್​ ಕುಮಾರ್ – Vishwanews24

ಹೊಟ್ಟೆ ಮುಂದಕ್ಕೆ ಬಿಟ್ಟುಕೊಂಡಿದ್ರೆ ಅತ್ಯುನ್ನತ ಪದಕಗಳಿಗೆ ಶಿಫಾರಸ್ಸು ಮಾಡುವುದಿಲ್ಲ..

ಮುಖ್ಯಮಂತ್ರಿ ಪದಕ ಅಥವಾ ರಾಷ್ಟ್ರಪತಿ ಪದಕವಾಗಲಿ ಹೊಟ್ಟೆ ಇರುವವರಿಗೆ ಸಿಗುವುದಿಲ್ಲ..

ಎರಡು ತಿಂಗಳಲ್ಲಿ ಹೊಟ್ಟೆ ಕರಿಗಿಸಿಲ್ಲ ಅಂದ್ರೆ ಶಿಸ್ತು ಕ್ರಮದ ಎಚ್ಚರಿಕೆ..

ಹೊಟ್ಟೆ ಬಿಟ್ಕೊಂಡು ಕೆಲಸ ಮಾಡೋ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ​ಎಡಿಜಿಪಿ ಅಲೋಕ್​ ಕುಮಾರ್..

ಬೆಂಗಳೂರು: ಪೊಲೀಸರೆಂದರೆ ನೋಡಲು ಫಿಟ್​ ಆಗಿರಬೇಕು. ಕೆಲಸಕ್ಕೆ ಸೇರಲು ಸಾಕಷ್ಟು ವರ್ಕೌಟ್​ ಮಾಡುವ ಪೊಲೀಸರು ಕೆಲಸ ಸಿಕ್ಕಿದ ಬಳಿಕ ಬಹುತೇಕರು ಹೊಟ್ಟೆ ಬೆಳೆಸಿಕೊಳ್ಳುತ್ತಾರೆ. ಅಂತಹ ಪೊಲೀಸರಿಗೆ ಖಡಕ್​ ಐಪಿಎಸ್​ ಅಧಿಕಾರಿ ಎಂದೇ ಹೆಸರಾಗಿರುವ ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್​ ಕುಮಾರ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಹೊಟ್ಟೆ ಮುಂದಕ್ಕೆ ಬಿಟ್ಟುಕೊಂಡಿದ್ರೆ ಅತ್ಯುನ್ನತ ಪದಕಗಳಿಗೆ ಶಿಫಾರಸ್ಸು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇನ್ಮೇಲೆ ಮುಖ್ಯಮಂತ್ರಿ ಪದಕ ಅಥವಾ ರಾಷ್ಟ್ರಪತಿ ಪದಕವಾಗಲಿ ಹೊಟ್ಟೆ ಇರುವವರಿಗೆ ಸಿಗುವುದಿಲ್ಲ ಎಂದು ಎಚ್ಚರಿಸಿರುವ ಅಲೋಕ್​ ಕುಮಾರ್​ ಎರಡು ತಿಂಗಳಲ್ಲಿ ಹೊಟ್ಟೆ ಕರಿಗಿಸಿಲ್ಲ ಅಂದ್ರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಂಗಳೂರು ಕೆಎಸ್​ಆರ್​ಪಿಯಲ್ಲಿ 1010 ಜನ‌ ಸಿಬ್ಬಂದಿ ಇದ್ದಾರೆ. ಅದರಲ್ಲಿ 162 ಸಿಬ್ಬಂದಿಗೆ ಭಾರೀ ಹೊಟ್ಟೆ ಇದೆ. ಹೀಗಾಗಿ ಅವರನ್ನು ಗ್ರೌಂಡ್​ನಲ್ಲಿ ನಿಲ್ಲಿಸಿ ವಾರ್ನ್ ಮಾಡಿದ್ದಾರೆ. ಏನ್ ಮಾಡ್ತಿರೋ ಗೊತ್ತಿಲ್ಲ, ಇನ್ನು ಎರಡು ತಿಂಗಳಲ್ಲಿ ಹೊಟ್ಟೆ ಕರಗಿಸಲೇಬೇಕು ಎಂದು ಅಲೋಕ್ ಕುಮಾರ್ ಗಡುವು ನೀಡಿದ್ದಾರೆ.

ಹೊಟ್ಟೆ ಬಿಟ್ಟಿಕೊಂಡಿರುವುದನ್ನು ಕರಗಿಸುವ ಜತೆಗೆ ತೂಕದ ಮಿತಿಯನ್ನು ಅಲೋಕ್​ ಕುಮಾರ್​ ನೀಡಿದ್ದಾರೆ. 175 ಸೆ.ಮೀ ಉದ್ದ ಇದ್ರೆ ಅವರು 75 KG ತೂಕದ ಜತೆಗೆ 10 ಕೆಜಿ ವಿನಾಯತಿ ಅಂದ್ರೆ 85 ಕೆ.ಜಿ ಇರಬಹುದು. 185 ಸೆ.ಮೀ ಉದ್ದ ಇದ್ರೆ 10 ಕೆ.ಜಿ ವಿನಾಯತಿ ಸೇರಿ 95 ಕೆ.ಜಿ ಇರಬಹುದು. ರಾಜ್ಯಾಂದ್ಯಂತ ಇರೋ ಕೆಎಸ್​ಆರ್​ಪಿ ಸಿಬ್ಬಂದಿಯಲ್ಲಿ ಹೆಚ್ಚು ತೂಕ ಇರೋರು ತೂಕ ಇಳಿಸುವಂತೆ ಅಲೋಕ್​ ಕುಮಾರ್​ ಸೂಚನೆ ನೀಡಿದ್ದಾರೆ.

ಡೊಳ್ಳು ಹೊಟ್ಟೆ ಕರಗಿಸದಿದ್ದರೆ ಅಂತಹ ಪೊಲೀಸರಿಗೆ ರಾಷ್ಟಪತಿ ಪದಕ ಸಿಗುವುದಿಲ್ಲ. ರಾಷ್ಟ್ರಪತಿ ಪದಕ ಶಿಫಾರಸ್ಸಿಗೆ ಫಿಟ್ ಅಂಡ್ ಫೈನ್ ಆಗಿರಲೇಬೇಕು. ಉತ್ತಮ ಸೇವೆ ಜತೆಗೆ ಸದೃಢ ಆರೋಗ್ಯ ಹೊಂದಿರಲೇಬೇಕು. ಇದಕ್ಕೆ ಪೂರಕವೆಂಬಂತೆ ಮೂರು ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು. ಪದಕಕ್ಕಾಗಿ ತಮ್ಮ ಸಾಧನೆ ಜತೆಗೆ ವೈದ್ಯಕೀಯ, ಮಾನಸಿಕ ಹಾಗೂ ದೈಹಿಕ ಕ್ಷಮತೆ ಪ್ರಮಾಣಪತ್ರ ಸಲ್ಲಿಸಬೇಕು. ಮುಖ್ಯಮಂತ್ರಿಗಳ ಪೊಲೀಸ್‌ ಪದಕಕ್ಕೂ ಮುಂದಿನ ದಿನಗಳಲ್ಲಿ ಪ್ರಮುಖ ಮಾನದಂಡವಾಗಲಿದೆ. ಕೆಎಸ್​ಆರ್​ಪಿ 12 ಪ್ಲಾಟೂನ್​ಗಳಲ್ಲಿ ನಿಗದಿತ ಅವಧಿಯಲ್ಲಿ ಡೊಳ್ಳು ಹೊಟ್ಟೆ ಕರಗಿಸಲು ಸಿಬ್ಬಂದಿಗೆ ತಾಕೀತು ಮಾಡಲಾಗಿದೆ.

ಡೊಳ್ಳು ಹೊಟ್ಟೆ ಕರಗಿಸದವರಿಗೆ ನಿತ್ಯ ವ್ಯಾಯಾಮ, ಪರೇಡ್ ಸೇರಿದಂತೆ ದೈಹಿಕ ವ್ಯಾಯಾಮ ಜತೆಗೆ ಜಾಗಿಂಗ್ ಹಾಗೂ ಈಜು ಕಡ್ಡಾಯಪಡಿಸಲಾಗಿದೆ. ಈ ಬಾರಿ ಐದು ಸಿಬ್ಬಂದಿಗೆ ಮಾತ್ರ ರಾಷ್ಟ್ರಪತಿ ಪದಕಕ್ಕೆ ಶಿಫಾರಸ್ಸು ಮಾಡಲಾಗಿದೆ. ಡೊಳ್ಳು ಹೊಟ್ಟೆ ಕರಗಿಸಿ ಸದೃಢ ಆರೋಗ್ಯ ಹೊಂದಿದವರಿಗೆ ಮಾತ್ರ ರಾಷ್ಟ್ರಪತಿ ಪದಕ ಸಿಗಲಿದೆ ಎಂದು ಅಲೋಕ್​ ಕುಮಾರ್​ ಹೇಳಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago