Featured

ಹೊರ ರಾಜ್ಯಕ್ಕೆ ತೆರಳಲು ದರ್ಶನ್‌ , ಪವಿತ್ರಾ ಗೌಡಗೆ ಕೋರ್ಟ್‌ ಅನುಮತಿ – vishwanews24

ಹೊರ ರಾಜ್ಯಕ್ಕೆ ತೆರಳಲು ದರ್ಶನ್‌ ಪವಿತ್ರಾ ಗೌಡಗೆ ಕೋರ್ಟ್‌ ಅನುಮತಿ

ಬೆಂಗಳೂರು: ಮೈಸೂರಿಗೆ ದರ್ಶನ್‌  ತೆರಳಲು ಮತ್ತು ಪವಿತ್ರಾ ಗೌಡಗೆ  ಹೊರ ರಾಜ್ಯಕ್ಕೆ ಹೋಗಲು ಕೋರ್ಟ್‌ ಅನುಮತಿ ನೀಡಿದೆ.

57ನೇ ಸಿಸಿಹೆಚ್‌ ನ್ಯಾಯಾಧೀಶರ ಮುಂದೆ ದರ್ಶನ್‌ ಪರ ವಕೀಲರು ಮೈಸೂರಿಗೆ ತೆರಳಲು ಅನುಮತಿ ನೀಡಬೇಕೆಂದು ಕೇಳಿದ್ದರು. ಪವಿತ್ರಾ ಗೌಡ ಪರ ವಕೀಲರು ಹೊರ ರಾಜ್ಯಕ್ಕೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು.

ಈ ಎರಡು ಅರ್ಜಿಗಳನ್ನು ಕೋರ್ಟ್‌ ಮಾನ್ಯ ಮಾಡಿದೆ. ದರ್ಶನ್‌ಗೆ ಜ.12ರಿಂದ 17ರವರೆಗೆ ಮೈಸೂರಿನಲ್ಲಿ ತಂಗಲು ಅನುಮತಿ ನೀಡಿದೆ.

ಕೋರ್ಟ್‌ ಮುಂಬೈ ಮತ್ತು ದೆಹಲಿಗೆ ತೆರಳಲು ಪವಿತ್ರಾ ಗೌಡಗೆ ಅನುಮತಿ ನೀಡಿದೆ. ದೇವಸ್ಥಾನ ಮತ್ತು ವ್ಯವಹಾರ ಸಂಬಂಧ ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ಕೇಳಿದ್ದರು.

ಪವಿತ್ರಾ ಗೌಡ, ಪ್ರದೋಶ್ ಸೇರಿದಂತೆ ಹಲವು ಆರೋಪಿಗಳು ನ್ಯಾಯಾಲಯಕ್ಕೆ ಮೊದಲೇ ಹಾಜರಾಗಿದ್ದರು. ನಟ ದರ್ಶನ್ ಮಾತ್ರ ತುಸು ತಡವಾಗಿ ನ್ಯಾಯಾಲಯದ ಬಳಿ ಬಂದರು. ಎಲ್ಲಾ 17 ಆರೋಪಿಗಳು ಹಾಲ್‌ಗೆ ಬಂದ ನಂತರ ನ್ಯಾಯಾಧೀಶರು ಹಾಜರಿ ಪಡೆದರು. ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದ್ದರು.

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

13 hours ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

13 hours ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

13 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

16 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

16 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

16 hours ago