ಹೊಸ ವರ್ಷದ ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷ ಹೀಗಿರಬಹುದು ಎಂಬ ಚಿಂತೆ ಎಲ್ಲರನ್ನು ಕಾಡುತ್ತದೆ. ಮುಂದಿನ ವರ್ಷ ಅಂದ್ರೆ 2020ರಲ್ಲಿ ವೃಷಭ ರಾಶಿಯವರ ಅದೃಷ್ಟ ಹೇಗಿದೆ ಎಂಬುದರ ವಿವರ ಇಲ್ಲಿದೆ.
ವೃಷಭ ರಾಶಿ ಜನರು ಶಾಂತ ಮತ್ತು ಮೃದು ಸ್ವಭಾವದವರು. ಇದಕ್ಕೆ ಅಧಿಪತಿ ಶುಕ್ರ. ವಿಶ್ವಾಸಾರ್ಹ ವ್ಯಕ್ತಿಗಳು ಇವರು. ಕಠಿಣ ಪರಿಶ್ರಮಕ್ಕೆ ಹೆದರುವುದಿಲ್ಲ. ನೃತ್ಯ, ಹಾಡುಗಾರಿಕೆ, ಒಳ್ಳೆಯ ಸಂಗತಿಗಳನ್ನು ಸಂಗ್ರಹಿಸುವುದು ಮತ್ತು ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟ.
2020ರಲ್ಲಿ ಇವ್ರ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳುವುದಾದ್ರೆ ಆರಂಭದ ತಿಂಗಳಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಫೆಬ್ರವರಿಯಲ್ಲಿ ಸ್ವಲ್ಪ ಕಾಳಜಿ ವಹಿಸಿ. ಮಾರ್ಚ್ ತಿಂಗಳಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಒಳ್ಳೆಯದು. ಪೂರ್ವಜರ ಆಸ್ತಿ ಸಿಗುವ ಸಾಧ್ಯತೆಯಿದೆ. ವರ್ಷದ ಕೊನೆಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ವೃತ್ತಿ ಜೀವನದಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಉದ್ಯೋಗಾವಕಾಶಗಳು ಬರುತ್ತವೆ. ಆ ಅವಕಾಶಗಳಿಗೆ ನೀವು ಸಿದ್ಧರಾಗಿರಬೇಕು. ಹೆಸರಾಂತ ಸಂಸ್ಥೆಗೆ ಸೇರಲು ಅವಕಾಶ ಸಿಗಬಹುದು. ಮಾರ್ಚ್ ತಿಂಗಳಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉನ್ನತ ಅಧಿಕಾರಿಗಳ ಮುಂದೆ ಅಪನಂಬಿಕೆಯ ಪರಿಸ್ಥಿತಿ ಇರಬಹುದು. ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ರೆ ವರ್ಷದ ಕೊನೆಯಲ್ಲಿ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.
ಸಿಹಿ ನಡವಳಿಕೆ ಈ ವರ್ಷ ಜನರನ್ನು ಆಕರ್ಷಿಸುತ್ತದೆ. ನಿಮ್ಮ ಕುಟುಂಬ ಸದಸ್ಯರಿಗೆ ಕಠಿಣ ಪದಗಳನ್ನು ಬಳಸಬೇಡಿ. ಕುಟುಂಬದೊಂದಿಗೆ ಏಪ್ರಿಲ್‌ನಲ್ಲಿ ಪ್ರಮುಖ ವಿಷ್ಯವನ್ನು ಚರ್ಚಿಸಬಹುದು. ಕುಟುಂಬ ಸದಸ್ಯರೊಂದಿಗೆ ತೀರ್ಥಯಾತ್ರೆಗೆ ಹೋಗುವ ಅವಕಾಶವಿದೆ.
ಆರಂಭದ ತಿಂಗಳಲ್ಲಿ ಸಂಗಾತಿ ಮಧ್ಯೆ ಜಗಳ ನಡೆಯುವ ಸಾಧ್ಯತೆಯಿದೆ. ವರ್ಷದ ಮಧ್ಯದಲ್ಲಿ ಪ್ರೀತಿ ಹೆಚ್ಚಾಗಲಿದೆ. ವರ್ಷದ ಕೊನೆಯಲ್ಲಿ ಪ್ರೀತಿ ಮತ್ತು ವೈವಾಹಿಕ ಜೀವನ ಅನುಕೂಲಕರವಾಗಿರುತ್ತದೆ.
ಆರೋಗ್ಯದ ಬಗ್ಗೆ ಯಾವುದೇ ರೀತಿಯ ಅಸಡ್ಡೆ ಬೇಡ. ದೊಡ್ಡ ನಷ್ಟವನ್ನು ಅನುಭವಿಸಬಹುದು. ಆರೋಗ್ಯದಲ್ಲಿ ಏರಿಳಿತದ ಪರಿಸ್ಥಿತಿ ಇರುತ್ತದೆ. ಯೋಗ ಮತ್ತು ಧ್ಯಾನದ ಕ್ರಿಯೆಯನ್ನು ಅನುಸರಿಸಿ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…