ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಶನಿವಾರ ನಡೆದ ಹ್ಯಾಲೋವೀನ್ ದುರಂತದಲ್ಲಿ ಮೃತಪಟ್ಟವರ ಗುಂಪಿನಲ್ಲಿ ಖ್ಯಾತ ಗಾಯಕ ಹಾಗೂ ನಟನೊಬ್ಬನೂ ಸೇರಿದ್ದ ಎಂಬ ಸುದ್ದಿ ತಿಳಿದು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಯೋಲ್‌ನ ಇಟಾವಾನ್ ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ ನಟ, ಗಾಯಕ ಲೀ ಜಿಹಾನ್ ಮೃತಪಟ್ಟಿರುವುದಾಗಿ ದೃಢವಾಗಿದೆ. 24 ವರ್ಷದ ತಾರೆಯ ಹಠಾತ್ ನಿಧನಕ್ಕೆ ಅವರ ಕುಟುಂಬ, ಅಭಿಮಾನಿಗಳು ಸೇರಿದಂತೆ ಅಲ್ಲಿನ ಜನತೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಲೀ ಜಿಹಾನ್ ಅವರು ದಕ್ಷಿಣ ಕೊರಿಯಾದ ಗಾಯನ ಸ್ಪರ್ಧೆಯ ಪ್ರೊಡ್ಯೂಸ್ 101 ರಲ್ಲಿ ಮಾಜಿ ಸ್ಪರ್ಧಿಯಾಗಿದ್ದಾರೆ. ಅವರು ಟುಡೇ ವಾಸ್ ಅನದರ್ ನಾಮ್ ಹ್ಯುನ್ ಡೇ ಮೂಲಕ ನಟನಾ ಕ್ಷೇತಕ್ಕೆ ಪಾದಾರ್ಪಣೆ ಮಾಡಿದರು. ವರದಿಗಳ ಪ್ರಕಾರ, ಲೀ ಜಿ ಹಾನ್ ಅವರ ಅಂತ್ಯಕ್ರಿಯೆ ನವೆಂಬರ್ 1 ರಂದು ನಡೆಯಲಿದೆ. ಇದನ್ನೂ ಓದಿ: ಮಂಗಳೂರು: ಹೃದಯಾಘಾತದಿಂದ ಯುವಕ ನಿಧನ – Vishwanews24
2 ವರ್ಷದ ಕೋವಿಡ್ ನಿರ್ಬಂಧವನ್ನು ತೆಗೆದು ಹಾಕಿದ ಬಳಿಕ ಇದು ದಕ್ಷಿಣ ಕೊರಿಯಾದ ಮೊದಲ ಹ್ಯಾಲೋವೀನ್ ಆಚರಣೆಯಾಗದೆ. ಶನಿವಾರ ಹಬ್ಬದ ವಾತಾವರಣದಲ್ಲಿ ಇಟಾವಾನ್‌ನ ಕಿರಿದಾದ ಒಂದು ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಹೆಚ್ಚಿನವರು ಉಸಿರುಗಟ್ಟಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದರಲ್ಲೂ ಮೃತಪಟ್ಟವರಲ್ಲಿ ಹೆಚ್ಚಿನವರು 20 ವರ್ಷದ ಆಸುಪಾಸಿನವರು ಎಂಬುದು ಇನ್ನಷ್ಟು ಆಘಾತ ತಂದಿದೆ.
ವರದಿಗಳ ಪ್ರಕಾರ ಸಿಯೋಲ್‌ನ ಹ್ಯಾಲೋವೀನ್ ದುರಂತದಲ್ಲಿ 151 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ರಾಷ್ಟ್ರೀಯ ಶೋಕಾಚರಣೆಯ ಅವಧಿಯನ್ನು ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ವಿಟ್ಲ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಮುಡಿಪುವಿನಲ್ಲಿ ಪತ್ತೆ – Vishwanews24
ಉಡುಪಿ : ಅಕ್ಕ ಕೆಫೆ ನಿರ್ವಹಣೆ ; ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…
ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…
ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…
ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…
ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…