ಮಾರ್ಚ್ 4, ಬುಧವಾರದ ರಾಶಿಫಲ.
ಮೇಷ ರಾಶಿ : ನಿಮ್ಮ ಮನೆಯಲ್ಲಿನ ಆಗುಹೋಗುಗಳ ಬಗ್ಗೆ ನೀವು ಲಕ್ಷ್ಯ ವಹಿಸಿ. ಇಲ್ಲದೆ ಹೋದರೆ ತೊಂದರೆಯನ್ನು ಎದುರು ಹಾಕಿಕೊಂಡಂತೆ. ಇಬ್ಬರ ವ್ಯಾಜ್ಯವನ್ನು ಬಗೆಹರಿಸಲು ಮಧ್ಯವರ್ತಿಯಾಗಿ ಹೋಗದಿರಿ. ಇದರಿಂದ ನೀವೇ ಅವಮಾನಕ್ಕೆ ಒಳಗಾಗುವ ಸಂಭವವಿದೆ.
ವೃಷಭ ರಾಶಿ ; ಭಯವನ್ನೇ ಗೀಳಾಗಿಸಿಕೊಳ್ಳಬೇಡಿ. ಯೋಚನೆಯಿಂದ ಯಾವುದೇ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಹಾಗಾಗಿ ಯಾವುದಾದರೂ ಕೆಲಸ ಮಾಡುವತ್ತ ಗಮನ ಹರಿಸಿ. ಇಲ್ಲವೇ ನಿಮಗೆ ಇಷ್ಟವಾದ ಪುಸ್ತಕವನ್ನು ಓದಿ.
ಮಿಥುನ ರಾಶಿ:ಎಲೆಕ್ಟ್ರಿಕ್ ಉಪಕರಣಗಳಿಂದ ದೂರ ಇರುವುದು ಒಳ್ಳೆಯದು. ಉದರಕ್ಕೆ ಸಂಬಂಧಪಟ್ಟ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯ ಉಪಚಾರ ನಡೆಸಿ. ಒಳಿತಾಗುವುದು. ಮಾತಾ ದುರ್ಗಾದೇವಿಯ ಆರಾಧನೆ ಮಾಡುವುದು ಒಳ್ಳೆಯದು.
ಕಟಕ ರಾಶಿ:ಸದ್ಯದ ಗ್ರಹಸ್ಥಿತಿಗಳು ಉತ್ತಮವಾಗಿಲ್ಲದ ಕಾರಣ ನವಗ್ರಹ ದೇವತೆಗಳನ್ನು ಪ್ರಾರ್ಥಿಸುವುದು ಅನಿವಾರ್ಯ. ಪತಿ, ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದ್ದು, ಯಾರಾದರೂ ಒಬ್ಬರು ಮೌನ ತಾಳುವುದು ಒಳ್ಳೆಯದು.
ಸಿಂಹ ರಾಶಿ:ಜಗದ ರೀತಿಯನ್ನು ಬದಲಾಯಿಸಲು ಆಗುವುದಿಲ್ಲಎಂಬ ಸತ್ಯವನ್ನು ಅರಿಯುವಿರಿ. ಜನಾರ್ದನನನ್ನು ಮೆಚ್ಚಿಸಬಹುದು, ಆದರೆ ಜನರನ್ನು ಮೆಚ್ಚಿಸಲು ಆಗುವುದಿಲ್ಲ. ಅಂತೆಯೇ ಜನರನ್ನು ಮೆಚ್ಚಿಸುವಂತಹ ಕಾರ್ಯಗಳನ್ನು ಸದ್ಯಕ್ಕೆ ಮುಂದೆ ಹಾಕಿ.
ಕನ್ಯಾ ರಾಶಿ:ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬ ಸತ್ಯದ ಪರವಾಗಿ ಮಾತನಾಡಲು ಹಿಂಜರಿಯಬೇಡಿ. ಮಾತಿನ ಶಕ್ತಿಯನ್ನು ವೃದ್ಧಿಸಿಕೊಳ್ಳಿ. ಇದರಿಂದ ಅನೇಕ ಸಮಸ್ಯೆಗಳಿಂದ ದೂರವಾಗಬಹುದು. ವಿಷ್ಣಸಹಸ್ರನಾಮವನ್ನು ಪಾರಾಯಣ ಮಾಡಿ.
ತುಲಾ ರಾಶಿ:ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ನಿಮ್ಮಿಂದ ದೂರ ಇರುವ ವ್ಯಕ್ತಿಗಳು ಬಹುಸುಖವಾಗಿರುವರು ಎಂದು ಭಾವಿಸುವಿರಿ. ಆದರೆ ನೈಜ ಜೀವನದಲ್ಲಿಅವರು ನಿಮಗಿಂತಲೂ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವರು. ಹಾಗಾಗಿ ನಿಮ್ಮ ಕಷ್ಟ ನಗಣ್ಯವಾದದು.
ವೃಶ್ಚಿಕ ರಾಶಿ:ಅಧಿಕವಾದ ಬಂಡವಾಳವನ್ನು ತೊಡಗಿಸಲು ಶತಪ್ರಯತ್ನ ನಡೆಸುತ್ತಿರುವಿರಿ. ಆದರೆ ಯಾವುದಕ್ಕೂ ಮಿತಿ ಇರಲಿ. ಮಾಯಾಕಾರಕ ರಾಹುವಿನ ಮಾಯೆಯನ್ನು ಅರಿಯುವುದು ಅಷ್ಟು ಸುಲಭವಲ್ಲ. ಹಾಗಾಗಿ ಯೋಚಿಸಿ ಬಂಡವಾಳ ಹೂಡುವುದು ಒಳ್ಳೆಯದು.
ಧನುಸ್ಸು ರಾಶಿ:ಕಾಡುವ ಜನರನ್ನು ನಿರ್ಲಕ್ಷಿಸಿ. ಕೆಲವು ಜನರನ್ನು ದೂರದಿಂದಲೇ ಕೈಮುಗಿದು ಸಾಗಹಾಕುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಇಲ್ಲದ ಉಸಾಬರಿಯನ್ನು ಮೈಮೇಲೆ ಎಳೆದುಕೊಂಡಂತೆ ಆಗುವುದು.
ಮಕರ ರಾಶಿ:ಜನ್ಮಶನಿಯು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುತ್ತಿರುವನು. ಶ್ರೀರಾಮಚಂದ್ರನನ್ನು ಅನನ್ಯವಾಗಿ ಆರಾಧಿಸಿ. ಬಡವರಿಗೆ ಆಹಾರ ನೀಡಿ. ಹಣಕಾಸಿನ ವಿಷಯದಲ್ಲಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ.
ಕುಂಭ ರಾಶಿ:ಹೊಸ ಕೆಲಸ ಸಿಗಬಹುದೆಂಬ ಕಾರಣಕ್ಕೆ ಎಲ್ಲವೂ ಬದಲಾಗದು. ಮಾಡುವ ಕೆಲಸಕ್ಕೆ ಹೊಸ ಜವಾಬ್ದಾರಿ ಅಂಟಿಕೊಳ್ಳುವುದು. ಆದರೆ ವರಮಾನ ಅಭಿವೃದ್ಧಿಗೆ ಇದು ಪೂರಕವಾಗುವುದು. ಇಷ್ಟದೇವರನ್ನು ಮನಸಾ ಭಜಿಸಿ.
ಜನ್ಮರಾಶಿಗೆ ತಕ್ಕಂತೆ ಯಾವ ಬಣ್ಣದ ವಾಹನ ಖರೀದಿಸಬೇಕು ಗೊತ್ತಾ? ಇಲ್ಲಿದೆ ಮಾಹಿತಿ..
ಮೀನ ರಾಶಿ:ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಒಳಿತಾಗುವುದು. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು. ಹಿರಿಯರ ಮಾರ್ಗದರ್ಶನದಂತೆ ನಡೆಯುವಿರಿ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…