​ಸಿಂಹ ರಾಶಿಯವರೇ ಅಡೆತಡೆಗಳು ಬರುವ ಸಾಧ್ಯತೆ ಹೆಚ್ಚು ; ನೋಡಿ ಇಂದಿನ ರಾಶಿ ಭವಿಷ್ಯ : ಶ್ರೀ ಗಣಪತಿ ಭಟ್ 8088827292 -Vishwanews24

 ಮಾರ್ಚ್‌ 7, ಶನಿವಾರದ ರಾಶಿಫಲ.
​

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮೇಷ ರಾಶಿ

ಮೇಷ ರಾಶಿಯವರು ಈ ದಿನ ಮಿಶ್ರಫಲವನ್ನು ಪಡೆಯುವರು. ಕಷ್ಟ, ಸುಖ, ದುಃಖಗಳನ್ನು ಸಮತೋಲನವಾಗಿ ಸಾಗಿಸುವಂತಹ ದಿನವಿದು. ಪ್ರಯತ್ನ ಮಾಡಿ ಗೆಲ್ಲುವುದನ್ನು ಮುಂದುವರೆಸಿರಿ. ನಿಮ್ಮ ಇಷ್ಟಬಂಧು ಮಿತ್ರರು ನಿಮಗೆ ಈ ಬಗ್ಗೆ ಸಹಕಾರವನ್ನು ನೀಡುವರು. ಮತ್ತೊಬ್ಬರ ವ್ಯಾಜ್ಯ ಬಗೆಹರಿಸಲು ಮಧ್ಯವರ್ತಿಯಾಗಿ ಹೋಗದಿರಿ. ಇದರಿಂದ ನೀವೇ ಅವಮಾನಿತರಾಗಿ ಬರುವ ಸಂದರ್ಭವಿರುತ್ತದೆ. ಈ ದಿನ ನವಗ್ರಹ ಮಂತ್ರವನ್ನು ಹನ್ನೊಂದು ಸಾರಿ ಪಠಿಸಿದರೆ ಒಳ್ಳೆಯದು.

​ವೃಷಭ ರಾಶಿ

ಈ ದಿನ ವೃಥಾ ತಿರುಗಾಟವನ್ನು ಮಾಡುವಿರಿ. ತಿರುಗಾಟದಿಂದ ದೇಹಾಲಸ್ಯವೂ ಉಂಟಾಗಬಹುದು. ನೀವು ಅಂದುಕೊಂಡಿದ್ದ ಕೆಲಸವನ್ನು ಪೂರ್ತಿಗೊಳಿಸಲು ಸಾಧ್ಯವಾಗದಿರಬಹುದು. ನಿಮ್ಮ ವಿಚಾರದಲ್ಲಿ ಜನರ ಪ್ರಶಂಸೆಗಳು ಉತ್ತಮವಾಗಿದ್ದು ಸಂಘಟನಾ ಶಕ್ತಿಯನ್ನು ವೃದ್ಧಿಸಿಕೊಳ್ಳುವಿರಿ. ಮಕ್ಕಳಿಂದ ಬರುವ ವಾರ್ತೆಯು ಮನಸ್ಸಿಗೆ ಮುದ ನೀಡುವುದು. ಸಂಗಾತಿಯ ಸಂಗಡ ಕೋಪ-ತಾಪಗಳನ್ನು ನಿಯಂತ್ರಿಸಿಕೊಂಡಲ್ಲಿ ಒಳಿತಾಗುವುದು. ಈ ದಿನ ನಾಗರ ಕಲ್ಲಿಗೆ ಹಾಲೆರೆದರೆ ಒಳ್ಳೆಯದಾಗುವುದು.

​ಮಿಥುನ ರಾಶಿ

ಹಲವರನ್ನು ಇಂದು ಭೇಟಿಯಾಗಲಿದ್ದಿರಿ. ನಿಮಗೆ ಸಹಾಯ ಮಾಡುವವರು ಯಾರು ಇಲ್ಲವೆ ಬರೀ ಮಾತನಾಡುವವರು ಯಾರು ಎಂದು ಗೊತ್ತಾಗುವುದು. ಹಿರಿಯರೊಬ್ಬರ ಆಶೀರ್ವಾದದಿಂದ ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು. ಈ ದಿನ ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗಬಹುದು. ಮಧ್ಯಾಹ್ನದ ನಂತರ ನೀವು ಅಂದುಕೊಂಡಿರುವ ಕೆಲಸಗಳು ನಡೆಯುವುದು. ಯಶಸನ್ನು ಪಡೆಯುವ ಜೊತೆಗೆ ಮನ್ನಣೆಯನ್ನೂ ಪಡೆಯುವಿರಿ.

​ಕಟಕ ರಾಶಿ

ಅನಿರೀಕ್ಷಿತ ಬೆಳವಣಿಗೆಯೊಂದು ನಿಮಗೆ ಮೇಲ್ನೋಟಕ್ಕೆ ದುಃಖವನ್ನು ತಂದರೂ ಅದು ಹೊಸ ದಾರಿಗಳಿಗೆ ಮಾರ್ಗ ಕೊಡುವುದು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಎಲ್ಲಾ ಕೆಲಸದ ಒತ್ತಡಗಳೂ ನಿಮ್ಮ ಮೇಲೆಯೇ ಬೀಳುವವು. ಪರಮಶಿವನನ್ನು ಧ್ಯಾನಿಸಿರಿ. ಈ ದಿನ ದೀನದಲಿತರಿಗೆ ಇಲ್ಲವೆ ಭಿಕ್ಷುಕರಿಗೆ ಆಹಾರವನ್ನು ನೀಡಿರಿ.

​ಸಿಂಹ ರಾಶಿ

ಈ ದಿನ ನೀವು ಅಂದುಕೊಂಡಿರುವ ಕೆಲಸವನ್ನು ಮಾಡಲು ಸಾಧ್ಯವಾಗದು. ಅಡೆತಡೆಗಳು ಬರುವ ಸಾಧ್ಯತೆ ಹೆಚ್ಚು. ಇರುವ ಸ್ಥಳವನ್ನು ಬಿಟ್ಟು ದೂರ ಹೋಗಿ ಅಥವಾ ದೂರದ ಊರಿನಲ್ಲಿ ಆರಾಮವಾಗಿ ಇದ್ದು ಬಿಡೋಣ ಎನಿಸುವುದು. ಇದರಿಂದ ಇನ್ನು ಹೆಚ್ಚು ಅಪಕೀರ್ತಿಗೆ ಗುರಿಯಾಗುವಿರಿ. ಕಳೆದುಕೊಂಡ ಜಾಗದಲ್ಲಿಯೇ ವಸ್ತುವನ್ನು ಹುಡುಕುವಂತೆ ಇದ್ದ ಜಾಗದಲ್ಲಿಯೇ ಇದ್ದು ಜನರ ಮನ್ನಣೆಯನ್ನು ಗಳಿಸಿರಿ. ಕೆಲಸವು ಸುಗಮವಾಗಿ ಸಾಗಬೇಕೆಂದರೆ ಹನುಮಂತನ ಸ್ಮರಣೆಯನ್ನು ಮಾಡಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಇಂದು ಶುಭದಿನ. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಯನ್ನೂ, ಯಶಸ್ಸನ್ನೂ ಪಡೆಯುವಿರಿ. ನೆರೆಹೊರೆಯವರಿಂದ ಉತ್ತಮವಾದ ಸಲಹೆ ಸೂಚನೆಗಳು ದೊರಕಿ ಕೌಟುಂಬಿಕ ವಿಚಾರದಲ್ಲಿ ನೆಮ್ಮದಿ ಮೂಡುವುದು. ಈ ಹಿಂದೆ ನಿಮ್ಮನ್ನು ದೂರಿದವರೇ ನಿಮ್ಮ ಬಳಿ ಬಂದು ಕ್ಷಮೆಯಾಚಿಸುವ ಪ್ರಸಂಗ ಎದುರಾಗುವುದು. ಈ ದಿನ ಕಿರು ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆ ಇರುವುದು. ಈ ದಿನ ಆಂಜನೇಯನ ಸ್ಮರಣೆ ಮಾಡಿ.

​ತುಲಾ ರಾಶಿ

ಕೆಲಸದ ಒತ್ತಡವನ್ನು ಸಂತೋಷವಾಗಿ ಅನುಭವಿಸುವಿರಿ. ದಿಢೀರನೆ ಕಾರ್ಯ ಒಂದನ್ನು ಪೂರೈಸಬಹುದು ಎಂದು ಮನಸ್ಸಿನಲ್ಲಿ ಲೆಕ್ಕ ಹಾಕುವಿರಿ. ಆದರೆ ಈ ದಿನ ಆ ಕಾರ್ಯವನ್ನು ಪೂರೈಸಲು ಆಗುವುದಿಲ್ಲ. ವ್ಯಾಪಾರಸ್ಥರಿಗೆ, ವ್ಯವಹಾರಸ್ಥರಿಗೆ ಇಂದು ಒಳ್ಳೆಯ ದಿನವಾಗಿದೆ. ಪರಿಹಾರಕ್ಕಾಗಿ ವಿಷ್ಣುಸಹಸ್ರನಾಮವನ್ನು ಪಾರಾಯಣ ಮಾಡಿರಿ. ಸಾಧ್ಯವಾದರೆ ಆಂಜನೇಯ ದೇವಾಲಯದಲ್ಲಿ ಅರ್ಚನೆ ಮಾಡಿಸಿರಿ.

​ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ಜನಿಸಿರುವವರು ಈ ದಿನ ಮಿಶ್ರಫಲವನ್ನು ಅನುಭವಿಸುವಿರಿ. ಎಚ್ಚರದಿಂದ ಮಾತನಾಡಿ ಬರಬೇಕಾದ ಹಣ ಶೀಘ್ರದಲ್ಲಿಯೇ ಮರಳುವ ಸಾಧ್ಯತೆ ಇರುತ್ತದೆ. ಗುರು ಜನರ ಆಶೀರ್ವಾದವೂ ದೊರೆಯುವುದು. ಸಹೋದರ ಸಂಗಡ ಉತ್ತಮ ಬಾಂಧವ್ಯ ಏರ್ಪಡುವುದು. ಈ ದಿನ ಸುಬ್ರಹ್ಮಣ್ಯನ ಆರಾಧನೆ ಮಾಡಿದರೆ ಒಳ್ಳೆಯದು.

ಧನಸ್ಸು ರಾಶಿ

ಧನುಸ್ಸು ರಾಶಿಯಲ್ಲಿ ಜನಿಸಿದವರು ಹಣದ ವಿಚಾರವಾಗಿ ಗಮನ ಹರಿಸುವುದು ಒಳ್ಳೆಯದು. ಧನನಷ್ಟವಾಗದಂತೆ ಎಚ್ಚರಿಕೆ ವಹಿಸಿ. ಖರ್ಚಿನ ಯಾದಿ ಉದ್ದ ಬೆಳೆಯದಂತೆ ಜಾಣತನದಿಂದ ಹೆಜ್ಜೆ ಇಡಿರಿ. ಗುರುವಿನ ಮಂತ್ರವನ್ನು ಮನಸಾ ಭಜಿಸಿರಿ. ಮಾತಿನ ಮೂಲಕ ಸುತ್ತಲಿನ ಪರಿಸರವನ್ನು ಹಾಳುಮಾಡಿಕೊಳ್ಳದಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ವಾಹನ ಚಲಾಯಿಸುವಾಗ ಜಾಗರೂಕತೆ ವಹಿಸಿ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯಲು ವಿಘ್ನೇಶ್ವರನ ಆರಾಧನೆ ಮಾಡಿ.

ಮಕರ ರಾಶಿ

ಬಣ್ಣದ ಮಾತುಗಳನ್ನು ಆಡಿ ನಿಮ್ಮನ್ನು ಮೋಸಗೊಳಿಸುವ ಸಾಧ್ಯತೆ ಇರುವುದು. ಹಾಗಾಗಿ ಯಾರಾದರೂ ತಮಗೆ ಲಾಟರಿಯಲ್ಲಿ ಹಣ ಬಂದಿದೆ ಎಂದು ಹೇಳಿದರೆ ಅವರ ಮಾತನ್ನು ನಯವಾಗಿ ತಿರಸ್ಕರಿಸಿರಿ. ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ಈ ದಿನ ಮಹಾಲಕ್ಷ್ಮೀಯ ಆರಾಧನೆಯನ್ನು ಮಾಡಿ.

​ಕುಂಭ ರಾಶಿ

ಕುಂಭ ರಾಶಿಯವರಿಗೆ ಅತ್ಯಂತ ಶುಭದಾಯಕವಾದ ದಿನವಾಗಿದೆ. ಈ ದಿನ ನಿರೀಕ್ಷಿತ ಫಲವನ್ನು ಕಾಣುವಿರಿ. ಯಾವುದನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರಿ. ನಿಮ್ಮ ಪ್ರತಿಭೆಗೆ ತಕ್ಕಂತೆ ಉದ್ಯೋಗ ದೊರೆಯುವುದು. ಮನುಜನ ಮೇಲೆ ವಿಶ್ವಾಸವಿರುವ ಬದಲು ದೇವನಲ್ಲಿ ವಿಶ್ವಾಸವಿಡಿ, ಒಳಿತಾಗುವುದು. ಕುಂಭ ರಾಶಿಯಲ್ಲಿ ಜನಿಸಿದವರು ಈಶ್ವರನ ಸ್ಮರಣೆ ಮಾಡಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ಮೀನ ರಾಶಿ

ನಿಮ್ಮದು ಮೃದು ಸ್ವಭಾವ. ಗಲಾಟೆ ಎಬ್ಬಿಸಿ ಹಣ ಎತ್ತಲು ಧೂರ್ತರು ಸಂಚು ಮಾಡುವರು. ಈ ಬಗ್ಗೆ ಎಚ್ಚರದಿಂದ ಇರಿ. ಕಚೇರಿಗೆ ಸಂಬಂಧಪಟ್ಟಂತಹ ಕಾಗದ ಪತ್ರಗಳಿಗೆ ಸಹಿ ಹಾಕುವಾಗ ಎರಡೆರಡು ಬಾರಿ ಓದಿ ಪತ್ರಕ್ಕೆ ಸಹಿ ಹಾಕಿರಿ. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕಾಣುವಿರಿ. ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯನ್ನೂ ಪಡೆಯುವಿರಿ.

Vishwa News 24

Recent Posts

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಓರ್ವನ ಮೃತದೇಹ ಪತ್ತೆ -vishwanews24

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನದ…

10 hours ago

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ: ಪೊಲೀಸ್ ಕಮಿಷನರ್ -vishwanews24

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…

16 hours ago

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  -vishwanews24

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…

17 hours ago

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…

17 hours ago

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

19 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

19 hours ago