ಮೇಷ : ಹಳೆಯ ಸಾಲಗಳು ತೀರುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ನೀಗಲಿದೆ. ನಿಮ್ಮ ಪ್ರೇಮ ಪ್ರಕರಣವನ್ನು ಎಲ್ಲರ ಎದುರು ಸಾರಬೇಡಿ. ಮುಂದೆ ಇದು ನಿಮಗೆ ಮಾರಕ ಎನಿಸಲಿದೆ.
ವೃಷಭ : ಇಂದು ಸಹೋದ್ಯೋಗಿಗಳ ಜೊತೆ ಮೋಜು ಮಸ್ತಿ ಮಾಡಲಿದ್ದೀರಿ. ಇದರಿಂದ ನಿಮ್ಮ ಸಮಯ ವ್ಯರ್ಥವಾಗಲಿದೆ. ವೈವಾಹಿಕ ಜೀವನದಲ್ಲಿ ಅಡ್ಡಿ ಆತಂಕಗಳು ಎದುರಾಗಲಿವೆ.
ಮಿಥುನ: ಇಂದು ನಿಮಗೆ ಆರೋಗ್ಯ ಕೈ ಕೊಡುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಇನ್ನಷ್ಟು ಕಾಡಲಿದೆ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.
ಕಟಕ : ಇಂದು ನೀವು ಆಧ್ಯಾತ್ಮಿಕ ಜೀವನದತ್ತ ಹೆಚ್ಚು ವಾಲುವ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಮುಂದೆ ಅನೇಕ ಬೇಡಿಕೆಗಳನ್ನು ಇಡುವ ಸಾಧ್ಯತೆ ಇದೆ. ಆದಷ್ಟು ಹಣವನ್ನು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ರೂಢಿಸಿಕೊಳ್ಳಿ.
ಸಿಂಹ : ನಿಮ್ಮ ವೈಯಕ್ತಿಕ ವಿಚಾರಗಳನ್ನು ತೀರಾ ಇನ್ನೊಬ್ಬರ ಎದುರು ಹೇಳಿಕೊಳ್ಳಬೇಡಿ. ಪ್ರವಾಸ ಕೈಗೊಳ್ಳುವುದರಿಂದ ನಿಮಗೆ ನಿರಾಳ ಎನಿಸಲಿದೆ. ಸಣ್ಣ ಸಣ್ಣ ವಿಷಯಕ್ಕೆ ಸಂಗಾತಿಯನ್ನು ಟೀಕೆ ಮಾಡಬೇಡಿ.
ಕನ್ಯಾ : ಕಚೇರಿಯಲ್ಲಿ ಯಾರನ್ನೋ ಮೆಚ್ಚಿಸಲು ಕೆಲಸ ಮಾಡಲು ಹೋಗಬೇಡಿ. ನಿಮ್ಮ ಬುದ್ಧಿ ಶಕ್ತಿಯಿಂದ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತ ಕೆಲಸಗಳನ್ನು ಮಾಡಿ. ಸಂಗಾತಿಯು ದೂರ ಇರುವುದರಿಂದ ಒಂಟಿತನ ನಿಮ್ಮನ್ನು ಇಂದು ತುಸು ಹೆಚ್ಚೇ ಕಾಡಲಿದೆ.
ತುಲಾ : ಅತಿಯಾದ ಕೋಪ ಸಂಗಾತಿಯ ಜೊತೆ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಲಿದೆ. ಹಣಕಾಸಿನ ಸಂಕಷ್ಟವು ತಪ್ಪಿದ್ದಲ್ಲ. ಖರ್ಚಿನ ವಿಚಾರದಲ್ಲಿ ಉದಾರ ಬುದ್ಧಿಯನ್ನು ಬಿಟ್ಟಲ್ಲಿ ನಿಮಗೇ ಒಳ್ಳೆಯದು.
ವೃಶ್ಚಿಕ : ಬಹಳ ದಿನಗಳಿಂದ ನೆನೆಗುದಿಗೆ ಬಿದ್ದ ಕಾರ್ಯವು ಇಂದು ಪೂರ್ಣಗೊಳ್ಳಲಿದೆ. ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ನಿಮ್ಮನ್ನು ತಲುಪಲಿದೆ. ಕಚೇರಿ ಕೆಲಸದ ನಿಮಿತ್ತ ಪ್ರವಾಸ ಕೈಗೊಳ್ಳುವಿರಿ.
ಧನು : ನಿಮ್ಮ ಸಂಗಾತಿಯು ಇಂದು ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆಯನ್ನೇ ಮಾಡಲಿದ್ದಾರೆ. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ.
ಮಕರ : ಇಂದು ನೀವು ರಾಜಕೀಯ ವ್ಯಕ್ತಿಗಳನ್ನು ಮೊದಲ ಬಾರಿಗೆ ಭೇಟಿ ಮಾಡೋದ್ರಿಂದ ನಿಮ್ಮಲ್ಲಿ ಕೊಂಚ ಅಳುಕಂತೂ ಇರಲಿದೆ. ತೀರಾ ಗಾಬರಿಯಾಗುವ ಅಗತ್ಯವಿಲ್ಲ.
ಕುಂಭ : ತಂದೆಯ ಸಲಹೆಯು ನಿಮ್ಮನ್ನು ಬಹುದೊಡ್ಡ ನಷ್ಟದಿಂದ ಕಾಪಾಡಲಿದೆ. ಹೊಸ ಸ್ನೇಹಿತರು ಇಂದು ನಿಮ್ಮನ್ನು ಭೇಟಿಯಾಗಲಿದ್ದಾರೆ. .
ಮೀನ : ಮಕ್ಕಳ ಶಿಕ್ಷಣದ ದೃಷ್ಟಿಯಿಂದ ದೊಡ್ಡ ಮೊತ್ತದ ಹಣವನ್ನು ಹೊಂದಿಸಬೇಕಾಗಿ ಬರುತ್ತದೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ.
ವಿಟ್ಲ: ಕಾರು ಮತ್ತು ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಮೃತ್ಯು ವಿಟ್ಲ: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ…
ಉಡುಪಿ: ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ; ಸೆ.5ರಂದು ವಿಟ್ಲಪಿಂಡಿ ಉತ್ಸವ ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಶಿರೂರು ಮಠದ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ…
ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ : ನಿತಿನ್ ಗಡ್ಕರಿ ಮುಂಬೈ: ಈ ಹಿಂದೆ ಮಾಡುತ್ತಿದ್ದಷ್ಟು ಕೆಲಸವನ್ನು ಇನ್ನು…
ಹಬ್ಬಗಳ ಹಿನ್ನೆಲೆ : ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ರಾತ್ರಿ 11:30 ಗಂಟೆಯ ನಂತರ ಮೆರವಣಿಗೆ ,…
ಸೆ. 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು : ರಾಜ್ಯ ಸರ್ಕಾರದ…