ಉಡುಪಿ

100 ಕೋಟಿ ವೆಚ್ಚದಲ್ಲಿ ಕಾರ್ಕಳದಲ್ಲಿ ರಿಂಗ್‍ ರೋಡ್

ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುತ್ತಿರುವ ಕಾರ್ಕಳ ಪೇಟೆಯಲ್ಲಿ ವಾಹನ ದಟ್ಟಣಿ ನಿವಾರಿಸಲು ರಿಂಗ್‍ರೋಡ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ 100ಕೋಟಿ ರೂ. ಪ್ರಸ್ತಾವನೆಗೆ ಬಜೆಟ್‍ನಲ್ಲಿ ತಾತ್ವಿಕ ಒಪ್ಪಿಗೆ ಸಿಕ್ಕಿದೆ ಎಂದು ಶಾಸಕ ಹಾಗೂ ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ ವಿ. ಸುನೀಲ್ ಕುಮಾರ್ ಹೇಳಿದರು.
ಕಾರ್ಕಳ ನಗರದಲ್ಲಿ ಜನ ಹಾಗೂ ವಾಹನ ದಟ್ಟಣೆ ದಿನೇ ದಿನೇ ಏರಿಕೆಯಾಗುತ್ತಿದೆ. ಬಹಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಕಾರ್ಕಳಕ್ಕೆ ಬರುತ್ತಾರೆ ಮತ್ತು ಕಾರ್ಕಳ ಮುಖಾಂತರ ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹಾದು ಹೋಗುತ್ತಾರೆ. ಈ ಎಲ್ಲಾ ಪರಿಸ್ಥಿತಿಗಳನ್ನು ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ಅಭಿವೃದ್ಧಿಯ ನಿಟ್ಟಿನಲ್ಲಿ ರಿಂಗ್‍ರೋಡ್‍ನ ಪ್ರಸ್ತಾವನೆಯನ್ನಿರಿಸಿದ್ದೆವು. ಕಾರ್ಕಳಕ್ಕೆ ಪ್ರತ್ಯೇಕ ರಿಂಗ್‍ರೋಡ್ ಅವಶ್ಯಕತೆ ಇದೆ. ಜೋಡುರಸ್ತೆಯಿಂದ ಪೆರ್ವಜೆಯಾಗಿ, ಕೋಟಿ ಚೆನ್ನಯ ಥೀಂ ಪಾರ್ಕ್ ಮೂಲಕ ಮಿಯ್ಯಾರು ಸಂಪರ್ಕದ ದ್ವಿಪದ ರಸ್ತೆ ನಿರ್ಮಾಣ ಈ ಯೋಜನೆಯಲ್ಲಿದೆ. ಇದು 10ಕಿ.ಮೀ ಉದ್ದದ ರಸ್ತೆಯಾಗಿದ್ದು, ಶೀಘ್ರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ವಿಕಾಸ ಕಛೇರಿಯಲ್ಲಿ ಸೋಮವಾರ ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಕಾರ್ಕಳದಲ್ಲಿ ಸುಸಜ್ಜಿತ ಲೈಬ್ರೆರಿ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಈ ಲೈಬ್ರೆರಿ ನಿರ್ಮಾಣಗೊಳ್ಳುತ್ತಿದ್ದು, ಒಂದೇ ಕಟ್ಟಡದ ಅಡಿ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಮೆಡಿಕಲ್ ವಿದ್ಯಾರ್ಥಿಗಳ ತನಕ ಪುಸ್ತಕಗಳು ಹಾಗೂ ಮಾಹಿತಿಗಳು ಈ ಲೈಬ್ರೆರಿಯಲ್ಲಿ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ವಿಧಾನಸಭಾ ಆಭ್ಯರ್ಥಿಯ ಟೀಕೆಟುಗಳು ಮಾರಾಟವಾಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಪರೋಕ್ಷವಾಗಿ ಹೇಳಿದ್ದಾರೆ. ಕಾಂಗ್ರೇಸ್‍ನ ಟಿಕೇಟ್ ಮಾರಾಟಕ್ಕಿರಬಹುದು, ನಮ್ಮ ಚುನಾವಣಾ ವಿಚಾರ ಅಭಿವೃದ್ಧಿ ಮಾತ್ರ. ಜಾತಿ, ಹಣ, ಅಪಪ್ರಚಾರ ಇವೆಲ್ಲವನ್ನೂ ಮೀರಿ ನಿಲ್ಲುವ ಶಕ್ತಿ ಕ್ಷೇತ್ರದ ಮತದಾರರಿಗಿದೆ. ಕಾಂಗ್ರೇಸ್‍ನಲ್ಲಿ ಯಾರೇ ಅಭ್ಯರ್ಥಿಯಾದರೂ ಸ್ವಾಗತ ಎಂದರು.

Vishwa News 24

Recent Posts

ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ – vishwanews24

ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ ಉಡುಪಿ:…

31 seconds ago

ಬೆಳ್ತಂಗಡಿ:  ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ – vishwanews24

ಬೆಳ್ತಂಗಡಿ:  ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಂಗಳೂರು: ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮನೆ…

9 minutes ago

ಉಡುಪಿ : ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ – vishwanews24

ಉಡುಪಿ : ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಆಹ್ವಾನ ಉಡುಪಿ : ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ…

19 minutes ago

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ -vishwanews24

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…

13 hours ago

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

18 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

19 hours ago