ಉಡುಪಿ

ಕಾಪು ಕ್ಷೇತ್ರದಲ್ಲಿ ಚರುಕು ಗೊಂಡ ಜೆಡಿಎಸ್ ಮತಬೇಟೆ, ಸೊರಕೆಯ ಕಾಮಗಾರಿ ಕೇವಲ ಕಮೀಷನ್ ಕಾಮಗಾರಿಯೆಂದು ಆರೋಪ ಮಾಡಿದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ.

ಕಾಪು : ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟೀಯ ಪಕ್ಷಗಳ ಹವಾ ಜೋರಾಗುತ್ತಿದ್ದಂತೆ, ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತದಳದ ಮತಬೇಟೆಯು ಜೋರಾಗಿಯೇ ಶುರುವಾಗಿದೆ. ಕುಂದಾಪುರ ಮೂಲದ ಮನ್ಸೂರ್ ಇಬ್ರಾಹಿಂ ಕಾಪುವಿನ ಜೆಡಿಎಸ್ ಅಭ್ಯರ್ಥಿಯಾಗಿದ್ದು ನಾಮ ಪತ್ರ ಸಲ್ಲಿಸಿದ ದಿನದಿಂದಲೇ ಪ್ರಚಾರ ಕಾರ್ಯ ಶುರುಮಾಡಿದ್ದಾರೆ. ಕಾಪುವಿನಲ್ಲಿ ಮತಯಾಚನೇ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ” ರಾಜ್ಯದಲ್ಲಿ ನಡೆಯುತ್ತಿರುವ ಅನಚಾರ ಜಾಸ್ತಿಯಾಗುತ್ತಿದೆ ಇದರಿಂದ ಜನ ಬೇಸತ್ತು ಕುಮಾರ ಸ್ವಾಮಿಯ ಸರ್ಕಾರವನ್ನ ಬಯಸುತ್ತಿದ್ದಾರೆ ಹಾಗಾಗಿ ಈ ಸಲ ಮಾತ್ರ ರಾಜ್ಯದಲ್ಲಿ ಸೇರಿದಂತೆ ಕಾಪುವಿನಲ್ಲಿ ಕೂಡ ಜೆಡಿಎಸ್ ತನ್ನ ಗದ್ದುಗೆಯನ್ನ ಗಟ್ಟಿ ಮಾಡಿಕೊಳ್ಳಲಿದೆ ಎಂದರು. ಕಾಪುವಿನ ಅಭಿವೃದ್ದಿ ಕೇವಲ ಜಾಹಿರಾತು ಮತ್ತು ಪ್ರಚಾರದಲ್ಲಿ ಸೀಮಿತವಾಗಿದೆ, ಸೊರಕೆಯ ಯಾವುದೇ ಕಾಮಗಾರಿ ನಡೆದರೂ ಕೂಡ ಅದು ಕಮಿಷನ್ ಆಧಾರವಾಗಿರುತ್ತೆ ಬಿಟ್ರೇ ಜನರ ಉಪಯೋಗಕ್ಕೆ ಖಂಡಿತ ಅಲ್ಲ, ಪ್ರವಾಸೋದ್ಯಮ ಕೇಂದ್ರವಾಗಿರುವ ಕಾಪುವಿನ ಅಭಿವೃದ್ದಿ ಏನೆಂದು ಜನ ತಿರ್ಮಾನಿಸಲಿದ್ದಾರೆ ಹಾಗೂ ಸರಿಯಾದ ಹೆಜಮಾಡಿ ಬಂದರು ನಿರ್ಮಾಣವಾಗಿಲ್ಲ, ಯಾವುದೇ ಒಬ್ಬನಿಗೆ ಒಂದು ಉದ್ಯೋಗ ಸೃಷ್ಟಿಸುವ ಕಾರ್ಯ ಸೊರಕೆ ಮಾಡಿಲ್ಲ. ಕೇವಲ ರಸ್ತೆ ಮಾಡಿದರೇ ಅದು ಅಭಿವೃದ್ದಿ ಎನ್ನಲು ಸಾದ್ಯವೇ ಎಂದು ಪ್ರಶ್ನಿಸಿದರು. ಕಾಪು ಕ್ಷೇತ್ರದ ಕಟಪಾಡಿ, ಸುಭಾಸ್ ನಗರ, ಅಚ್ಚಡ ಸೇರಿದಂತೆ ವಿವಿಧಡೆಯಲ್ಲಿ ಮತ ಪ್ರಚಾರ ಆರಂಭಿಸಿ ಸುಮಾರು ನೂರಕ್ಕೂ ಅಧಿಕ ಬಿಜೆಪಿ ಕಾಂಗ್ರೇಸ್ ಕಾರ್ಯಕರ್ತರನ್ನ ಜೆಡಿಎಸ್ ಗೆ ಸೇರ್ಪಡೆಗೊಳಿಸಲಾಯಿತು.

 

ಈ ಸಂಧರ್ಭ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಕಾರ್ಯಧ್ಯಕ್ಷ ವಾಸುದೇವ್ ರಾವ್, ಶಾಲಿನಿ ಶೆಟ್ಟಿ,ಉದಯ್ ಹೆಗ್ಡೆ, ಹುಸೇನ್ ಹೈಕಾಡಿ, ಮಕ್ದ್ ಮ್ ಇಸ್ಮಾಯಿಲ್ ಸೇರಿದಂತೆ ಹಲವಾರು ಮುಖಂಡರು ಜೊತೆಗಿದ್ದರು.

Vishwa News 24

Recent Posts

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

5 minutes ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

35 minutes ago

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…

45 minutes ago

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ – vishwanews24

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…

1 hour ago

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

1 hour ago

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ- vishwanews24

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಶಬರಿಮಲೆ  ಯಾತ್ರೆ ಕೈಗೊಂಡಿದ್ದಾರೆ.…

2 hours ago