Featured

1250 ಮಂದಿಗೆ ಆಟಿ ಕಷಾಯ ವಿತರಿಸಿದ ಮೂಳೂರು ಹಿಂದೂ ರಕ್ಷಾ ವೆಲ್‍ಫೇರ್ ಟ್ರಸ್ಟ್‍ನ ಸದಸ್ಯರು.

1250 ಮಂದಿಗೆ ಆಟಿ ಕಷಾಯ ವಿತರಿಸಿದ ಮೂಳೂರು ಹಿಂದೂ ರಕ್ಷಾ ವೆಲ್‍ಫೇರ್ ಟ್ರಸ್ಟ್‍ನ ಸದಸ್ಯರು.

ಕಾಪು: ಮೂಳೂರು ಹಿಂದೂ ರಕ್ಷಾ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಆಟಿ ಅಮಾವಾಸ್ಯೆಯ ಪ್ರಯುಕ್ತ ಹಾಲೇಯ ಮರದ ತೊಗಟೆಯ ಕಷಾಯವನ್ನು ಸಿದ್ಧಪಡಿಸಿ ಉಚಿತವಾಗಿ ಸುಮಾರು 1250 ಅಧಿಕ ಮಂದಿ ಸಾರ್ವಜನಿಕರಿಗೆ ವಿತರಿಸಲಾಯಿತು.
ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ಪಡುವಿನ ಹಳೆ ಭಜನಾ ಮಂದಿರ ಮತ್ತು ಮೂಳೂರು ಮಹಾಲಕ್ಷ್ಮೀ ನಗರ ಸೇರಿದಂತೆ ಎರಡು ಭಾಗದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಈ ಕಷಾಯ ವಿತರಣೆಯನ್ನು ಆರಂಭಿಸಲಾಗಿತ್ತು.

ಸರ್ವ ಧರ್ಮಿಯರು ಸಹಿತ ಸಾವಿರಕ್ಕೂ ಅಧಿಕ ಮಂದಿ ದೂರದ ಊರುಗಳಿಂದಲೂ ಆಗಮಿಸಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಹಾಲೆಮರದ ತೊಗಟೆಯಿಂದ ತಯಾರಿಸಿದ ಮದ್ದನ್ನು ಪಡೆದುಕೊಂಡರು.

ಮಾಧ್ಯಮದವರೊಂದಿಗೆ ಮಾತಾಡಿದ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ.ಪಿ ಆರೋಗ್ಯದ ದೃಷ್ಟಿಯಿಂದ ಆಟಿ ಕಷಾಯಕ್ಕೆ ವೈಜ್ಞಾನಿಕ ಮತ್ತು ಆಯುರ್ವೇದ ಶಾಸ್ತ್ರದಲ್ಲಿ ಆಟಿ ಕಷಾಯಕ್ಕೆ ವಿಶೇಷವಾದ ಮಹತ್ವವಿದೆ. ಹಳ್ಳಿಗಾಡಿನ ಪ್ರದೇಶಗಳು ನಗರ ಪ್ರದೇಶವಾಗಿ ಬದಲಾಗುತ್ತಿದೆ ಮಾತ್ರವಲ್ಲದೆ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ವಿಂಗಡನೆಯಾಗಿ ಆಟಿ ಕಷಾಯ ತಯಾರಿಸುವ ಮಾಹಿತಿಯೂ ಕೆಲವರಿಗಿಲ್ಲ ಮತ್ತು ಹಾಲೆ ಮರದ ಪರಿಚಯವೂ ಈಗಿನ ಯುವಪೀಳಿಗೆಗೆ ಇಲ್ಲ, ಆದರೆ ಆಟಿ ಕಷಾಯ ಕುಡಿಯಬೇಕೆಂಬ ಹಂಬಲ ಇದೆ ಆ ದೃಷ್ಟಿಯಿಂದ ತುಳುನಾಡಿನ ನಾಡು ನುಡಿ ಸಂಸ್ಕøತಿ ಉಳಿಸಿ ಜನರ ಆರೋಗ್ಯದ ದೃಷ್ಟಿಯಿಂದ ಸತತ ನಾಲ್ಕು ವರ್ಷದಿಂದ ಈ ಸೇವೆಯನ್ನ ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ವತಿಯಿಂದ ಮಾಡಿಕೊಂಡು ಬರುತ್ತಿದ್ದೇವೆ ಇದರಿಂದ ನೂರಾರು ಕುಟುಂಬಗಳಿಗೆ ಇದು ಸಹಕಾರಿಯಾಗಿದೆ ಎಂದರು.

ದೂರದ ಪಡುಬಿದ್ರೆ, ಕಾಪು ಏರ್ಮಾಳು, ಕೈಪುಂಜಾಲು ಭಾಗದಿಂದ ಕೂಡ ಯಾವುದೇ ಮತಧರ್ಮಗಳ ಭೇದವಿಲ್ಲದೆ ಬಂದು ಕಷಾಯವನ್ನು ಪಡೆದುಕೊಂಡರು.ಕಷಾಯವನ್ನು ಓಂ ಕೆಟರಸ್ ಮಾಲಕ ಸಂಜೀವ ಆರ್ ಅಮೀನ್ ಅವರ ಸಹಕಾರದಿಂದ ಸಿದ್ದಪಡಿಸಲಾಗಿದೆ.

ಈ ಸಂದರ್ಭ ಟ್ರಸ್ಟ್‍ನ ಅಧ್ಯಕ್ಷ ಚಂದ್ರಕಾಂತ್ ಕೆ ಮೆಂಡನ್.ಪ್ರದೀಪ್ ಎಸ್ ಪುತ್ರನ್,ಅಶೋಕ್ ಪುತ್ರನ್.,ದಿನೇಶ್ ಪಾಣಾರ, ಅರುಣ್ ಕುಲಾಲ್,ಮಧುಕಿರಣ್,ಪ್ರತೀಕ್ ಸುವರ್ಣ ಟ್ರಸ್ಟ್ ಸದಸ್ಯರು ಕಷಾಯ ತಯಾರಿ ಹಂಚಿಕೆಯ ಕಾರ್ಯದಲ್ಲಿ ಸಹಕರಿಸಿದರು.

ಬ್ಯೂರೋ ರಿಪೋರ್ಟ್
ವಿಶ್ವನ್ಯೂಸ್24

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago