Featured

14 ಲಕ್ಷ ಬ್ಯಾಗ್‌ ಖರೀದಿಯಲ್ಲಿ ಅಕ್ರಮ: ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಆರೋಪ -Vishwanews24

14 ಲಕ್ಷ ಬ್ಯಾಗ್‌ ಖರೀದಿಯಲ್ಲಿ ಅಕ್ರಮ: ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಆರೋಪ -Vishwanews24

ಮೈಸೂರು: ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಮುಖ್ಯ ಕಾರ್ಯದರ್ಶಿ ಮನೆ ಮುಂದೆ ಶೀಘ್ರದಲ್ಲೇ ಅಮರಣಾಂತ ಧರಣಿ ನಡೆಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.

ಮಾರುಕಟ್ಟೆಯಲ್ಲಿ ₹9ಕ್ಕೆ ಸಿಗುವ ಬಟ್ಟೆ ಬ್ಯಾಗನ್ನು ₹52ಕ್ಕೆ ಖರೀದಿಸಲಾಗಿದೆ. ಈ ರೀತಿ ಒಟ್ಟು ₹14.71 ಲಕ್ಷ ಬ್ಯಾಗನ್ನು ಖರೀದಿಸಿದ್ದು, ಮಾರುಕಟ್ಟೆ ದರ ಇದಕ್ಕೆ ₹1.47 ಕೋಟಿ. ಆದರೆ, ನಿಗದಿ ಖರೀದಿಸಿದ ದರ ₹7.65 ಕೋಟಿ. ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ‌ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು

ಈ ಬ್ಯಾಗ್ ಪೂರೈಕೆ ಮಾಡುವ ಗುತ್ತಿಗೆದಾರ ಮಹಿಳಾ ಅಧಿಕಾರಿಯೊಬ್ಬರ ಪತಿ. ಅವರು ಕರೆ ಮಾಡಿ ಕೊಡುವುದನ್ನೆಲ್ಲ ಕೊಟ್ಟಾಗಿದೆ. ಬಹಳಷ್ಟು ನಷ್ಟವಾಗಿದೆ. ಈಗ ಬಿಲ್ ಮಂಜೂರಾತಿ ದೊರೆಯದೆ ಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೇನೆ ಎಂದು ಅಳಲು ತೋಡಿಕೊಂಡರು. ಸದ್ಯ ಬಿಲ್ ಮಂಜೂರಾಗಿಲ್ಲ. ಜಿಲ್ಲೆಯ ಎಲ್ಲ ಪುರಸಭೆ, ಪಾಲಿಕೆ, ಗ್ರಾಮ ಪಂಚಾಯತಿಗಳಿಗೆ ಬ್ಯಾಗ್‌ಗಳು ಬಂದಿವೆ ಎಂದರು.

ರೋಹಿಣಿ ಸಿಂಧೂರಿಯನ್ನು ವಜಾಗೊಳಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸುವೆ. ಮುಖ್ಯ ಕಾರ್ಯದರ್ಶಿ ಅವರ ಕಚೇರಿ ಮುಂದೆ ಸದ್ಯದಲ್ಲಿಯೇ ಧರಣಿ ನಡೆಸುತ್ತೇನೆ ಎಂದು ಅವರು ಹೇಳಿದರು

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

2 days ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

2 days ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

2 days ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 days ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 days ago